‘ಬಾಲ ಹಿಡ್ಕೊಂಡು ಓಡಾಡೋದಲ್ಲ’; ಹಳೆಯ ಚಾಳಿ ಮುಂದುವರಿಸಿದ ವಿನಯ್ ಆ್ಯಂಡ್ ಗ್ಯಾಂಗ್​ಗೆ ತನಿಷಾ ಎಚ್ಚರಿಕೆ

ನಮ್ರತಾಗೆ ಅತಿ ಹೆಚ್ಚು ಹಾಗೂ ಸಂಗೀತಾ-ತನಿಷಾಗೆ ಅತಿ ಕಡಿಮೆ ರೇಟಿಂಗ್ ನೀಡಿದ್ದಾರೆ ಸ್ನೇಹಿತ್. ಇದನ್ನು ತನಿಷಾ ಹಾಗೂ ಸಂಗೀತಾ ಪ್ರಶ್ನಿಸಿದ್ದಾರೆ. ‘ನಾವು ಫ್ಲರ್ಟ್ ಮಾಡೋಕೆ ಅವಕಾಶ ನೀಡಿಲ್ಲ, ಅದಕ್ಕೆ ನಿಮ್ಮ ಪ್ರೀತಿ ಪಾತ್ರರಾಗಿಲ್ಲ’ ಎಂದು ಸಂಗೀತಾ ಓಪನ್ ಆಗಿಯೇ ಹೇಳಿದರು. ‘

‘ಬಾಲ ಹಿಡ್ಕೊಂಡು ಓಡಾಡೋದಲ್ಲ’; ಹಳೆಯ ಚಾಳಿ ಮುಂದುವರಿಸಿದ ವಿನಯ್ ಆ್ಯಂಡ್ ಗ್ಯಾಂಗ್​ಗೆ ತನಿಷಾ ಎಚ್ಚರಿಕೆ
ವಿನಯ್-ತನಿಷಾ
Follow us
|

Updated on:Nov 07, 2023 | 8:18 AM

ಕಳೆದ ವಾರ ವಿನಯ್ ಅವರು ಒಂದು ಗ್ಯಾಂಗ್ ಮಾಡಿಕೊಂಡಿದ್ದರು. ಈ ಗ್ಯಾಂಗ್​ನಲ್ಲಿ ನಮ್ರತಾ (Namratha Gowda), ಸಂತೋಷ್ ಸೇರಿ ಅನೇಕರು ಇದ್ದರು. ‘ಇದೊಂದು ಹೊಲಸು ಗುಂಪುಗಾರಿಕೆ’ ಎಂದು ಸುದೀಪ್ ಹೇಳಿದ್ದರು. ಇವರು ಎಲ್ಲರೂ ಬದಲಾಗಬಹುದು ಎಂದು ಭಾವಿಸಿದ್ದರು. ಆದರೆ, ಆ ರೀತಿ ಆಗೋ ರೀತಿ ಕಾಣುತ್ತಿಲ್ಲ. ವಿನಯ್ ಗುಂಪುಗಾರಿಕೆ ಮುಂದುವರಿಸಿದ್ದಾರೆ. ಈ ವಿಚಾರವನ್ನು ತನಿಷಾ ತೆಗೆದುಕೊಂಡಿದ್ದಾರೆ. ವಿನಯ್ ಆ್ಯಂಡ್ ಗ್ಯಾಂಗ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಬಿಗ್ ಬಾಸ್​ನಲ್ಲಿ ಈ ವಾರ ಒಂದು ಚಟುವಟಿಕೆ ನೀಡಲಾಗಿತ್ತು. ಬೋರ್ಡ್ ಮೇಲೆ ಒಂದೊಂದು ಹೆಸರು ಇರುತ್ತದೆ. ಆ ಹೆಸರು ಲಕೋಟೆಯಲ್ಲಿ ಬರೆದಿರುತ್ತದೆ. ಪ್ರತಿ ಸ್ಪರ್ಧಿ ಬಂದು ಲಕೋಟೆ ಎತ್ತಬೇಕು. ಅಲ್ಲಿ ಬಂದಿರುವ ಹೆಸರನ್ನು ಓದಿಕೊಂಡು ಅತಿ ಹೆಚ್ಚು ಹಾಗೂ ಅತೀ ಕಡಿಮೆ ಎಂದು ಸ್ಪರ್ಧಿಗಳನ್ನು ನಿಲ್ಲಿಸಬೇಕು. ಸ್ನೇಹಿತ್​ಗೆ ಪ್ರೀತಿ ಪಾತ್ರರು ಎನ್ನುವ ಲಕೋಟೆ ಬಂದಿತ್ತು.

ನಮ್ರತಾಗೆ ಅತಿ ಹೆಚ್ಚು ಹಾಗೂ ಸಂಗೀತಾ-ತನಿಷಾಗೆ ಅತಿ ಕಡಿಮೆ ರೇಟಿಂಗ್ ನೀಡಿದ್ದಾರೆ ಸ್ನೇಹಿತ್. ಇದನ್ನು ತನಿಷಾ ಹಾಗೂ ಸಂಗೀತಾ ಪ್ರಶ್ನಿಸಿದ್ದಾರೆ. ‘ನಾವು ಫ್ಲರ್ಟ್ ಮಾಡೋಕೆ ಅವಕಾಶ ನೀಡಿಲ್ಲ, ಅದಕ್ಕೆ ನಿಮ್ಮ ಪ್ರೀತಿ ಪಾತ್ರರಾಗಿಲ್ಲ’ ಎಂದು ಸಂಗೀತಾ ಓಪನ್ ಆಗಿಯೇ ಹೇಳಿದರು. ‘ನೀವು ಕ್ಲಾಸ್ ಮಾನಿಟರ್ ತರ ಆಡ್ತೀರಾ’ ಎಂದು ಸ್ನೇಹಿತ್ ಹೇಳಿದರು. ಆದರೆ, ಇದನ್ನು ತನಿಷಾ ಹಾಗೂ ಸಂಗೀತಾ ಒಪ್ಪಲಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್​ಗಿಲ್ಲ ಧೈರ್ಯ? ಎಲ್ಲರದ್ದೂ ಇದೇ ಅಭಿಪ್ರಾಯ

ಇಲ್ಲಿ ಉದಾಹರಣೆ ಕೊಡುವಾಗ ತನಿಷಾ ವಿನಯ್ ಹೆಸರು ತೆಗೆದುಕೊಂಡರು. ಆಗ ವಿನಯ್ ‘ಶ್​​.. ಶ್​’ ಎಂದು ಬಾಯಮೇಲೆ ಬೆರಳಿಟ್ಟರು. ‘ಏನು’ ಎಂದು ತನಿಷಾ ಜೋರಾಗಿಯೇ ಕೇಳಿದರು. ಇದಕ್ಕೆ ವಿನಯ್, ‘ನಾನು ಹುಳದ ಜೊತೆ ಮಾತಾಡ್ತಾ ಇದೀನಿ’ ಎಂದರು. ಆಗ ವಿನಯ್ ಆ್ಯಂಡ್ ಗ್ಯಾಂಗ್ ಜೋರಾಗಿ ನಕ್ಕಿತು. ‘ಅತಿಯಾಗಿ ಆಟ ಆಡಿದ್ರೆ ಏನಾಗುತ್ತದೆ ಅಂತ ಎಲ್ಲರಿಗೂ ಗೊತ್ತು. ಎಕ್ಸ್​ಪ್ರೆಷನ್ ಕೊಡೋರು ಒಂದಿನ ಹಳ್ಳಕ್ಕೆ ಬೀಳ್ತೀರಲ್ಲ ಆಗ ಗೊತ್ತಾಗುತ್ತದೆ. ಆನೆ ಬಾಲ ಹಿಡ್ಕೊಂಡು ಓಡಾಡೋದಲ್ಲ. ಮಾತಾಡೋಕು ತಾಕತ್ ಬೇಕು’ ಎಂದು ತನಿಷಾ ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:15 am, Tue, 7 November 23

ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್