ಆ್ಯಂಕರ್​ಗೆ ದುಡ್ಡು ಕೊಡಲ್ಲ ಸೃಜನ್ ಲೋಕೇಶ್; ತಾರಾ ಹೊಸ ಆರೋಪ

| Updated By: ರಾಜೇಶ್ ದುಗ್ಗುಮನೆ

Updated on: Feb 26, 2024 | 8:16 AM

‘ನನ್ನಮ್ಮ ಸೂಪರ್​ಸ್ಟಾರ್’ ವೇದಿಕೆ ಮೇಲೆ ಬೀನ್ ಬ್ಯಾಗ್ ಹಾಕಲಾಯಿತು. ಆಗ ವರ್ತೂರು ಸಂತೋಷ್ ಹಾಗೂ ತಾರಾ ಅನುರಾಧಾ ಅವರು ಬೀನ್ ಬ್ಯಾಗ್ ಮೇಲೆ ಕುಳಿತು ಮಾತುಕತೆ ನಡೆಸಿದರು. ಈ ವೇಳೆ ತಾರಾ ಅವರು ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಮಾತುಗಳು ಗಮನ ಸೆಳೆದಿದೆ.

ಆ್ಯಂಕರ್​ಗೆ ದುಡ್ಡು ಕೊಡಲ್ಲ ಸೃಜನ್ ಲೋಕೇಶ್; ತಾರಾ ಹೊಸ ಆರೋಪ
ಸೃಜನ್ ಲೋಕೇಶ್
Follow us on

ಸೃಜನ್ ಲೋಕೇಶ್ (Srujan Lokesh) ಅವರು ಹಿರಿತೆರೆಗಿಂತ ಕಿರುತೆರೆಯಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಫೇಮಸ್ ಆಗಿದ್ದಾರೆ. ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಕೆಲವು ರಿಯಾಲಿಟಿ ಶೋಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಸೃಜನ್ ಲೋಕೇಶ್ ಅವರು ಈಗ ‘ನನ್ನಮ್ಮ ಸೂಪರ್​ಸ್ಟಾರ್ ಸೀಸನ್ 3’ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದಾರೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ತಾರಾ ಅವರು ಹೊಸ ಆರೋಪ ಮಾಡಿದ್ದಾರೆ. ಹಾಗಂತ ಇದನ್ನು ಅವರು ಗಂಭೀರವಾಗಿ ಹೇಳಿಲ್ಲ. ಇದನ್ನು ಅವರು ಹೇಳಿದ್ದು ಫನ್​ಗಾಗಿ.

‘ನನ್ನಮ್ಮ ಸೂಪರ್​ಸ್ಟಾರ್ 3’ ಕಾರ್ಯಕ್ರಮಕ್ಕೆ ಸೃಜನ್ ಲೋಕೇಶ್, ತಾರಾ ಹಾಗೂ ಅನು ಪ್ರಭಾಕರ್ ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ಸುಷ್ಮಾ ರಾವ್ ಅವರು ಈ ಕಾರ್ಯಕ್ರಮಕ್ಕೆ ಆ್ಯಂಕರ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತೂರು ಸಂತೋಷ್ ಅವರು ಆಗಮಿಸಿದ್ದರು. ಇವರು ಸಖತ್ ಫನ್ ಆಗಿ ಮಾತನಾಡಿದ್ದಾರೆ. ತಾರಾ ಹಾಗೂ ವರ್ತೂರು ಸಂತೋಷ್ ಅವರ ಮಾತುಕತೆ ಗಮನ ಸೆಳೆದಿದೆ.

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತು ಮಾತುಕತೆ ನಡೆಸುತ್ತಿದ್ದರು. ‘ನನ್ನಮ್ಮ ಸೂಪರ್​ಸ್ಟಾರ್’ ವೇದಿಕೆ ಮೇಲೆ ಬೀನ್ ಬ್ಯಾಗ್ ಹಾಕಲಾಯಿತು. ಆಗ ವರ್ತೂರು ಸಂತೋಷ್ ಹಾಗೂ ತಾರಾ ಅನುರಾಧಾ ಅವರು ಕುಳಿತು ಮಾತುಕತೆ ನಡೆಸಿದರು. ಈ ವೇಳೆ ತಾರಾ ಅವರು ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

‘ಸೃಜನ್ ಲೋಕೇಶ್ ಗೊತ್ತಾ? ಅವರು ಲೋಕೇಶ್ ಅವರ ಮಗ. ಈ ಶೋಗೆ ಅವರೇ ಪ್ರೊಡ್ಯೂಸರ್. ಅಷ್ಟೊಂದು ದುಡ್ಡು ಬರುತ್ತದೆ. ಆದರೆ, ಆ್ಯಂಕರ್​ಗೆ ಮಾತ್ರ ಅವರು ದುಡ್ಡ ನೀಡಲ್ಲ’ ಎಂದರು ತಾರಾ. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಸೃಜನ್ ಲೋಕೇಶ್ ಕೂಡ ಈ ಮಾತಿಗೆ ನಕ್ಕಿದ್ದಾರೆ.

ಸೃಜನ್ ಅವರ ತಂದೆ ಲೋಕೇಶ್ ಚಿತ್ರರಂಗದ ಹಿನ್ನೆಲೆ ಹೊಂದಿರುವುದರಿಂದ ಅವರಿಗೆ ಸುಲಭದಲ್ಲಿ ಅವಕಾಶ ಸಿಕ್ಕಿತು. 1991ರಲ್ಲಿ ಬಂದ ‘ವೀರಪ್ಪನ್’ ಸಿನಿಮಾದಲ್ಲಿ ಬಾಲ ನಟನಾಗಿ ಸೃಜನ್ ಕಾಣಿಸಿಕೊಂಡರು. 2002ರಲ್ಲಿ ಸೃಜನ್ ಅವರು ಹೀರೋ ಆದರು. ‘ನೀಲ ಮೇಘ ಶ್ಯಾಮ’ ಹೀರೋ ಆಗಿ ಅವರ ಮೊದಲ ಸಿನಿಮಾ. ನಂತರ ಹಲವು ಸಿನಿಮಾಗಳಲ್ಲಿ ಸೃಜನ್ ಲೋಕೇಶ್ ನಟಿಸಿದರು.

ಇದನ್ನೂ ಓದಿ: ‘ಜಿಎಸ್​ಟಿ’ ಜೊತೆ ಬರ್ತಿದ್ದಾರೆ ಸೃಜನ್ ಲೋಕೇಶ್, ಇದು ತೆರಿಗೆಯಲ್ಲ

2011ರಿಂದ ಸೃಜನ್ ಅವರಿಗೆ ಕಿರುತೆರೆ ಜೊತೆ ನಂಟು ಬೆಳೆಯಿತು. ಮೊದಲು ‘ಮಜಾ ವಿತ್ ಸೃಜ’ ಕಾರ್ಯಕ್ರಮ ಆರಂಭಿಸಿದರು. ನಂತರ ಹಲವು ಶೋಗಳನ್ನು ಅವರು ನಡೆಸಿಕೊಟ್ಟರು. ಇದರ ಜೊತೆಗೆ ಅನೇಕ ಶೋಗಳಿಗೆ ಜಡ್ಜ್​ ಆಗಿದ್ದಾರೆ. ‘ಮಜಾ ಟಾಕೀಸ್’ ಕಾರ್ಯಕ್ರಮ ಕೂಡ ಅವರ ನಿರೂಪಣೆಯಲ್ಲಿ ಮೂಡಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ