‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಿಶಿರ್ ಅವರು ಎಲಿಮಿನೇಟ್ ಆಗಿದ್ದಾರೆ. 11 ವಾರಗಳ ಕಾಲ ಸ್ಪರ್ಧೆ ಮಾಡಿದ ಅವರು ಇತ್ತೀಚೆಗೆ ಡಲ್ ಆಗಿದ್ದರು. ‘ಮೊದಲ ಮೂರು ವಾರಗಳ ಕಾಲ ಇದ್ದ ಶಿಶಿರ್ ಈಗಲೂ ಇದ್ದಿದ್ದರೆ ಅವರು ಎಲಿಮಿನೇಟ್ ಆಗುತ್ತಿರಲಿಲ್ಲ’ ಎಂದು ಮನೆಯಲ್ಲಿ ಇದ್ದವರೇ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಶಿಶಿರ್ ಅವರು ತಾವು ಅಂದುಕೊಂಡ ದಿನವೇ ದೊಡ್ಮನೆಯಿಂದ ಹೊರ ಬಂದಿದ್ದಾರೆ.
ಶಿಶಿರ್ ಅವರಿಗೆ ಡಿಸೆಂಬರ್ 14 ಜನ್ಮದಿನ. ಈ ವಿಚಾರವನ್ನು ಅವರು ಈ ಮೊದಲೇ ಹಂಚಿಕೊಂಡಿದ್ದರು. ಅಲ್ಲದೆ, ಬರ್ತ್ಡೇ ದಿನದವರೆಗೆ ತಾವು ಇರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ‘ಡಿಸೆಂಬರ್ 14 ನನ್ನ ಜನ್ಮದಿನ. ಅಲ್ಲಿಯವರೆಗೆ ನಾನು ಬಿಗ್ ಬಾಸ್ ಮನೆಯಲ್ಲಿ ಇರಲೇಬೇಕು ಎಂಬ ಆಸೆ ಇದೆ. ಬಿಗ್ ಬಾಸ್ ಮನೆಯಲ್ಲಿ ನನ್ನ ಜನ್ಮದಿನ ಈ ವರ್ಷ ಆಚರಣೆ ಮಾಡಿಕೊಳ್ಳಬೇಕು ಎಂದಿದೆ’ ಎಂಬುದಾಗಿ ಶಿಶಿರ್ ಹೇಳಿದ್ದರು.
ಶಿಶಿರ್ ಅವರು ಅಂದುಕೊಂಡಂತೆ ಬಿಗ್ ಬಾಸ್ ಮನೆಯಲ್ಲೇ ಬರ್ತ್ಡೇ ಆಚರಿಸಿಕೊಂಡರು. ಸುದೀಪ್ ಅವರು ಶಿಶಿರ್ಗೆ ಕೇಕ್ ಕಳುಹಿಸಿಕೊಟ್ಟರು. ಅಷ್ಟೇ ಅಲ್ಲ, ತಾವು ಈ ಮೊದಲು ಬಳಸಿದ್ದ ಕೋಟ್ನ ಗಿಫ್ಟ್ ಆಗಿ ಶಿಶಿರ್ಗೆ ನೀಡಿದ್ದರು. ಈ ಖುಷಿಯ ದಿನವೇ ಶಿಶಿರ್ ಔಟ್ ಆಗಿದ್ದಾರೆ.
ಭಾನುವಾರದ ಎಪಿಸೋಡ್ ಒಂದು ದಿನ ಮೊದಲು ಅಂದರೆ ಶನಿವಾರವೇ ಶೂಟ್ ಆಗುತ್ತದೆ. ಕಳೆದ ವಾರವೂ ಹಾಗೆಯೇ ಆಗಿದೆ. ಡಿಸೆಂಬರ್ 15ರ ಎಪಿಸೋಡ್ ಡಿಸೆಂಬರ್ 14ರಂದೇ ಶೂಟ್ ಆಗಿತ್ತು. ಹೀಗಾಗಿ, ಶಿಶಿರ್ ಅವರು ಬರ್ತ್ಡೇ ದಿನಾಂಕದಂದೇ ಎಲಿಮಿನೇಟ್ ಆದಂತೆ ಆಗಿದೆ.
ಇದನ್ನೂ ಓದಿ: ಎಲಿಮಿನೇಟ್ ಆದ ಶಿಶಿರ್; ಐಶ್ವರ್ಯಾ ಜತೆಗಿನ ಸಂಬಂಧಕ್ಕೆ ಸ್ಪಷ್ಟನೆ ನೀಡಿದ ನಟ
ಶಿಶಿರ್ ಅವರು ಆರಂಭದಲ್ಲಿ ಸಾಕಷ್ಟು ಶ್ರಮ ಹಾಕಿದ್ದರು. ಬರುಬರುತ್ತಾ ಅವರು ಡಲ್ ಆದರು. ಇತ್ತೀಚೆಗೆ ಅವರು ದೊಡ್ಮನೆಯಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ‘ಮನೆಯಲ್ಲಿ ಎಲ್ಲರೂ ಟಾರ್ಗೆಟ್ ಮಾಡಿ ಶಿಶಿರ್ನ ಕಳುಹಿಸಿದ್ದಾರೆ’ ಎಂದು ಐಶ್ವರ್ಯಾ ಅವರು ಮಾತನಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.