‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ವಾರದ ಮಧ್ಯವೇ ಎಲಿಮಿನೇಟ್ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರು ನಡೆದುಕೊಂಡ ರೀತಿ. ಬಿಗ್ ಬಾಸ್ನಲ್ಲಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಅದು ಮಿತಿಮೀರಿತ್ತು. ಅವರು ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದೇ ಅವರು ಹೊರ ಹೋಗಲು ಕಾರಣ ಆಯಿತು. ಈ ಬಗ್ಗೆ ಗೌತಮಿ ಮಾತನಾಡಿದ್ದಾರೆ.
ಗೌತಮಿ ಜಾಧವ್ ಅವರು ‘ಸತ್ಯ’ ಧಾರಾವಾಹಿಯಲ್ಲಿ ನಟಿಸಿದ್ದರು. ಅವರು ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರು ಹೆಚ್ಚು ಸೈಲೆಂಟ್ ಆಗಿದ್ದಾರೆ. ಜಗದೀಶ್ ಅವರು ಕೆಟ್ಟ ಪದ ಬಳಕೆ ಮಾಡಿದಾಗ ಸಿಟ್ಟಾಗಿದ್ದರು. ಜಗದೀಶ್ ಅವರು ಎಲಿಮಿನೇಟ್ ಆದ ಬಳಿಕ ಗೌತಮಿ ಜಾಧವ್ ಈ ಬಗ್ಗೆ ಮಾತನಾಡಿದ್ದಾರೆ.
‘ನಾನು ಅಮ್ಮನ (ದೇವಿ) ಬಳಿ ಈ ಬಗ್ಗೆ ಕೇಳಿಕೊಳ್ಳುತ್ತಲೇ ಇದ್ದೆ. ಕೊನೆಗೂ ಅದು ನಡೆಯಿತು’ ಎಂದು ಗೌತಮಿ ಜಾಧವ್ ಅವರು ಹೇಳಿದ್ದಾರೆ. ಅಲ್ಲದೆ, ‘ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಹೀಗೆ ಆಗೋದು’ ಎಂದು ಅವರು ಹೇಳಿದ್ದಾರೆ.
ಹಂಸಾ ವಿರುದ್ಧ ಜಗದೀಶ್ ಅವರು ಅವಾಚ್ಯ ಪದ ಬಳಕೆ ಮಾಡಿದ್ದರು. ಇದರಿಂದ ಅವರು ಸಾಕಷ್ಟು ನೊಂದಿದ್ದರು. ಈ ಘಟನೆ ಅವರನ್ನು ಕೆರಳಿಸಿದೆ. ‘ಇದನ್ನು ಸಹಿಸಿಕೊಂಡು ಇರೋಕೆ ಆಗಲ್ಲ, ನೀವೇ ಏನಾದರೂ ಮಾಡ್ತೀರಾ ಅಥವಾ ನಾವೇ ಮಾಡಬೇಕಾ’ ಎಂದು ಹಂಸಾ ಅವರು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ‘ಬಿಗ್ ಬಾಸ್’ನಿಂದ ನೇರವಾಗಿ ಜೈಲು ಸೇರಿದ ಚೈತ್ರಾ ಕುಂದಾಪುರ
ಜಗದೀಶ್ ಹಾಗೂ ರಂಜಿತ್ ಎಲಿಮಿನೇಷನ್ ಪ್ರಕಾರ ‘ಬಿಗ್ ಬಾಸ್’ ಮನೆಯಲ್ಲಿ ಈಗ 14 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಶೀಘ್ರವೇ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.