ಪ್ರತಾಪ್​ಗೆ ಗಾಳ ಹಾಕಿದ ಸಂತೋಷ್, ವಿನಯ್, ಸ್ನೇಹಿತ್; ಇದು ಸುಲಭಕ್ಕೆ ಬೀಳೋ ಮೀನಲ್ಲ

ಪ್ರತಾಪ್ ಸ್ಟ್ರಾಂಗ್ ಎನ್ನುವ ವಿಚಾರ ಗೊತ್ತಾದ ಬಳಿಕವೇ ಅವರು ಈ ರೀತಿಯ ಪ್ಲಾನ್ ರೂಪಿಸುತ್ತಿದ್ದಾರೆ ಎಂಬುದು ಪ್ರತಾಪ್​ಗೂ ಅರಿವಾದಂತಿದೆ. ಅವರು ಇದಕ್ಕೆ ರಿಯಾಕ್ಟ್ ಮಾಡೋಕೆ ಹೋಗಿಲ್ಲ.

ಪ್ರತಾಪ್​ಗೆ ಗಾಳ ಹಾಕಿದ ಸಂತೋಷ್, ವಿನಯ್, ಸ್ನೇಹಿತ್; ಇದು ಸುಲಭಕ್ಕೆ ಬೀಳೋ ಮೀನಲ್ಲ
ಡ್ರೋನ್ ಪ್ರತಾಪ್​ಗೆ ಗಾಳ
Follow us
|

Updated on: Nov 07, 2023 | 11:27 AM

ಹೊರಗಿದ್ದಾಗ ಡ್ರೋನ್ ಪ್ರತಾಪ್ (Drone Prathap) ಬಗ್ಗೆ ಜನರಿಗೆ ಇದ್ದ ಅಭಿಪ್ರಾಯವೇ ಬೇರೆ ರೀತಿಯದ್ದಾಗಿತ್ತು. ಯಾವಾಗ ಅವರು ಬಿಗ್ ಬಾಸ್ (Bigg Boss) ಮನೆಗೆ ಹೋದರೋ ಅವರು ಕೆಲವೇ ವಾರಗಳಲ್ಲಿ ಎಲ್ಲರ ಫೇವರಿಟ್ ಕಂಟೆಸ್ಟಂಟ್ ಆಗಿದ್ದಾರೆ. ಈ ವಾರ ಅವರು ನಾಮಿನೇಟ್ ಕೂಡ ಆಗಿಲ್ಲ. ಹೀಗಾಗಿ, ಅವರು ಈ ವಾರ ಸೇಫ್ ಆಗಿದ್ದಾರೆ. ಪ್ರತಾಪ್ ಬುದ್ಧಿವಂತ ಎಂಬುದು ಬಹುತೇಕರಿಗೆ ಗೊತ್ತಾಗಿದೆ. ಈ ಕಾರಣಕ್ಕೆ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ತುಕಾಲಿ ಸಂತೋಷ್, ವಿನಯ್ ಹಾಗೂ ಸ್ನೇಹಿತ್ ಪ್ರಯತ್ನಿಸಿದ್ದಾರೆ.

ವರ್ತೂರು ಸಂತೋಷ್ ಅವರು ಹುಲಿ ಉಗುರು ವಿವಾದದಿಂದ ಒಂದು ವಾರ ಬಿಗ್​ ಬಾಸ್​ನಿಂದ ಹೊರಗೆ ಇದ್ದರು. ಮನೆಯ ಒಳಗೆ ಇರುವ ಸ್ಪರ್ಧಿಗಳ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಅವರಿಗೆ ಗೊತ್ತಾದಂತಿದೆ. ಹೀಗಾಗಿ, ದೊಡ್ಮನೆ ಒಳಗೆ ಬಂದ ಅವರು ವಿನಯ್ ಟೀಂನಿಂದ ದೂರವೇ ಇರೋಕೆ ಆರಂಭಿಸಿದ್ದಾರೆ. ತುಕಾಲಿ ಸಂತೋಷ್ ಬಳಿ ಹೋಗಿ ಪ್ರತಾಪ್ ಜೊತೆ ಸೇರಿಕೊಳ್ಳೋಕೆ ಅವರು ಸೂಚಿಸಿದ್ದಾರೆ.

‘ವಿನಯ್ ಹಾಗೂ ಕಾರ್ತಿಕ್ ಕಿತ್ತಾಡುತ್ತಿದ್ದರು. ಈಗ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದಾರೆ. ಇದರಲ್ಲೇ ನೀನು ಅರ್ಥ ಮಾಡಿಕೊಳ್ಳಬೇಕು. ನಿನ್ನ ಕಾರ್ತಿಕ್ ವಿರುದ್ಧ ಎತ್ತಿ ಕಟ್ಟಿದರು. ಆದರೆ, ಈಗ ಅವರಿಬ್ಬರೂ ಒಂದಾಗಿದ್ದಾರೆ. ಪ್ರತಾಪ್ ಜೊತೆ ಸೇರಿಕೊಂಡರೆ ನಿನಗೆ ಸಹಾಯ ಆಗುತ್ತದೆ’ ಎಂದಿದ್ದಾರೆ ವರ್ತೂರು ಸಂತೋಷ್. ಈ ಮಾತನ್ನು ತುಕಾಲಿ ಸಂತೋಷ್ ಗಂಭೀರವಾಗಿ ಸ್ವೀಕರಿಸಿದಂತಿದೆ.

ಈ ಕಾರಣಕ್ಕೆ ತುಕಾಲಿ ಸಂತೋಷ್ ಅವರು ಪ್ರತಾಪ್ ಬಳಿ ರಾಜಿಗೆ ಪ್ರಯತ್ನಿಸಿದ್ದಾರೆ. ‘ನನ್ನ ನಿನ್ನ ಕೆಮಿಸ್ಟ್ರಿ ಮೊದಲಿನಿಂದಲೂ ಚೆನ್ನಾಗಿದೆ. ನಿನ್ನ ವಿಚಾರ ಮಾತನಾಡದೇ ಮೂರು ವಾರ ಆಗಿದೆ. ನಿನ್ನ ಕಣ್ಣಲ್ಲಿ ಪ್ರೀತಿ ಕಾಣುತ್ತದೆ. ನೀನು ನಾನು ಕನೆಕ್ಟ್​ ಆದರೆ ಕಾಮಿಡಿ ಆಗುತ್ತದೆ’ ಎಂದಿದ್ದಾರೆ ತುಕಾಲಿ ಸಂತೋಷ್.

ಇದನ್ನೂ ಓದಿ:  ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್​ಗಿಲ್ಲ ಧೈರ್ಯ? ಎಲ್ಲರದ್ದೂ ಇದೇ ಅಭಿಪ್ರಾಯ

ಮತ್ತೊಂದು ಕಡೆ ಕುಳಿತ ವಿನಯ್ ಆ್ಯಂಡ್ ಗ್ಯಾಂಗ್ ಪ್ರತಾಪ್​ನ ಹೊಗಳಿತು. ‘ಇವತ್ತು ನೀನು ಆಡಿದ ಮಾತು ಉತ್ತಮವಾಗಿತ್ತು’ ಎಂದರು ವಿನಯ್ ಹಾಗೂ ಸ್ನೇಹಿತ್. ಪ್ರತಾಪ್ ಸ್ಟ್ರಾಂಗ್ ಎನ್ನುವ ವಿಚಾರ ಗೊತ್ತಾದ ಬಳಿಕವೇ ಅವರು ಈ ರೀತಿಯ ಪ್ಲಾನ್ ರೂಪಿಸುತ್ತಿದ್ದಾರೆ ಎಂಬುದು ಪ್ರತಾಪ್​ಗೂ ಅರಿವಾದಂತಿದೆ. ಅವರು ಇದಕ್ಕೆ ರಿಯಾಕ್ಟ್ ಮಾಡೋಕೆ ಹೋಗಿಲ್ಲ. ಈ ಬಾರಿ ಬಿಗ್ ಬಾಸ್​ನ ಜಿಯೋ ಸಿನಿಮಾದಲ್ಲಿ 24 ಗಂಟೆ ವೀಕ್ಷಿಸಬಹುದು. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ