ತಂಡದ ಕ್ಯಾಪ್ಟನ್ ಆದ ಡ್ರೋನ್​ ಪ್ರತಾಪ್​ಗೆ ಸತತ ಗೆಲುವು, ಆದರೆ ಸಂಕಷ್ಟ ಬೆಟ್ಟದಷ್ಟು

ಡ್ರೋನ್ ಪ್ರತಾಪ್ ಈಗ ಬಿಗ್​ಬಾಸ್ ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿದ್ದಾರೆ. ಆರಂಭದ ಕೆಲವು ವಾರ ಮನೆಯ ನಿರ್ಲಕ್ಷಿತ ಸದಸ್ಯನಾಗಿದ್ದ ಪ್ರತಾಪ್ ಈಗ ಮನೆಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವುದು ಮಾತ್ರವೇ ಅಲ್ಲದೆ, ಈಗ ತಂಡದ ಕ್ಯಾಪ್ಟನ್ ಸಹ ಆಗಿದ್ದಾರೆ. ಕ್ಯಾಪ್ಟನ್ ಆದ ಕೂಡಲೇ ಒಂದರ ಹಿಂದೊಂದು ಟಾಸ್ಕ್​ಗಳನ್ನು ಸಹ ಗೆದ್ದಿದ್ದಾರೆ. ಆದರೆ ಪ್ರತಾಪ್​ಗೆ ಕಷ್ಟಗಳು ಸಹ ಸಾಕಷ್ಟಿವೆ.

ತಂಡದ ಕ್ಯಾಪ್ಟನ್ ಆದ ಡ್ರೋನ್​ ಪ್ರತಾಪ್​ಗೆ ಸತತ ಗೆಲುವು, ಆದರೆ ಸಂಕಷ್ಟ ಬೆಟ್ಟದಷ್ಟು
Follow us
ಮಂಜುನಾಥ ಸಿ.
|

Updated on:Nov 08, 2023 | 12:02 AM

ಡ್ರೋನ್ ಪ್ರತಾಪ್ (Drone Prathap) ಈಗ ಬಿಗ್​ಬಾಸ್ ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿದ್ದಾರೆ. ಆರಂಭದ ಕೆಲವು ವಾರ ಮನೆಯ ನಿರ್ಲಕ್ಷಿತ ಸದಸ್ಯನಾಗಿದ್ದ ಪ್ರತಾಪ್ ಈಗ ಮನೆಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವುದು ಮಾತ್ರವೇ ಅಲ್ಲದೆ, ಈಗ ತಂಡದ ಕ್ಯಾಪ್ಟನ್ ಸಹ ಆಗಿದ್ದಾರೆ. ಕ್ಯಾಪ್ಟನ್ ಆದ ಕೂಡಲೇ ಒಂದರ ಹಿಂದೊಂದು ಟಾಸ್ಕ್​ಗಳನ್ನು ಸಹ ಗೆದ್ದಿದ್ದಾರೆ. ಆದರೆ ಪ್ರತಾಪ್​ಗೆ ಕಷ್ಟಗಳು ಸಹ ಸಾಕಷ್ಟಿವೆ.

ಕಳೆದ ವಾರ ಮಾಡಿದ್ದ ತಂಡಗಳನ್ನೇ ಈ ವಾರವೂ ಮುಂದುವರೆಸುವಂತೆ ಬಿಗ್​ಬಾಸ್ ಅನುಮತಿ ನೀಡಿದರು. ಆದರೆ ತಂಡದ ಕ್ಯಾಪ್ಟನ್​ಗಳನ್ನು ಬದಲು ಮಾಡಬೇಕು ಹಾಗೂ ಬೇರೆ ತಂಡಗಳಿಗೆ ಹೋಗಲು ಇಚ್ಛೆಯಿದ್ದ ಸದಸ್ಯರಿಗೆ ಅವಕಾಶ ನೀಡಬೇಕು ಎಂಬ ಷರತ್ತು ಇಟ್ಟರು. ಸಂಗೀತಾರ ತಂಡದಲ್ಲಿ ಮೈಖಲ್, ಕಾರ್ತಿಕ್ ತಾವು ಕ್ಯಾಪ್ಟನ್ ಆಗುವ ಇಚ್ಛೆ ವ್ಯಕ್ತಪಡಿಸಿದರು. ಡ್ರೋನ್ ಪ್ರತಾಪ್ ಸಹ ಕ್ಯಾಪ್ಟನ್ ಆಗುವೆ ಎಂದರು. ಕೊನೆಗೆ ಎಲ್ಲರೂ ಸೇರಿ ಪ್ರತಾಪ್ ಅನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದರು. ಎದುರಾಳಿ ತಂಡದವರು ಸಿರಿ ಅವರನ್ನು ಆಯ್ಕೆ ಮಾಡಿದರು.

ಆದರೆ ಆ ನಂತರ ಪ್ರತಾಪ್​ಗೆ ಸವಾಲು ಎದುರಾಯ್ತು, ಸಂಗೀತಾ ಹಾಗೂ ಕಾರ್ತಿಕ್ ನಡುವೆ ಜಗಳ ಶುರುವಾಯ್ತು. ಸಂಗೀತಾ ತಾವು ಎದುರಾಳಿ ತಂಡಕ್ಕೆ ಹೋಗುವುದಾಗಿ ಹೇಳಿದರು. ಇವರಿಬ್ಬರ ಜಗಳ ಪ್ರತಾಪ್​ರ ತಂಡದ ಈಕ್ವೇಷನ್ ಕೆಡಿಸಿತು. ಆ ಬಳಿಕ ಮೈಖಲ್ ಸಹ ತಾವು ಎದುರಾಳಿ ತಂಡಕ್ಕೆ ಹೋಗುವುದಾಗಿ ಹೇಳಿದರು. ಎದುರಾಳಿ ತಂಡದವರು ಸಹ ಮೈಖಲ್​ಗೆ ಕಿವಿ ಊದಿದರು. ಆದರೆ ಎಲ್ಲರನ್ನೂ ಸಂಭಾಳಿಸಿ ಸಂಗೀತಾ ಹಾಗೂ ಮೈಖಲ್ ಇಬ್ಬರನ್ನೂ ತಂಡದಲ್ಲಿ ಉಳಿಸಿಕೊಳ್ಳಲು ಪ್ರತಾಪ್ ಸಫಲರಾದರು. ಈ ಸಂದರ್ಭದಲ್ಲಿ ಹಳ್ಳಿಕಾರ್​ ಸಂತೋಷ್​ ಜೊತೆ ಮಾತನಾಡುತ್ತಾ, ”ಒಂದೇ ಒಂದು ಗೆಲುವು ಇಡೀ ತಂಡದಲ್ಲಿರುವ ಅಸಮಾಧಾನವನ್ನು ತೊಳೆದು ಹಾಕುತ್ತದೆ, ಆ ಒಂದು ಗೆಲುವು ನಮಗೆ ಈಗಲೇ ಬೇಕು” ಎಂದರು.

ಅದಾದ ಬಳಿಕ ಎರಡೂ ತಂಡಗಳ ನಡುವೆ ಮೊದಲ ಟಾಸ್ಕ್​ ನಡೆದು ಆ ಟಾಸ್ಕ್​ನಲ್ಲಿ ಪ್ರತಾಪ್ ತಂಡ ಉತ್ತಮವಾಗಿ ಆಡಿತು. ಗೆಲುವಿನ ಖುಷಿಯಲ್ಲಿ ತಂಡದ ಸದಸ್ಯರು ಮನಸ್ಥಾಪಗಳನ್ನು ಮರೆತು ಬಿಟ್ಟರು. ಆದರೆ ಅದಾದ ಬಳಿಕ ನಾಮಿನೇಷನ್ ಮಾಡಲು ನೀಡಿದ ಕಾರಣವನ್ನು ಗೆಸ್ ಮಾಡುವ ಆಟ ಶುರುವಾಯ್ತು. ನಾಮಿನೇಟ್ ಮಾಡಲು ನೀಡಿದ ಕಾರಣವನ್ನು ಯಾರು ಹೇಳಿರಬಹುದು ಎಂದು ಗೆಸ್ ಮಾಡಿ ಅವರ ಮುಖಕ್ಕೆ ಫೋಮ್ ಅನ್ನು ಬಳಿಯಬೇಕಿತ್ತು. ಆ ಟಾಸ್ಕ್​ನಲ್ಲಿ ಸಹ ಪ್ರತಾಪ್ ತಂಡ ಗೆದ್ದಿತಾದರೂ ಆ ಟಾಸ್ಕ್​ ಬಳಿಕ ಮನೆಯ ವಾತಾವರಣ ಮತ್ತೆ ಕೆಟ್ಟಿತು. ವಿಶೇಷವಾಗಿ, ಪ್ರತಾಪ್, ತನಿಷಾರನ್ನು ನಾಮಿನೇಟ್ ಮಾಡಿರುವ ವಿಷಯ ತನಿಷಾಗೆ ಗೊತ್ತಾಗಿ, ಪ್ರತಾಪ್ ಮೇಲೆ ತನಿಷಾ ರಾಂಗ್ ಆಗಿದ್ದಾರೆ. ಈಗ ತಂಡ ಮತ್ತೆ ಒಡೆದಿದೆ. ಮತ್ತೆ ತಂಡವನ್ನು ಹೇಗೆ ಪ್ರತಾಪ್ ಒಂದು ಗೂಡಿಸುತ್ತಾರೆ ಎಂಬುದು ಕುತೂಹಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 pm, Tue, 7 November 23

ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ