‘ನಿಮ್ಮ ಮಗನಿಗೆ ಬುದ್ಧಿ ಹೇಳಿ’; ಸ್ನೇಹಿತ್​ನ ಫ್ಲರ್ಟ್ ನೋಡಿ ಕ್ಯಾಮೆರಾ ಎದುರು ಗೋಗರೆದ ನಮ್ರತಾ

|

Updated on: Nov 08, 2023 | 8:07 AM

ಇತ್ತೀಚೆಗೆ ನಮ್ರತಾ ಹಾಗೂ ಸ್ನೇಹಿತ್ ಒಂದೇ ತಂಡದಲ್ಲಿ ಆಟ ಆಡುತ್ತಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಆಪ್ತತೆ ಬೆಳೆಯುತ್ತಿದೆ. ಅವರು ಆದಷ್ಟು ನಮ್ರತಾ ಜೊತೆ ಕ್ಲೋಸ್ ಆಗೋಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಅವರು ಓಪನ್ ಆಗಿ ಫ್ಲರ್ಟ್ ಮಾಡುತ್ತಿದ್ದಾರೆ.

‘ನಿಮ್ಮ ಮಗನಿಗೆ ಬುದ್ಧಿ ಹೇಳಿ’; ಸ್ನೇಹಿತ್​ನ ಫ್ಲರ್ಟ್ ನೋಡಿ ಕ್ಯಾಮೆರಾ ಎದುರು ಗೋಗರೆದ ನಮ್ರತಾ
ಸ್ನೇಹಿತ್-ನಮ್ರತಾ
Follow us on

ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸ್ನೇಹಿತ್ (Snehit) ಅವರು ಯಾವುದಾದರೂ ಮಹಿಳಾ ಸ್ಪರ್ಧಿ ಜೊತೆ ಕ್ಲೋಸ್ ಆಗಬೇಕು ಎಂದು ಪ್ರಯತ್ನಿಸುತ್ತಲೇ ಇದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಮೊದಲು ಸಂಗೀತಾ ಜೊತೆ ಕ್ಲೋಸ್ ಆಗೋಕೆ ಅವರು ಪ್ರಯತ್ನಿಸಿದರು. ಕಾರ್ತಿಕ್ ಮಹೇಶ್ ಇದ್ದ ಕಾರಣ ಅದು ಸಾಧ್ಯವಾಗಿಲ್ಲ. ಮೊದಲ ಬಾರಿ ನಮ್ರತಾ ಜೊತೆ ಆಪ್ತತೆ ಬೆಳೆಸಿಕೊಳ್ಳೋಕೆ ಪ್ರಯತ್ನಿಸಿ ವಿಫಲರಾದರು. ಈಶಾನಿ ಜೊತೆ ಗೆಳೆತನ ಬೆಳೆಸಿಕೊಳ್ಳಲೂ ಹೋಗಿದ್ದರು. ಮೈಕೆಲ್ ಇರುವ ಕಾರಣದಿಂದ ಅದು ವರ್ಕೌಟ್ ಆಗಲಿಲ್ಲ. ಈಗ ಸ್ನೇಹಿತ್ ಎಲ್ಲ ಕಡೆ ಸುತ್ತಾಟ ನಡೆಸಿ ಮತ್ತೆ ನಮ್ರತಾ ಬಳಿಯೇ ಮರಳಿ ಬಂದಿದ್ದಾರೆ.

ಇತ್ತೀಚೆಗೆ ನಮ್ರತಾ ಹಾಗೂ ಸ್ನೇಹಿತ್ ಒಂದೇ ತಂಡದಲ್ಲಿ ಆಟ ಆಡುತ್ತಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಆಪ್ತತೆ ಬೆಳೆಯುತ್ತಿದೆ. ಅವರು ಆದಷ್ಟು ನಮ್ರತಾ ಜೊತೆ ಕ್ಲೋಸ್ ಆಗೋಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಅವರು ಓಪನ್ ಆಗಿ ಫ್ಲರ್ಟ್ ಮಾಡುತ್ತಿದ್ದಾರೆ. ಇದನ್ನು ನಮ್ರತಾ ಬಳಿ ನೋಡೋಕೆ ಸಾಧ್ಯವಾಗುತ್ತಿಲ್ಲ. ಅವರು ಕ್ಯಾಮೆರಾ ಎದುರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ಸ್ನೇಹಿತ್ ಗಾರ್ಡನ್ ಏರಿಯಾದಲ್ಲಿ ವರ್ಕೌಟ್ ಮಾಡುತ್ತಿದ್ದರು. ನಮ್ರತಾ ಅವರು ಅಲ್ಲಿಗೆ ಬಂದರು. ಅದೇ ಸಮಯಕ್ಕೆ ಸೂರ್ಯ ಕೂಡ ಮೋಡದ ಮರೆಯಿಂದ ಬಂದ. ‘ನೋಡಿ ನಿಮ್ಮನ್ನು ನೋಡುತ್ತಿದ್ದಂತೆ ಸೂರ್ಯ ಕೂಡ ಕಾಣಿಸಿದ’ ಎಂದು ನಮ್ರತಾಗೆ ಹೇಳಿದರು ಸ್ನೇಹಿತ್. ಈ ಮಾತನ್ನು ನಮ್ರತಾ ಬಳಿ ಕೇಳೋಕೆ ಸಾಧ್ಯವಾಗಿಲ್ಲ.

‘ಬಹುಶಃ ಈ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ದರೆ ವರ್ಕೌಟ್ ಆಗ್ತಿತ್ತೇನೋ. ನನ್ನ ಬಳಿ ವರ್ಕೌಟ್ ಆಗಲ್ಲ’ ಎಂದರು ನಮ್ರತಾ. ‘ನಮ್ಮ ಪಾಡಿಗೆ ನಾವು ವರ್ಕೌಟ್ ಮಾಡ್ತಾ ಇರಬೇಕು. ಆಗೋದು ಬಿಡೋದು ದೇವರ ಇಚ್ಛೆ’ ಎಂದರು ಸ್ನೇಹಿತ್. ‘ನಿಮ್ಮ ಮಗನಿಗೆ ಬುದ್ಧಿ ಹೇಳಿ’ ಎಂದು ನಮ್ರತಾ ಕ್ಯಾಮೆರಾ ನೋಡುತ್ತಾ ಹೇಳಿದರು.

ಇದನ್ನೂ ಓದಿ: ಪ್ರತಾಪ್​ಗೆ ಗಾಳ ಹಾಕಿದ ಸಂತೋಷ್, ವಿನಯ್, ಸ್ನೇಹಿತ್; ಇದು ಸುಲಭಕ್ಕೆ ಬೀಳೋ ಮೀನಲ್ಲ

‘ಬಹುಶಃ ನನ್ನ ಅಮ್ಮ ಇದನ್ನು ನೋಡಿದ್ರೆ ಖುಷಿ ಪಡ್ತಾರೆ. ನಾನು ರೊಮ್ಯಾನ್ಸ್ ಮಾಡೋದು ನೋಡಿದ್ರೆ ಅವರಿಗೆ ಖುಷಿ ಆಗುತ್ತದೆ’ ಎಂದು ಸ್ನೇಹಿತ್ ಹೇಳಿದರು. ಈ ಮಾತು ಕೇಳಿ ನಮ್ರತಾಗೆ ಅಚ್ಚರಿ ಆಯಿತು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ