AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರಾವಾಹಿ ಟಿಆರ್​ಪಿ: ‘ಭಾಗ್ಯಲಕ್ಷ್ಮಿ’ ಟಿಆರ್​ಪಿಯಲ್ಲಿ ಏರಿಕೆ; ಇಳಿಕೆ ಕಂಡ ‘ಪುಟ್ಟಕ್ಕನ ಮಕ್ಕಳು’ ಬೇಡಿಕೆ

ಭಾಗ್ಯಲಕ್ಷ್ಮಿ ಧಾರಾವಾಹಿ ಆರಂಭದಲ್ಲಿ ಭರ್ಜರಿ ಟಿಆರ್​ಪಿ ಪಡೆದುಕೊಳ್ಳುತ್ತಿತ್ತು. ಈಗ ಈ ಸೀರಿಯಲ್​ನಲ್ಲಿ ಒಳ್ಳೆಯ ರೀತಿಯಲ್ಲಿ ಕಂಬ್ಯಾಕ್ ಮಾಡಿದೆ. ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಟಿಆರ್​ಪಿ ಪಡೆದ ಧಾರಾವಾಹಿ ಎನ್ನುವ ಜನಪ್ರಿಯತೆ ಈ ಧಾರಾವಾಹಿಗೆ ಸಿಕ್ಕಿದೆ. ಈ ವಾರ ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಧಾರಾವಾಹಿ ಟಿಆರ್​ಪಿ: ‘ಭಾಗ್ಯಲಕ್ಷ್ಮಿ’ ಟಿಆರ್​ಪಿಯಲ್ಲಿ ಏರಿಕೆ; ಇಳಿಕೆ ಕಂಡ ‘ಪುಟ್ಟಕ್ಕನ ಮಕ್ಕಳು’ ಬೇಡಿಕೆ
ಧಾರಾವಾಹಿ ಟಿಆರ್​ಪಿ
ರಾಜೇಶ್ ದುಗ್ಗುಮನೆ
|

Updated on:Oct 07, 2023 | 10:11 AM

Share

39ನೇ ವಾರದ ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಕಳೆದ ವಾರಗಳಿಗೆ ಹೋಲಿಕೆ ಮಾಡಿಕೊಂಡರೆ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಕಂಬ್ಯಾಕ್ ಮಾಡಿದೆ. ಆರಂಭದಲ್ಲಿ ಭರ್ಜರಿ ಟಿಆರ್​ಪಿ (TRP) ಪಡೆದುಕೊಳ್ಳುತ್ತಿದ್ದ ಈ ಧಾರಾವಾಹಿ ಬಳಿಕ ಡಲ್ ಆಯಿತು. ಈಗ ಈ ಸೀರಿಯಲ್​ನಲ್ಲಿ ಒಳ್ಳೆಯ ರೀತಿಯಲ್ಲಿ ಕಂಬ್ಯಾಕ್ ಮಾಡಿದೆ. ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಟಿಆರ್​ಪಿ ಪಡೆದ ಧಾರಾವಾಹಿ ಎನ್ನುವ ಜನಪ್ರಿಯತೆ ಈ ಧಾರಾವಾಹಿಗೆ ಸಿಕ್ಕಿದೆ. ಈ ವಾರ ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ಮೊದಲಾದವರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಇಷ್ಟು ದಿನ ಎರಡಂಕಿಯ ಟಿಆರ್​ಪಿ ಪಡೆದುಕೊಳ್ಳುತ್ತಿತ್ತು. ಆದರೆ, ಈಗ ಧಾರಾವಾಹಿಯ ಟಿಆರ್​ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದರ ಟಿಆರ್​ಪಿ ಎರಡಂಕಿಯಿಂದ ಒಂದಂಕಿಗೆ ಇಳಿದೆ. ಆದಾಗ್ಯೂ ಮೊದಲ ಸ್ಥಾನ ಮುಂದುವರಿಸಿಕೊಂಡು ಹೋಗುತ್ತಿದೆ.

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿ ಉಳಿದ ಧಾರಾವಾಹಿಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು ಸೇರಿ ಅನೇಕ ಕಲಾವಿದರಿದ್ದಾರೆ. ಈ ಧಾರಾವಾಹಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.

ಗಟ್ಟಿಮೇಳ

‘ಗಟ್ಟಿಮೇಳ’ ಧಾರಾವಾಹಿಯನ್ನು ಇಷ್ಟಪಡುವ ಅನೇಕರಿದ್ದಾರೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಸಾವಿರಾರು ಎಪಿಸೋಡ್ ಪೂರ್ಣಗೊಳಿಸಿದರೂ ಬೇಡಿಕೆ ಕುಗ್ಗಿಸಿಕೊಳ್ಳದೇ ಮುನ್ನುಗ್ಗುತ್ತಿದೆ. ಈ ಧಾರಾವಾಹಿಯಲ್ಲಿ ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳು ಸುದ್ದಿ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸತ್ಯ

ನಾಲ್ಕನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿ ಮತ್ತೆ ಟ್ರ್ಯಾಕ್​ಗೆ ಮರಳಿದ ‘ಭಾಗ್ಯಲಕ್ಷ್ಮೀ’; ಮೊದಲ ಸ್ಥಾನದಲ್ಲಿ ಯಾವ ಧಾರಾವಾಹಿ?

ಭಾಗ್ಯಲಕ್ಷ್ಮಿ-ಅಮೃತಧಾರೆ

ಭಾಗ್ಯಲಕ್ಷ್ಮಿ ಹಾಗೂ ಅಮೃತಧಾರೆ ಧಾರಾವಾಹಿಯ ಪ್ರಸಾರ ಸಮಯ ಒಂದೇ ಆಗಿದೆ. ಎರಡೂ ಧಾರಾವಾಹಿಗಳು ಟಿಆರ್​ಪಿ ರೇಸ್​ನಲ್ಲಿ ಒಟ್ಟಿಗೇ ಇವೆ. ಎರಡೂ ಧಾರಾವಾಹಿಗಳಿಗೆ ಐದನೇ ಸ್ಥಾನ ಸಿಕ್ಕಿದೆ. ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಸುದರ್ಶನ್, ಸುಷ್ಮಾ ರಾವ್ ಮೊದಲಾದವರು ನಟಿಸಿದ್ದಾರೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:48 am, Sat, 7 October 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್