ಟಾಸ್ಕ್ ರದ್ದಾಗಿದ್ದಕ್ಕೆ ಶಿಕ್ಷೆ ಅನುಭವಿಸಿದ್ದು ಯಾರು? ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡ ತ್ರಿವಿಕ್ರಂ

|

Updated on: Dec 19, 2024 | 7:27 AM

ಬಿಗ್ ಬಾಸ್ ಕನ್ನಡ ಸೀಸನ್ 11ರ 12ನೇ ವಾರದಲ್ಲಿ ಸ್ಪರ್ಧೆ ಜೋರಾಗಿದೆ. ಚೈತ್ರಾ ಅವರ ಮೇಲೆ ಅನ್ಯಾಯದ ಆರೋಪಗಳು ಕೇಳಿಬಂದವು. ರಜತ್ ಮತ್ತು ತ್ರಿವಿಕ್ರಂ ತಂಡದ ನಾಯಕರಾಗಿದ್ದು, ಟಾಸ್ಕ್‌ಗಳಲ್ಲಿ ಸೋಲು ಅನುಭವಿಸಿದ ರಜತ್ ತಂಡದ ಸದಸ್ಯರು ನಾಮಿನೇಟ್ ಆದರು. ಅಂತಿಮ ನಾಮಿನೇಷನ್ ಪ್ರಕ್ರಿಯೆಯಲ್ಲಿ ತ್ರಿವಿಕ್ರಂ ಅವರು ತಮ್ಮದೇ ತಂಡದಿಂದ ನಾಮಿನೇಟ್ ಆದರು.

ಟಾಸ್ಕ್ ರದ್ದಾಗಿದ್ದಕ್ಕೆ ಶಿಕ್ಷೆ ಅನುಭವಿಸಿದ್ದು ಯಾರು? ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡ ತ್ರಿವಿಕ್ರಂ
ತ್ರಿವಿಕ್ರಂ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಸ್ಪರ್ಧೆ ಜೋರಾಗಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಹೆಚ್ಚುತ್ತಿದೆ. ಸದ್ಯ 10 ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿದೆ. ಈ ಪೈಕಿ ಒಬ್ಬರು ಕಪ್ ಗೆಲ್ಲಲಿದ್ದಾರೆ. ಈ ವಾರ ಟಾಸ್ಕ್​ಗಳನ್ನು ಆಡುವಾಗ ಕಿತ್ತಾಟ ಜೋರಾಗಿದೆ. ಚೈತ್ರಾ ಮೋಸದಾಟ ಆಡುತ್ತಾರೆ ಎಂದು ಎಲ್ಲರೂ ಆರೋಪಿಸುತ್ತಿದ್ದಾರೆ. ಅವರು ಉಸ್ತುವಾರಿ ಸರಿಯಾಗಿ ಮಾಡುತ್ತಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಈ ವಾರ ಬಿಗ್ ಬಾಸ್ ಭಿನ್ನ ಟಾಸ್ಕ್​ಗಳನ್ನು ನೀಡಿದ್ದಾರೆ. ರಜತ್ ಒಂದು ತಂಡದ ಕ್ಯಾಪ್ಟನ್ ಆದರೆ, ತ್ರಿವಿಕ್ರಂ ಅವರು ಮತ್ತೊಂದು ಟೀಂನ ಕ್ಯಾಪ್ಟನ್ ಆಗಿದ್ದಾರೆ. ಎರಡೂ ತಂಡಗಳಲ್ಲಿ ಒಟ್ಟೂ ಐದೈದು ಸ್ಪರ್ಧಿಗಳು ಇದ್ದಾರೆ. ಟಾಸ್ಕ್​ನಲ್ಲಿ ಗೆಲ್ಲುತ್ತಾ ಹೋದಂತೆ ಎದುರಾಳಿ ತಂಡದ ಒಬ್ಬರನ್ನು ನಾಮಿನೇಟ್ ಮಾಡಬೇಕು. ಕೊನೆಯಲ್ಲಿ ನಾಮಿನೇಟ್ ಆಗಿ ಉಳಿಯದೇ ಇದ್ದವರು ಕ್ಯಾಪ್ಟನ್ಸಿ ರೇಸ್​ನಲ್ಲಿ ಇರುತ್ತಾರೆ.

ಮೊದಲ ಮೂರು ಟಾಸ್ಕ್​ಗಳನ್ನು ರಜತ್ ತಂಡ ಸೋತಿದೆ. ಹೀಗಾಗಿ, ಅವರ ತಂಡದ ರಜತ್, ಐಶ್ವರ್ಯಾ, ಮೋಕ್ಷಿತಾ ನಾಮಿನೇಟ್ ಆದರು. ನಾಲ್ಕನೇ ಟಾಸ್ಕ್​ ರದ್ದಾಗಿದೆ. ಅಂತಿಮವಾಗಿ ಫಲಿತಾಂಶ ಘೋಷಿಸಲು ಮನೆಯಲ್ಲಿ ಒಮ್ಮತ ಮೂಡಲಿಲ್ಲ. ಬಿಗ್ ಬಾಸ್ ಕೂಡ ನೋಡುವಷ್ಟು ನೋಡಿದರು. ನಿರ್ಧಾರ ಘೋಷಣೆ ಮಾಡಲು ವಿಫಲರಾದ ಕಾರಣ ಟಾಸ್ಕ್​ನ ರದ್ದು ಮಾಡಿದರು. ಇದಕ್ಕೆ ಶಿಕ್ಷೆ ಕೂಡ ನೀಡಲಾಯಿತು.

ಇದನ್ನೂ ಓದಿ: ‘ಅವಳಿಗೆ ಗಾಂಚಲಿ ಜಾಸ್ತಿ’; ಭವ್ಯಾ ಬಗೆಗಿನ ಅಭಿಪ್ರಾಯ ಬದಲಿಸಿಕೊಂಡ ತ್ರಿವಿಕ್ರಂ

‘ಅಂತಿಮ ಫಲಿತಾಂಶ ನೀಡಲು ಮನೆಯ ಸದಸ್ಯರು ವಿಫಲರಾಗಿದ್ದಾರೆ. ಹೀಗಾಗಿ, ಕ್ಯಾಪ್ಟನ್​ಗಳಾದ ರಜತ್ ಹಾಗೂ ತ್ರಿವಿಕ್ರಂ ತಂಡದ ಜೊತೆ ಪರಸ್ಪರ ಚರ್ಚಿಸಿ ತಮ್ಮದೇ ತಂಡದ ಒಬ್ಬರನ್ನು ನಾಮಿನೇಟ್ ಮಾಡಬೇಕು’ ಎಂದು ಘೋಷಣೆ ಮಾಡಿದರು. ಆಗ ತ್ರಿವಿಕ್ರಂ ಅವರು ತಮ್ಮ ಹೆಸರನ್ನು ತಾವೇ ತೆಗೆದುಕೊಂಡರು. ‘ನಾಮಿನೇಷನ್​ಗೆ ತಮ್ಮ ಹೆಸರನ್ನು ತಾವೇ ಸೂಚಿಸಿಕೊಳ್ಳುವಂತಿಲ್ಲ’ ಎಂಬ ಆದೇಶ ಬಿಗ್ ಬಾಸ್ ಕಡೆಯಿಂದ ಬಂತು. ನಂತರ ಅವರ ತಂಡದ ಎಲ್ಲರೂ ತ್ರಿವಿಕ್ರಂ ಹೆಸರೇ ಸೂಚಿಸಿದ್ದರಿಂದ ತಮ್ಮನ್ನು ತಾವೇ ಅವರು ನಾಮಿನೇಟ್ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.