
ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ (Shah Rukh Khan) ಅವರಿಗೆ ಇಂದು (ನವೆಂಬರ್ 2) ಜನ್ಮದಿನ. ಅವರಿಗೆ ಫ್ಯಾನ್ಸ್, ಸೆಲೆಬ್ರಿಟಿಗಳು ವಿಶ್ ತಿಳಿಸುತ್ತಿದ್ದಾರೆ. 1965ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಜ್ ಮೊಹಮ್ಮದ್ ಖಾನ್ ಮತ್ತು ಲತೀಫ್ ಫಾತಿಮಾ ಖಾನ್ ದಂಪತಿಗೆ ಶಾರುಖ್ ಖಾನ್ ಜನಿಸಿದರು. ಅವರು ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಶಾರುಖ್ ಖಾನ್ ತಮ್ಮ ನಟನಾ ವೃತ್ತಿಜೀವನವನ್ನು ಸಣ್ಣ ಪರದೆಯಿಂದ ಪ್ರಾರಂಭಿಸಿದರು. ಆ ಬಳಿಕ ಅವರಿಗೆ ಬಾಲಿವುಡ್‌ನಿಂದ ಆಫರ್‌ಗಳು ಬಂದವು. ಅವರು ತಮ್ಮ ಮೊದಲ ಚಿತ್ರದಿಂದಲೇ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದರು. ಈ ಜನಪ್ರಿಯತೆ ಇಂದಿಗೂ ಮುಂದುವರೆದಿದೆ. ಈ ನಟ ಈಗ ವಿಶ್ವದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಮೊದಲ ಗಳಿಕೆ ನಿಮಗೆ ತಿಳಿದಿದೆಯೇ? ಆ ಬಗ್ಗೆ ಇಲ್ಲಿದೆ ವಿವರ.
ಶಾರುಖ್ ಖಾನ್ ಒಮ್ಮೆ ತಮ್ಮ ಮೊದಲ ಆದಾಯವನ್ನು ಬಹಿರಂಗಪಡಿಸಿದ್ದರು. ದಿವಂಗತ ಗಾಯಕ ಪಂಕಜ್ ಉದಾಸ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕೆಲಸ ಮಾಡುವ ಮೂಲಕ ಗಳಿಸಿದ ಕೇವಲ 50 ರೂಪಾಯಿ ಅವರ ಮೊದಲ ಆದಾಯವಾಗಿತ್ತು. ಈ ರಹಸ್ಯವನ್ನು ನಟ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಪಂಕಜ್ ಉದಾಸ್ ಅವರ ಕಾರ್ಯಕ್ರಮದಲ್ಲಿ ಅವರ ಕೆಲಸವೆಂದರೆ ಜನರ ಟಿಕೆಟ್‌ಗಳನ್ನು ಪರಿಶೀಲಿಸುವುದಾಗಿತ್ತು. ಈ ಹಣದಿಂದ ಶಾರುಖ್ ತಾಜ್ ಮಹಲ್ ನೋಡಲು ಹೋದರು.
ಕೇವಲ 50 ರೂಪಾಯಿ ಆದಾಯ ಹೊಂದಿದ್ದ ವ್ಯಕ್ತಿ ಈಗ ಬಾಲಿವುಡ್ ಮತ್ತು ಭಾರತದ ಅತ್ಯಂತ ಶ್ರೀಮಂತ ನಟ ಮಾತ್ರವಲ್ಲ, ವಿಶ್ವದ ಅತ್ಯಂತ ಶ್ರೀಮಂತ ನಟ ಕೂಡ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹುರುನ್ ರಿಚ್ ಲಿಸ್ಟ್ 2025, ಶಾರುಖ್ ಖಾನ್ ಅವರ ನಿವ್ವಳ ಮೌಲ್ಯ 12,490 ಕೋಟಿ ರೂಪಾಯಿ ಎಂದು ಬಹಿರಂಗಪಡಿಸಿದೆ. ಜಗತ್ತಿನ ಬೇರೆ ಯಾವುದೇ ನಟನ ಬಳಿಯೂ ಇಷ್ಟೊಂದು ನಿವ್ವಳ ಮೌಲ್ಯವಿಲ್ಲ.
ಇದನ್ನೂ ಓದಿ: ಶಾರುಖ್ ಖಾನ್ 60ನೇ ವರ್ಷದ ಹುಟ್ಟುಹಬ್ಬ: ಮನ್ನತ್ ಎದುರು ಜನಸಾಗರ
ಶಾರುಖ್ ಖಾನ್ 1992 ರ ‘ದೀವಾನಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ವೃತ್ತಿಜೀವನದುದ್ದಕ್ಕೂ, ಅವರು ಕರಣ್ ಅರ್ಜುನ್, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಪಠಾಣ್, ಜವಾನ್, ಡಂಕಿ, ದಿಲ್ವಾಲೆ, ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್, ವೀರ್-ಜಾರಾ, ದಿಲ್ ತೋ ಪಾಲ್ ಹೈ, ಕುಚ್ ಕುಚ್ ಹೋತಾ ದಿ ರಾನಾ ಹೇ, ಡರ್, ಬಾಜಿಗರ್, ಜಾನ್, ದೇವ್‌ದಾಸ್ ಸೇರಿದಂತೆ ಹಲವಾರು ಗಮನಾರ್ಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.