‘ನಮ್ರತಾನ ಗೆದ್ದಿದ್ರೆ ನಮಗೆ ಖುಷೀನೇ’; ನೇರವಾಗಿ ಮಾತನಾಡಿದ ಸ್ನೇಹಿತ್ ತಾಯಿ

ಎಲಿಮಿನೇಷನ್ ಸಂದರ್ಭದಲ್ಲಿ ಸ್ನೇಹಿತ್ ತಂದೆ ತಾಯಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಆಗ ಸುದೀಪ್ ಅವರು ಸ್ನೇಹಿತ್ ತಾಯಿ ಬಳಿ ಒಂದು ಪ್ರಶ್ನೆ ಕೇಳಿದ್ದಾರೆ. ಅವರ ತಾಯಿ ಆಡಿದ ಮಾತು ಎಲ್ಲರ ಗಮನ ಸೆಳೆದಿದೆ.

‘ನಮ್ರತಾನ ಗೆದ್ದಿದ್ರೆ ನಮಗೆ ಖುಷೀನೇ’; ನೇರವಾಗಿ ಮಾತನಾಡಿದ ಸ್ನೇಹಿತ್ ತಾಯಿ
ಸ್ನೇಹಿತ್ ತಾಯಿ, ಸ್ನೇಹಿತ್, ನಮ್ರತಾ
Follow us
ರಾಜೇಶ್ ದುಗ್ಗುಮನೆ
|

Updated on: Dec 11, 2023 | 8:14 AM

ಒಂಭತ್ತನೇ ವಾರ ಬಿಗ್ ಬಾಸ್ (Bigg Boss) ಮನೆಯಿಂದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ನಮ್ರತಾ ಜೊತೆ ಅವರಿಗೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅವರನ್ನು ಇಷ್ಟಪಡುವುದಾಗಿಯೂ ಅನೇಕ ಬಾರಿ ಸ್ನೇಹಿತ್ ಹೇಳಿಕೊಂಡಿದ್ದರು. ಆದರೆ, ಬಿಗ್ ಬಾಸ್​ನಲ್ಲಿ ಆಗೋ ಪ್ರೀತಿ ಮೇಲಲ್ಲ ನಮ್ರತಾಗೆ ನಂಬಿಕೆ ಇಲ್ಲ. ಇದನ್ನು ಅವರು ನೇರವಾಗಿ ಅನೇಕ ಬಾರಿ ಹೇಳಿದ್ದಾರೆ. ಸ್ನೇಹಿತ್ ಎಲಿಮಿನೇಟ್ ಆದ ಬಳಿಕ ವೇದಿಕೆ ಮೇಲೆ ಮಾತನಾಡಿದ್ದಾರೆ. ಈ ವೇಳೆ ಅವರ ತಾಯಿ ಆಡಿದ ಮಾತು ಎಲ್ಲರ ಗಮನ ಸೆಳೆದಿದೆ.

ಬಿಗ್ ಬಾಸ್​ನಲ್ಲಿ ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿತ್ತು. ನಮ್ರತಾ ಅಂದ್ರೆ ಇಷ್ಟ ಎಂದು ಸ್ನೇಹಿತ್ ಅನೇಕ ಬಾರಿ ಹೇಳಿಕೊಂಡಿದ್ದರು. ಆದರೆ, ನಮ್ರತಾ ಅವರು ಪ್ರೀತಿಗೆಲ್ಲ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ಈಗ ಸ್ನೇಹಿತ್ ಎಲಿಮಿನೇಟ್ ಆಗಿರುವುದರಿಂದ ನಮ್ರತಾಗೆ ಬೇಸರ ಆಗಿದೆ. ಸ್ನೇಹಿತ್ ಹೊರ ಹೋಗುವಾಗ ನಮ್ರತಾ ಕಣ್ಣೀರು ಹಾಕಿದ್ದಾರೆ. ಇವರ ಫ್ರೆಂಡ್​ಶಿಪ್ ಎಷ್ಟು ಗಟ್ಟಿ ಆಗಿತ್ತು ಎಂಬುದನ್ನು ಈ ದೃಶ್ಯ ಸಾಬೀತು ಮಾಡಿದೆ. ಆ ಬಳಿಕ ವೇದಿಕೆ ಮೇಲೆ ಸುದೀಪ್ ಅವರು ಸ್ನೇಹಿತ್ ಆಟದ ಬಗ್ಗೆ ಅವರ ಪಾಲಕರಿಗೆ ಪ್ರಶ್ನೆ ಮಾಡಿದ್ದಾರೆ.

ಎಲಿಮಿನೇಷನ್ ಸಂದರ್ಭದಲ್ಲಿ ಸ್ನೇಹಿತ್ ತಂದೆ ತಾಯಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಆಗ ಸುದೀಪ್ ಅವರು ಸ್ನೇಹಿತ್ ತಾಯಿ ಬಳಿ ಒಂದು ಪ್ರಶ್ನೆ ಕೇಳಿದ್ದಾರೆ. ‘ಮಗ ಇಷ್ಟು ದಿನ ಆಡಿದ್ದಕ್ಕೆ ಏನು ಅನಿಸುತ್ತಿದೆ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ‘ಗೆದ್ದಷ್ಟೇ ಖುಷಿ ಇದೆ’ ಎಂದರು. ‘ಯಾರನ್ನ’ ಎಂದು ಸುದೀಪ್ ಮರು ಪ್ರಶ್ನೆ ಹಾಕಿದರು. ‘ನಮ್ರತಾನ ಗೆದ್ದಿದ್ರೆ ನಮಗೆ ಖುಷೀನೇ’ ಎಂದು ಸ್ನೇಹಿತ್ ತಾಯಿ ನೇರ ಮಾತಿನಲ್ಲಿ ಹೇಳಿದ್ದಾರೆ. ಈ ಉತ್ತರಕ್ಕೆ ಸ್ವಲ್ಪ ಮುಜುಗರ ಮಾಡಿಕೊಂಡ ಸ್ನೇಹಿತ್, ‘ಇನ್ನೂ ಏನು ಆಗಿಲ್ಲ’ ಎಂದರು.

ಇದನ್ನೂ ಓದಿ: ‘ಪ್ರೀತಿಸ್ತೀನಿ ಅಂದ್ರೆ ಏನು ಮಾಡ್ತೀರಿ?’; ನಮ್ರತಾ ನೇರ ಪ್ರಶ್ನೆಗೆ ಕಂಗಾಲಾದ ಸ್ನೇಹಿತ್

ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಔಟ್ ಆಗಬೇಕು ಎಂದು ಅನೇಕರು ಅಂದುಕೊಂಡಿದ್ದರು. ಹಾಗೆಯೇ ಆಗಿದೆ. ಇದು ಅನೇಕರಿಗೆ ಖುಷಿ ನೀಡಿದೆ. ಅವರು ಎಲಿಮಿನೇಟ್ ಆಗಿದ್ದು ಸರಿ ಇದೆ ಎಂದು ಅನೇಕರು ಹೇಳಿದ್ದಾರೆ. ಮುಂದೆ ವಿನಯ್ ಹಾಗೂ ನಮ್ರತಾ ಯಾವ ರೀತಿಯಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ