ಮತ್ತೆ ಶುರುವಾಯ್ತು ಶಾರ್ಕ್ ಟ್ಯಾಂಕ್, ಈ ಬಾರಿ ಹೊಸ ಉದ್ಯಮಿಗಳು: ಯಾರೀ ಕೊಟ್ಯಧಿಪತಿ?

|

Updated on: Oct 07, 2023 | 4:16 PM

Shark Tank 3: ಹಿಂದಿ ಟಿವಿ ಲೋಕದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ರಿಯಾಲಿಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ'. ಅಮೆರಿಕದಲ್ಲಿ ಶುರುವಾದ ಈ ಶೋ ಅನ್ನು ಭಾರತದ ಮಾದರಿದೆ ತಕ್ಕಂದೆ ಕೆಲವು ಬದಲಾವಣೆಗಳೊಂದಿಗೆ ತರಲಾಗಿದ್ದು, ಈ ಶೋನ ಮೂರನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

ಮತ್ತೆ ಶುರುವಾಯ್ತು ಶಾರ್ಕ್ ಟ್ಯಾಂಕ್, ಈ ಬಾರಿ ಹೊಸ ಉದ್ಯಮಿಗಳು: ಯಾರೀ ಕೊಟ್ಯಧಿಪತಿ?
ಶಾರ್ಕ್ ಟ್ಯಾಂಕ್ 3
Follow us on

ಹಿಂದಿ ಟಿವಿ ಲೋಕದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ರಿಯಾಲಿಟಿ ಶೋ (Realty Show) ‘ಶಾರ್ಕ್ ಟ್ಯಾಂಕ್ ಇಂಡಿಯಾ‘ (Shark Tank India). ಅಮೆರಿಕದಲ್ಲಿ ಶುರುವಾದ ಈ ಶೋ ಅನ್ನು ಭಾರತದ ಮಾದರಿದೆ ತಕ್ಕಂದೆ ಕೆಲವು ಬದಲಾವಣೆಗಳೊಂದಿಗೆ ತರಲಾಗಿದ್ದು, ಈ ಶೋನ ಮೂರನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ರಿಯಾಲಿಟಿ ಶೋನಲ್ಲಿ ನಿಜವಾದ ಜನಪ್ರಿಯ ಉದ್ಯಮಿಗಳು ಬಂದು, ತಮ್ಮ ಸಹಾಯ ಕೇಳಿ ಬರುವ ಯುವ ಉದ್ಯಮಿಗಳ ಐಡಿಯಾ, ಅವರ ಬ್ಯುಸಿನೆಸ್ ಅನ್ನು ಗಮನಿಸಿ ಅಳೆದು, ಆ ಯುವ ಉದ್ಯಮಿಗಳ ಉದ್ಯಮದಲ್ಲಿ ಹೂಡಿಕೆ ಮಾಡುತ್ತಾರೆ.

2021ರ ಡಿಸೆಂಬರ್​ನಲ್ಲಿ ಪ್ರಸಾರವಾಗಿದ್ದ ಶಾರ್ಕ್​ ಟ್ಯಾಂಕ್ ಇಂಡಿಯಾ ಮೊದಲ ಸೀಸನ್ ಭಾರಿ ಹಿಟ್ ಆಗಿತ್ತು. ಅದಾದ ಬಳಿಕ 2023 ರ ಜನವರಿ ತಿಂಗಳಲ್ಲಿ ಎರಡನೇ ಸೀಸನ್ ನಡೆದು ಸಾಧಾರಣ ಯಶಸ್ಸು ಕಂಡಿತು. ಇದೀಗ ಈ ಶೋನ ಮೂರನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದ್ದು, ಈ ಬಾರಿ ಹೊಸ ಉದ್ಯಮಿಗಳು ಜಡ್ಜ್​ಗಳಾಗಿ ಶೋಗೆ ಆಗಮಿಸಿದ್ದಾರೆ.

ಮೊದಲ ಸೀಸನ್​ನಲ್ಲಿ ಬೋಟ್ ಸಂಸ್ಥೆಯ ಅಮನ್ ಗುಪ್ತಾ, ಮ್ಯಾಟ್ರಿಮೋನಿ ವೆಬ್​ಸೈಟ್​ನ ಅನುಪಮ್ ಮಿತ್ತಲ್, ಭಾರತ್ ಪೇಯ ಅಶ್ನೀರ್ ಗ್ರೋವರ್, ಲೆನ್ಸ್​ಕಾರ್ಟ್​ನ ಪಿಯೂಷ್ ಗೋಯಲ್, ಶುಗರ್ ಕಾಸ್ಮೆಟಿಕ್ಸ್ ಮಾಲಕಿ ವಿನೀತಾ ಸಿಂಗ್, ಎಂಕ್ಯೂರ್ ಫಾರ್ಮಾಸುಟಿಕಲ್ಸ್​ ಸಂಸ್ಥೆಯ ನಮಿತಾ ತಾಪರ್ ಅವರುಗಳು ಪ್ರಮುಖ ಜಡ್ಜ್​ಗಳಾಗಿದ್ದರು.

ಇದನ್ನೂ ಓದಿ:‘ಶಾರ್ಕ್​ ಟ್ಯಾಂಕ್’ಗೆ ಪ್ರತಿ ಜಡ್ಜ್​​ಗಳು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಅಚ್ಚರಿಯ ವಿಚಾರ

ಭಾರತ್ ಪೇಯ ಅಶ್ನೀರ್ ಗ್ರೋವರ್, ಸ್ಪರ್ಧಿಗಳೊಂದಿಗೆ ಒರಟಾಗಿ ಮಾತನಾಡಿದ್ದು ಆಗ ವಿವಾದ ಎಬ್ಬಿಸಿತ್ತು. ಬಳಿಕ ಎರಡನೇ ಸೀಸನ್​ಗೆ ಅಶ್ನೀತ್ ಗ್ರೋವರ್ ಅನ್ನು ಕೈಬಿಟ್ಟು ಕಾರ್​ದೇಖೋ ಸಂಸ್ಥೆಯ ಅಮಿತ್ ಜೈನ್ ಅವರನ್ನು ಅಶ್ನೀರ್ ಗ್ರೋವರ್ ಸ್ಥಾನಕ್ಕೆ ಶಾರ್ಕ್ ಆಗಿ ಕರೆತರಲಾಯ್ತು. ಇದೀಗ ಮೂರನೇ ಸೀಸನ್ ಶುರುವಾಗುತ್ತಿದ್ದು, ಇಬ್ಬರು ಹೊಸ ಶಾರ್ಕ್​ಗಳು ಬಂದಿದ್ದಾರೆ.

ಜೊಮಾಟೊ ಕಂಪೆನಿಯ ಸ್ಥಾಪಕ ಮತ್ತು ಸಿಇಓ ದೀಪೇಂದರ್ ಗೋಯಲ್ ಈ ಬಾರಿ ಶಾರ್ಟ್ ಟ್ಯಾಂಕ್ ಇಂಡಿಯಾ ಸೇರಿದ್ದಾರೆ. ಅವರ ಜೊತೆಗೆ ಓಯೋ ರೂಮ್ಸ್ ಸಂಸ್ಥಾಪಕ ಹಾಗೂ ಸಿಇಓ ರಿತೇಶ್ ಅಗರ್ವಾಲ್ ಸಹ ಶಾರ್ಕ್ ಟ್ಯಾಂಕ್ 3 ಸೇರಿಕೊಂಡಿದ್ದಾರೆ. ಆದರೆ ಈ ಹಿಂದಿನ ಎರಡು ಸೀಸನ್​ಗಳಲ್ಲಿ ಇದ್ದ ಎಂಕ್ಯೂರ್ ಫಾರ್ಮಾಸುಟಿಕಲ್ಸ್​ ಸಂಸ್ಥೆಯ ನಮಿತಾ ತಾಪರ್ ಮೂರನೇ ಸೀಸನ್​ನಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ.

ಶಾರ್ಕ್​ ಟ್ಯಾಂಕ್ ಮೂರನೇ ಸೀಸನ್​ನ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿದ್ದು, ಹೊಸ ಶಾರ್ಕ್​ಗಳ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿತೇಶ್ ಅಗರ್ವಾಲ್ ಹಾಗೂ ದೀಪೇಂದರ್ ಗೋಯಲ್ ಅವರುಗಳು ಇತರೆ ಶಾರ್ಕ್​ಗಳ ಜೊತೆ ಕಾಣಿಸಿಕೊಂಡಿದ್ದಾರೆ. ಓಯೋ ರೂಮ್ಸ್​ನ ಮಾಲೀಕ ರಿತೇಶ್ ಅಗರ್ವಾಲ್ ಭಾರತದ ಅತ್ಯಂತ ಯುವ ಬಿಲೇನಿಯರ್ ಎಂಬ ಹೆಸರು ಗಳಿಸಿದವರು. ಇದೀಗ ಅತ್ಯಂತ ಯುವ ಶಾರ್ಕ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ