ತಮಗಿಂತ ಕೆಳಗಿದ್ದಾರೆ ಎಂದು ನಕ್ಕಿದ್ದ ತ್ರಿವಿಕ್ರಂ-ರಜತ್​ಗೆ ಸುತ್ತಿ ಬಂತು ಕರ್ಮ

|

Updated on: Jan 15, 2025 | 10:58 AM

ಬಿಗ್ ಬಾಸ್ ಕನ್ನಡದಲ್ಲಿ ಈ ವಾರದ ವೈಯಕ್ತಿಕ ಟಾಸ್ಕ್​ನಲ್ಲಿ ತ್ರಿವಿಕ್ರಂ ಮತ್ತು ರಜತ್ ಅವರು ಆರಂಭದಲ್ಲಿ ಉತ್ತಮವಾಗಿ ಆಡಿದರು. ಆದರೆ, ಕೊನೆಯ ಟಾಸ್ಕ್​ ಪೂರ್ಣಗೊಳ್ಳುವವರೆಗೆ ಅವರು ಪಾತಾಳ ತಲುಪಿದ್ದರು. ಇದು ಅವರ ಅಹಂಕಾರ ಮತ್ತು ಇತರರನ್ನು ಅವಮಾನಿಸಿದ್ದಕ್ಕೆ ದೊರೆತ ಫಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ತಮಗಿಂತ ಕೆಳಗಿದ್ದಾರೆ ಎಂದು ನಕ್ಕಿದ್ದ ತ್ರಿವಿಕ್ರಂ-ರಜತ್​ಗೆ ಸುತ್ತಿ ಬಂತು ಕರ್ಮ
ತ್ರಿವಿಕ್ರಂ-ರಜತ್
Follow us on

ಬಿಗ್ ಬಾಸ್ ಆಟದಲ್ಲಿ ಯಾವಾಗ ಯಾವ ತಿರುವುಗಳು ಎದುರಾಗುತ್ತವೆ ಎಂದು ಹೇಳೋಕೆ ಸಾಧ್ಯವೇ ಇಲ್ಲ. ಎಷ್ಟೇ ಶ್ರಮ ಹಾಕಿದರೂ ಅಲ್ಲಿ ನಡೆಯೋದು ಪಕ್ಕಾ ಅದೃಷ್ಟದ ಆಟ. ಈ ಕಾರಣಕ್ಕೆ ಗೆದ್ದಾಗ ಖುಷಿಪಡಬಾರದು, ಸೋತಾಗ ಕುಗ್ಗಬಾರದು. ಬಿಗ್ ಬಾಸ್ ಮನೆಯಲ್ಲಿ ಕರ್ಮ ಬೇಗ ಕೆಲಸ ಮಾಡುತ್ತದೆ ಎಂಬುದನ್ನು ಸ್ಪರ್ಧಿಗಳು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.

ಬಿಗ್ ಬಾಸ್​ನಲ್ಲಿ ಈ ವಾರ ಸಂಪೂರ್ಣ ವೈಯಕ್ತಿಕ ಟಾಸ್ಕ್​ಗಳನ್ನು ನೀಡಲಾಗಿತ್ತು. ಒಟ್ಟೂ ಆರು ಟಾಸ್ಕ್​ಗಳನ್ನು ನೀಡಲಾಗಿತ್ತು. ಕೆಲವು ಟಾಸ್ಕ್​​ಗಳು ಪೂರ್ಣಗೊಂಡಾಗ ಅಂಕಪಟ್ಟಿ ಎದುರು ಬಂದಿದ್ದ ತ್ರಿವಿಕ್ರಂ ಹಾಗೂ ರಜತ್ ಅವರು ತಮಗಿಂತ ಕೆಳಗಿದ್ದವರನ್ನು ಆಡಿಕೊಂಡು ನಕ್ಕಿದ್ದರು. ಮಂಜು ಅವರು ಜೀರೋ ಅಂಕ ಪಡೆದಿದ್ದಾರೆ, ಗೌತಮಿ ಅವರು ಇನ್ನೂ ತಮಗಿಂತ ಕೆಳಗಿದ್ದಾರೆ ಎಂದೆಲ್ಲ ಹೇಳಿದ್ದರು. ‘ನನಗೆ 25 ಅಂಕ ಸಿಕ್ಕಿದೆ ಎಂದು ಬೇಸರ ಇಲ್ಲ. ಮಂಜುಗೆ ಜೀರೋ ಅಂಕ ಸಿಕ್ಕಿದೆ’ ಎಂದು ನಕ್ಕಿದ್ದರು ರಜತ್. ಆದರೆ, ಕೊನೆಯ ಆಟ ಬಂದಾಗ ಎಲ್ಲವೂ ಬದಲಾಗಿ ಹೋಗಿತ್ತು.

ಕೊನೆಯ ಟಾಸ್ಕ್ ಪೂರ್ಣಗೊಂಡಾಗ ಅಂಕಪಟ್ಟಿಯಲ್ಲಿ ಅತೀ ಕೆಳಕ್ಕೆ ಇದ್ದಿದ್ದು ತ್ರಿವಿಕ್ರಂ ಹಾಗೂ ರಜತ್ ಅವರೇ ಆಗಿದ್ದರು. ಧನರಾಜ್ 440 ಅಂಕ, ಮೋಕ್ಷಿತಾ 225 ಅಂಕ, ಭವ್ಯಾ 115 ಅಂಕ, ಗೌತಮಿ 110 ಅಂಕ ಹಾಗೂ ಮಂಜು 125 ಅಂಕ ಪಡೆದುಕೊಂಡಿದ್ದರು. ಕೊನೆಯ ಎರಡು ಸ್ಥಾನದಲ್ಲಿ ಇದ್ದ ರಜತ್ 50 ಅಂಕ ಹಾಗೂ ತ್ರಿವಿಕ್ರಂ 75 ಅಂಕ ಗಳಿಸಲಷ್ಟೇ ಶಕ್ಯವಾದರು.

ಇದನ್ನೂ ಓದಿ: ಬಿಗ್ ಬಾಸ್​​ನಲ್ಲಿ ಇವರ ಧ್ವನಿಯನ್ನು ಎಷ್ಟು ಜನ ಮಿಸ್ ಮಾಡಿಕೊಳ್ಳುತ್ತಿದ್ದೀರಿ?

ಈ ಟಾಸ್ಕ್​ನ ಧನರಾಜ್ ಗೆದ್ದು ಎಲಿಮಿನೇಷ್​ನಿಂದ ಬಚಾವ್ ಆಗಿದ್ದಾರೆ. ಇತ್ತ ತ್ರಿವಿಕ್ರಂ ಹಾಗೂ ರಜತ್ ಜೊತೆ ಉಳಿದ ಸ್ಪರ್ಧಿಗಳು ಮಧ್ಯವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಮುಂದುವರಿದಿದ್ದಾರೆ. ತ್ರಿವಿಕ್ರಂ ಹಾಗೂ ರಜತ್ ಅವರ ಮಾತುಕತೆ ಮತ್ತು ಅದರಿಂದ ಬಂದ ಫಲಿತಾಂಶವನ್ನು ಅನೇಕರು ಕರ್ಮ ಎಂದಿದ್ದಾರೆ.

ತ್ರಿವಿಕ್ರಂ ಅವರು ಆಟದಲ್ಲಿ ಅವಕಾಶ ಸಿಗದೆ, ಆಟ ಸಿಕ್ಕಾಗ ಗೆಲ್ಲಲಾಗದೆ ಫ್ರಸ್ಟ್ರೇಟ್ ಆಗಿದ್ದಾರೆ. ಇದರಿಂದ ಅವರ ಬಾಯಲ್ಲಿ ಮಿತಿಮೀರಿ ಶಬ್ದಗಳ ಬಳಕೆ ಆಗುತ್ತಿದೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.