ತೆಲುಗು ಬಿಗ್ ಬಾಸ್​ನಿಂದ ಕನ್ನಡತಿ ಶೋಭಾ ಶೆಟ್ಟಿ ಔಟ್; ಊಹೆಗೂ ಮೀರಿ ಸಂಭಾವನೆ ಪಡೆದ ನಟಿ

|

Updated on: Dec 11, 2023 | 1:00 PM

ಶೋಭಾ ಶೆಟ್ಟಿ ಅವರು ಮೂಲತಃ ಕರ್ನಾಟಕದವರು. ತೆಲುಗು ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ. ಗೇಮ್​ ವಿಚಾರದಲ್ಲಿ ಅವರು ಶೇ.100 ಪರ್ಸೆಂಟ್ ಕೊಟ್ಟು ಆಡಿದ್ದಾರೆ. ಆದರೆ, ಮಾಡಿದ ಕೆಲವು ತಪ್ಪಿನಿಂದ ಅವರಿಗೆ ಹಿನ್ನಡೆ ಆಗಿದೆ.

ತೆಲುಗು ಬಿಗ್ ಬಾಸ್​ನಿಂದ ಕನ್ನಡತಿ ಶೋಭಾ ಶೆಟ್ಟಿ ಔಟ್; ಊಹೆಗೂ ಮೀರಿ ಸಂಭಾವನೆ ಪಡೆದ ನಟಿ
ಶೋಭಾ ಶೆಟ್ಟಿ
Follow us on

‘ತೆಲುಗು ಬಿಗ್ ಬಾಸ್ ಸೀಸನ್ 7’ರಲ್ಲಿ ಕರ್ನಾಟಕದ ಶೋಭಾ ಶೆಟ್ಟಿ ಎಲ್ಲರ ಗಮನ ಸೆಳೆದರು. ಅವರು 14 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲೇ ಇದ್ದರು. ಈಗ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ. ಕಳೆದ ವೀಕೆಂಡ್ ಎಪಿಸೋಡ್​ನಲ್ಲಿ ಶೋಭಾ (Shobha Shetty) ಅವರು ಕಡಿಮೆ ವೋಟ್ ಪಡೆದು ಬಿಗ್ ಬಾಸ್​ನಿಂದ ಹೊರ ಬಿದ್ದಿದ್ದಾರೆ. ಅವರು ಪಡೆದ ಸಂಭಾವನೆ ವಿಚಾರ ಈಗ ಸಾಕಷ್ಟು ಸುದ್ದಿ ಆಗುತ್ತಿದೆ.

ಶೋಭಾ ಶೆಟ್ಟಿ ಅವರು ಮೂಲತಃ ಕರ್ನಾಟಕದವರು. ತೆಲುಗು ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ. ಗೇಮ್​ ವಿಚಾರದಲ್ಲಿ ಅವರು ಶೇ.100 ಪರ್ಸೆಂಟ್ ಕೊಟ್ಟು ಆಡಿದ್ದಾರೆ. ಆದರೆ, ಮಾಡಿದ ಕೆಲವು ತಪ್ಪಿನಿಂದ ಅವರಿಗೆ ಹಿನ್ನಡೆ ಆಯಿತು. ಅವರನ್ನು ಬಿಗ್ ಬಾಸ್​ನಿಂದ ಹೊರಗೆ ಕಳುಹಿಸುವಂತೆ ಆಗ್ರಹ ಕೇಳಿ ಬರುತ್ತಲೇ ಇತ್ತು. ಪ್ರತಿ ಬಾರಿ ನಾಮಿನೇಟ್ ಆದಾಗಲೂ ಅವರು ಬಚಾವ್ ಆಗಿದ್ದರು. ಆದರೆ, ಈಗ ದೊಡ್ಮನೆಯಿಂದ ಔಟ್ ಆಗಿದ್ದಾರೆ.


ಶೋಭಾ ಅವರು ಪ್ರತಿ ವಾರಕ್ಕೆ 2.25 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಶೋ ಪೂರ್ಣಗೊಂಡ ಬಳಿಕ ಅವರಿಗೆ ಸಿಕ್ಕಿದ್ದು 31.50 ಲಕ್ಷ ರೂಪಾಯಿ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಟ್ರೋಫಿ ಎತ್ತಲು ಸಾಧ್ಯವಾಗಿಲ್ಲ ಎನ್ನುವ ಬೇಸರ ಅವರನ್ನು ಕಾಡಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್​ಗೆ ವೀಕ್ಷಕರ ಪ್ರಶ್ನೆ

ವಿವಾದಗಳ ಮೂಲಕ ಸುದ್ದಿ ಆದರು

ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ನೆಗೆಟಿವಿಟಿ ಹರಡುತ್ತಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಇತ್ತು. ಅವರು ಮಾತನಾಡುವ ರೀತಿ ಸರಿ ಇಲ್ಲ, ಒರಟಾಗಿ ನಡೆದುಕೊಳ್ಳುತ್ತಾರೆ, ಕೂಗಾಡುತ್ತಾರೆ, ಇತರ ಸ್ಪರ್ಧಿಗಳನ್ನು ಪ್ರಚೋದಿಸುತ್ತಾರೆ, ಗ್ರೂಪಿಸಂ ಮಾಡುತ್ತಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂತು. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಹಲವರು ಪೋಸ್ಟ್ ಹಾಕಿದ್ದರು. ಸ್ಟಾರ್ ಮಾ ವಾಹಿನಿಯವರು ಶೋಭಾ ಅವರನ್ನು ಎಲಿಮಿನೇಷನ್‌ನಿಂದ ಪಾರು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಕೆಲವರು ಮಾಡಿದ್ದರು. ಶೋಭಾ ಶೆಟ್ಟಿ ಎಲಿಮಿನೇಷನ್ ಬಗ್ಗೆ ಹಲವು ಮೀಮ್​ಗಳು ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ