Sign In

By signing in or creating an account, you agree with Associated Broadcasting Company's Terms & Conditions and Privacy Policy.

Sudha Murty: ಮೊದಲ ಭೇಟಿಯಲ್ಲಿ ಭಾವಿ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ನೋಡಿ ಯಾರಪ್ಪಾ ಇವ ಬಸ್​ ಕಂಡಕ್ಟರ್​ ಅಂದುಕೊಂಡ​ ಸುಧಾ ಮೂರ್ತಿ!

Infosys NR Narayana Murthy: ಅಲ್ಲದೆ ಹಿಂದಿನ ಸಂದರ್ಶನದಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಪರಸ್ಪರ ಅಭಿರುಚಿಯನ್ನು ಗೌರವಿಸುತ್ತಾರೆ. ಪರಸ್ಪರರ ಮೇಲ್ ಚೆಕ್ ಮಾಡುವುದಿಲ್ಲ ಎಂದು ಸುಧಾ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

Sudha Murty: ಮೊದಲ ಭೇಟಿಯಲ್ಲಿ ಭಾವಿ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ನೋಡಿ ಯಾರಪ್ಪಾ ಇವ ಬಸ್​ ಕಂಡಕ್ಟರ್​ ಅಂದುಕೊಂಡ​ ಸುಧಾ ಮೂರ್ತಿ!
ಭಾವಿ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ನೋಡಿ ಯಾರಪ್ಪಾ ಇವ ಬಸ್​ ಕಂಡಕ್ಟರ್​ ಎಂದುಕೊಂಡ​ ಸುಧಾ ಮೂರ್ತಿ
Follow us
ಸಾಧು ಶ್ರೀನಾಥ್​
|

Updated on: May 09, 2023 | 11:58 AM

ಜಗದ್ವಿಖ್ಯಾತ ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ಎನ್​ ಆರ್​​ ನಾರಾಯಣ ಮೂರ್ತಿಯವರ (NR Narayana Murthy) ಪತ್ನಿ ಸುಧಾಮೂರ್ತಿ (Sudha Murty) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬರಹಗಾರರಾಗಿ, ಸಮಾಜಮುಖಿಯಾಗಿ ಉದಾತ್ತ ವ್ಯಕ್ತಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ ನಮ್ಮ ಕನ್ನಡತಿ ಸುಧಾ! ಸೋನಿ ಹಿಂದಿ ಮನರಂಜನಾ ಚಾನೆಲ್​ ನಡೆಸಿಕೊಡುವ ‘ದಿ ಕಪಿಲ್ ಶರ್ಮಾ ಶೋ’ದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಅವರ ಜೊತೆ ನಟಿ ರವೀನಾ ಟಂಡನ್ ಮತ್ತು ನಿರ್ಮಾಪಕ ಗುಣಿತ್ ಮೋಂಗಾ ಕೂಡ ಇದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ವಿಡಿಯೋವನ್ನು ನಿರ್ವಾಹಕರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸುಧಾಮೂರ್ತಿ ಅವರು ತಮ್ಮ ಪತಿ ನಾರಾಯಣ ಮೂರ್ತಿ ಅವರನ್ನು ಮೊದಲ ಸಲ ಭೇಟಿಯಾದ ಬಗೆಯನ್ನು ಹೇಳಿದ್ದಾರೆ. ತನಗೆ ಪ್ರಸನ್ನ ಎಂಬ ಗೆಳೆಯನಿದ್ದು, ತನಗಾಗಿ ಆತ ಪ್ರತಿದಿನ ನಾರಾಯಣ ಮೂರ್ತಿ ಎಂಬ ಪುಸ್ತಕ ತರುತ್ತಿದ್ದ. ಯಾವುದೆ ಪುಸ್ತಕ ತಂದುಕೊಟ್ಟರೂ ಅದಕ್ಕೆ ನಾರಾಯಣ ಮೂರ್ತಿ ಎಂಬ ಹೆಸರು ಅಂಟಿಕೊಂಡಿರುತ್ತಿತ್ತು. ಅದಕ್ಕೇ ಆ ಹೆಸರು ಕಂಡಾಗಲೆಲ್ಲ ನಮ್ಮ ಸುಧಕ್ಕ ಅದು ಯಾರದೋ ಅಂತರಾಷ್ಟ್ರೀಯ ಬಸ್ ಕಂಡಕ್ಟರ್ (bus conductor) ಹೆಸರು ಇರಬೇಕು ಎಂದು ಭಾವಿಸಿದ್ದರಂತೆ. ಹಾಗೆ ಹೇಳುತ್ತಿದ್ದಂತೆ ಷೋದಲ್ಲಿ ಭಾಗವಹಿಸಿದ್ದವರೆಲ್ಲಾ ನಗೆಗಡಲಲ್ಲಿ ತೇಲುವುದು ಆ ವಿಡಿಯೋದಲ್ಲಿ ಕಾಣಬರುತ್ತದೆ.

ಆದರೆ ಇದಕ್ಕಿಂತಾ ಮಜಾ ಪ್ರಸಂಗವೆಂದರೆ ಅದೇ ಸ್ನೇಹಿತ ಪ್ರಸನ್ನ ನಾರಾಯಣಮೂರ್ತಿ ಅವರನ್ನು ನಿಜವಾಗಿಯೂ ಸುಧಾ ಮನೆಗೆ ಕರೆತಂದಾಗ ನಡೆದ ಘಟನಾವಳಿ. ಅದನ್ನು ಸುಧಾಮೂರ್ತಿ ಅವರ ಬಾಯಿಂದಲೇ ಕೇಳಬೇಕು. ನಾರಾಯಣ ಮೂರ್ತಿ ಅವರನ್ನು ಭೇಟಿಯಾಗುವ ಮುನ್ನ ಅವರು ಸಿನಿಮಾ ಹೀರೋನಂತೆ ಸುಂದರವಾಗಿ ಇರುತ್ತಾರೆ. handsome, dashing film hero ಎಂದು ಭಾವಿಸಿದ್ದೆ. ಆದರೆ ಬಾಗಿಲು ತೆರೆದು ಕಂಡಾಗ ಯಾರಪ್ಪಾ ಈ ಬಾಲಕ? ಒಳ್ಳೇ ಬಸ್​​ ಕಂಡಕ್ಟರ್​​​ ಥರಾ ಇದಾನಲ್ಲಾ ಎಂದು ಭಾವಿಸಿದೆ ಎಂದಾಗ ಸೆಟ್​​ನಲ್ಲಿದ್ದವರೆಲ್ಲಾ ಮನಸಾರೆ ನಕ್ಕರು.

ಅಲ್ಲದೆ ಹಿಂದಿನ ಸಂದರ್ಶನದಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಪರಸ್ಪರ ಅಭಿರುಚಿಯನ್ನು ಗೌರವಿಸುತ್ತಾರೆ. ತಮ್ಮ ಕುಟುಂಬ ಮತ್ತು ಮಕ್ಕಳನ್ನು ಇಬ್ಬರೂ ನೋಡಿಕೊಳ್ಳುತ್ತಿದ್ದೆವು ಎಂದು ಸುಧಾಮೂರ್ತಿ ಸಂದರ್ಶನದಲ್ಲಿ ಹೇಳಿದ್ದಾರೆ. ಸುಧಾ ಅವರು ಈಗ ಮೊದಲಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರಂತೆ. ನಾರಾಯಣ ಮೂರ್ತಿ ಇದಕ್ಕೆ ಎಂದೂ ಆಕ್ಷೇಪಿಸಲಿಲ್ಲ. ಒಬ್ಬರಿಗೊಬ್ಬರು ಸಲಹೆ ನೀಡುತ್ತೇವೆ. ಆದರೆ ಪರಸ್ಪರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಪರಸ್ಪರರ ಮೇಲ್ ಚೆಕ್ ಮಾಡುವುದಿಲ್ಲ ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ