‘ಬಿಗ್ ಬಾಸ್’ನ ಸುದೀಪ್ ಅವರು ಸಾಕಷ್ಟು ಇಷ್ಟಪಡುತ್ತಾರೆ. ಇದರ ಸ್ಪರ್ಧಿಗಳನ್ನು ಮನೆಯವರಂತೆ ನೋಡುತ್ತಾರೆ. ಈ ಕಾರಣಕ್ಕೆ ಸ್ಪರ್ಧಿಗಳ ಆಸೆಯನ್ನು ಈಡೇರಿಸಲು ಅವರು ಎಂದಿಗೂ ಹಿಂದೇಟು ಹಾಕುವುದೇ ಇಲ್ಲ ಎಂಬ ವಿಚಾರ ಅನೇಕರಿಗೆ ತಿಳಿದಿದೆ. ಈ ಸೀಸನ್ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸಿದ್ದರು. ಈಗ ರಜತ್‌ಗೆ ಮತ್ತೊಂದು ಗಿಫ್ಟ್ ನೀಡಿದ್ದಾರೆ. ಅದೇನು ಎಂಬುದನ್ನು ಇಲ್ಲಿ ನೋಡೋಣ.
‘ಬಿಗ್ ಬಾಸ್’ನಲ್ಲಿ ಈ ಮೊದಲು ಚೈತ್ರಾ ಹಾಗೂ ರಜತ್‌ಗೆ ಒಂದೊಂದು ಕಿವಿ ಸ್ಟಡ್ನ ಉಡುಗೊರೆ ಆಗಿ ಕೊಟ್ಟಿದ್ದರು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿತ್ತು. ಇದು ಚಿನ್ನದ್ದೇ ಆಗಿತ್ತು ಅನ್ನೋದು ವಿಶೇಷ. ಈಗ ರಜತ್ ಅವರಿಗೆ ವಿಶೇಷ ಜಾಕೆಟ್ ಕೊಟ್ಟು ಕಳುಹಿಸಿದ್ದಾರೆ. ರಜತ್‌ಗೆ ಮಾತ್ರ ಸುದೀಪ್ ಉಡುಗೊರೆ ಕಳುಹಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಎಲ್ಲ ಸ್ಪರ್ಧಿಗಳು ಬಂದು ತಮ್ಮಿಷ್ಟದ ಆಸೆ ಹೇಳಿಕೊಳ್ಳಬೇಕು. ಇದು ಸಾಧ್ಯ ಆದರೆ ಬಿಗ್ ಬಾಸ್ ಈಡೇರಿಸುತ್ತಾರೆ. ಭವ್ಯಾ ಅವರು ತಂದೆ ಬಿಗ್ ಬಾಸ್ ಮನೆಗೆ ಬರಬೇಕು ಎಂದು ಕೇಳಿಕೊಂಡರು. ತ್ರಿವಿಕ್ರಂ ಅವರು ಬಿಗ್ ಬಾಸ್ನಿಂದ ಲೆಟರ್ ಕೇಳಿದರು. ರಜತ್ ಅವರು ಸುದೀಪ್ ಅವರು ಒಂದು ದಿನ ಹಾಕಿದ್ದ ವಿಶೇಷ ಕೋಟ್ನ ಕೇಳಿದ್ದರು. ಅದರ ಬದಲು ಸುದೀಪ್ ಬೇರೆ ಕೋಟ್ ಕೊಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ:ಸುದೀಪ್ ಬಿಗ್ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ನಟ ಹಾಗೂ ಬಿಗ್ ಬಾಸ್ನ ಮಾಜಿ ಸ್ಪರ್ಧಿ ರಾಜೀವ್ ದೊಡ್ಮನೆ ಒಳಗೆ ಬಂದರು. ‘ನಾನು ರಜತ್ ಆಸೆ ಈಡೇರಿಸಲು ಬಂದಿದ್ದೇನೆ. ಅವರು ಅಣ್ಣನ ಒಂದು ವಿಶೇಷ ಕೋಟ್ ಕೇಳಿದ್ದರು. ಅದನ್ನು ನನಗೆ ಕೊಟ್ಟು ಕಳುಹಿಸಿದ್ದಾರೆ. ಆದರೆ, ಆ ಜಾಕೆಟ್ ಅಲ್ಲ. ಸುದೀಪ್ ಅವರು ಒಂದು ಹಂತ ಮೇಲೆ ಯೋಚಿಸುತ್ತಾರೆ. ಇನಾಗರೇಷನ್ ದಿನ ಹಾಕಿದ್ದ ಜಾಕೆಟ್ ಕಳುಹಿಸಿದ್ದಾರೆ’ ಎಂದು ರಾಜೀವ್ ಹೇಳಿದರು. ಮತ್ತು ಕೋಟ್ನ ರಜತ್‌ಗೆ ಹಸ್ತಾಂತರಿಸಿದರು.
‘ಸುದೀಪ್ ಸರ್ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಗಾಲ್ಲ. ಸಣ್ಣದನ್ನು ಎಕ್ಸ್ಪೆಕ್ಟ್ ಮಾಡ್ತೀನಿ. ನೀವು ದೊಡ್ಡದನ್ನು ಕಳುಹಿಸಿ ಕೊಡ್ತೀರಿ. ಶನಿವಾರ ಇದೇ ಜಾಕೆಟ್ ಹಾಕಿಕೊಳ್ಳುತ್ತೇನೆ. ಹೊರ ಬಂದ ಬಳಿಕ ಪಾರ್ಟಿ ಮಾಡೋಣ. ನನ್ನ ಆಸೆ ಈಡೇರಿಸಿದ್ದಕ್ಕೆ ಧನ್ಯವಾದ’ ಎಂದರು ರಜತ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ