‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Jul 09, 2022 | 11:28 AM

ಶಿವರಾಜ್​ಕುಮಾರ್ ಅವರು ಅನೇಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಯಸ್ಸು 60 ಸಮೀಪಿಸಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ.

‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ
ಶಿವಣ್ಣ
Follow us on

ನಟ ಶಿವರಾಜ್​ಕುಮಾರ್ (Shivarajkumar) ನಟನೆಯ ‘ಓಂ​’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಉಪೇಂದ್ರ ಅವರು. ‘ಓಂ’ ಸಿನಿಮಾ ಪ್ರಸಾರವಾದರೆ ತುಂಬಾನೇ ಶ್ರದ್ಧೆಯಿಂದ ಈ ಚಿತ್ರವನ್ನು ನೋಡುವವರು ಈಗಲೂ ಇದ್ದಾರೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಸಾಕಷ್ಟು ಬಾರಿ ರೀ-ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಶಿವಣ್ಣ ಅವರ ಎಂಟ್ರಿ ಐಕಾನಿಕ್​. ಈಗ ಅದೇ ಸ್ಟೈಲ್​ನಲ್ಲಿ ಶಿವರಾಜ್​ಕುಮಾರ್ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (Dance Karnataka Dance) ವೇದಿಕೆ ಏರಿದ್ದಾರೆ. ಈ ಪ್ರೋಮೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್​ ಸುರಿಮಳೆ ಬಂದಿದೆ.

ಶಿವರಾಜ್​ಕುಮಾರ್ ಅವರು ಅನೇಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಯಸ್ಸು 60 ಸಮೀಪಿಸಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ. ಸಿನಿಮಾ ಜತೆಗೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ಗೆ ಅವರು ಜಡ್ಜ್​ ಆಗಿದ್ದಾರೆ. ಅವರ ಎಂಟ್ರಿ ನೋಡಿ ಸ್ಪರ್ಧಿಗಳು ಸೀಟಿ ಹೊಡೆದಿದ್ದಾರೆ.

ಇದನ್ನೂ ಓದಿ
ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್
‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ
ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ
ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

ಜುಲೈ 12 ಶಿವರಾಜ್​ಕುಮಾರ್ ಬರ್ತ್​ಡೇ. ಈ ಕಾರಣಕ್ಕೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ಈ ಬಾರಿ ‘ಶಿವರಾಜೋತ್ಸವ’ ಮಾಡಲಾಗುತ್ತಿದೆ. ಸ್ಪರ್ಧಿಗಳು ವಿಶೇಷವಾಗಿ ಡ್ಯಾನ್ಸ್ ಮಾಡುವ ಮೂಲಕ ಶಿವಣ್ಣಗೆ ಗೌರವ ಸೂಚಿಸುತ್ತಿದ್ದಾರೆ. ಶಿವರಾಜ್​ಕುಮಾರ್ ಅವರ ಎಂಟ್ರಿಗೆ ಸಂಬಂಧಿಸಿದಂತೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ.

‘ಐ ಲವ್​ ಯೂ.. ಯೂ ಮಸ್ಟ್ ಲವ್​ ಮಿ’ ಎಂದು ಸಾಂಗ್ ಬರುತ್ತದೆ. ಆಗ ಶಿವರಾಜ್​ಕುಮಾರ್ ಅವರು ಲೈಟರ್ ಹಚ್ಚಿದ್ದಾರೆ. ಅವರ ಎಂಟ್ರಿ ನೋಡಿ ಜಡ್ಜ್​ ಸ್ಥಾನದಲ್ಲಿರುವ ರಕ್ಷಿತಾ ಪ್ರೇಮ್ ಅವರು ಖುಷಿಯಿಂದ ಕೂಗಿದ್ದಾರೆ. ಸದ್ಯ, ಈ ರೀಲ್ಸ್ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್​; ಜೀ ಪಿಚ್ಚರ್​ನಲ್ಲಿ ನಿರಂತರವಾಗಿ 60 ಗಂಟೆ ಪ್ರಸಾರ ಕಾಣಲಿದೆ ಶಿವಣ್ಣನ ಸಿನಿಮಾ

‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​​ ಸೀಸನ್​ 6’ ಅನೇಕ ಟ್ಯಾಲೆಂಟ್​ಗಳಿಗೆ ವೇದಿಕೆ ಆಗಿದೆ. ಹಲವು ಪ್ರತಿಭೆಗಳ ಅನಾವರಣ ಈ ವೇದಿಕೆಯಲ್ಲಿ ಆಗಿದೆ. ಶಿವರಾಜ್​ಕುಮಾರ್, ರಕ್ಷಿತಾ ಪ್ರೇಮ್​, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಜಡ್ಜ್​ ಸ್ಥಾನದಲ್ಲಿ ಕುಳಿತು ಸ್ಪರ್ಧಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳುತ್ತಿದ್ದಾರೆ.

Published On - 10:40 am, Sat, 9 July 22