‘ಬಿಗ್ ಬಾಸ್ ಕನ್ನಡ ಸೀಸನ್ 11’ ಆಟದಲ್ಲಿ ಸ್ನೇಹ ಹೆಚ್ಚು ದಿನ ನಡೆಯುವುದಿಲ್ಲ. ಆದರೂ ಕೂಡ ಕೆಲವರು ಸ್ನೇಹದ ಬಲೆಗೆ ಬೀಳುತ್ತಾರೆ. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ಬಹಳ ಆಪ್ತವಾಗಿ ಕಾಲ ಕಳೆದಿದ್ದಾರೆ. ಆದರೆ ಆಟದ ರೋಚಕತೆ ಜಾಸ್ತಿ ಆದಂತೆಲ್ಲ ಫ್ರೆಂಡ್ಶಿಪ್ ನಿಭಾಯಿಸುವುದು ಕಷ್ಟ ಆಗುತ್ತಿದೆ. ಇಷ್ಟು ದಿನ ಹಾಕಿಕೊಂಡಿದ್ದ ಮುಖವಾಡ ಈಗ ಕಳಚಿ ಬೀಳುತ್ತಿದೆ. ತ್ರಿವಿಕ್ರಮ್ ಅವರು ನೇರವಾಗಿ ಭವ್ಯಾಗೆ ಕೆಲವು ಖಾರದ ಮಾತುಗಳನ್ನು ಹೇಳಿದ್ದಾರೆ.
ಮಿಡ್ ಮೀಕ್ ಎಲಿಮಿನೇಷನ್ ನಡೆಯುವುದು ಖಚಿತ ಎಂಬ ಕಾರಣದಿಂದ ಈ ವಾರ ಎಲ್ಲ ಸ್ಪರ್ಧಿಗಳಿಗೆ ಟೆನ್ಷನ್ ಹೆಚ್ಚಾಗಿದೆ. ಕ್ಯಾಪ್ಟನ್ ಹನುಮಂತ ಮಾತ್ರ ಕೂಲ್ ಆಗಿ ಇದ್ದಾರೆ. ಭವ್ಯಾ ಗೌಡ, ಮೋಕ್ಷಿತಾ, ಧನರಾಜ್, ಗೌತಮಿ ಜಾದವ್, ರಜತ್, ಉಗ್ರಂ ಮಂಜು, ತ್ರಿವಿಕ್ರಮ್ ಅವರು ಮಿಡ್ ಮೀಕ್ ಎಲಿಮಿನೇಷನ್ನಿಂದ ಪಾರಾಗಲು ಹಣಾಹಣಿ ನಡೆಸುತ್ತಿದ್ದಾರೆ.
ಬಹುತೇಕ ಟಾಸ್ಕ್ಗಳಲ್ಲಿ ಭವ್ಯಾ ಗೌಡ ಅವರು ಮುನ್ನಡೆ ಸಾಧಿಸಿದ್ದಾರೆ. ಇಷ್ಟು ದಿನಗಳ ಕಾಲ ಭವ್ಯಾಗೆ ಸಲಗೆ ನೀಡಿ, ಧೈರ್ಯ ತುಂಬುತ್ತಿದ್ದ ತ್ರಿವಿಕ್ರಮ್ ಅವರು ಹಿಂದೆ ಉಳಿದುಕೊಂಡಿದ್ದಾರೆ. ಟಾಸ್ಕ್ನಲ್ಲಿ ತ್ರಿವಿಕ್ರಮ್ಗೆ ಹಿನ್ನಡೆ ಆದಾಗ ಭವ್ಯಾ ಖುಷಿಪಟ್ಟರು ಎಂಬುದು ತ್ರಿವಿಕ್ರಮ್ ಅಭಿಪ್ರಾಯ. ಇದೇ ವಿಚಾರವನ್ನು ಇಟ್ಟುಕೊಂಡು ಭವ್ಯಾ ಎದುರು ಅವರು ನಿಷ್ಟುರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ
‘ಇಷ್ಟು ದಿನ ನನ್ನನ್ನು ನೀನು ನಿನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡೆ’ ಎಂದು ಭವ್ಯಾಗೆ ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡು ಭವ್ಯಾಗೆ ಬಹಳ ಬೇಸರ ಆಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವಾರದ ಮಧ್ಯದಲ್ಲಿ ಒಬ್ಬರು ಹಾಗೂ ವಾರಾಂತ್ಯದಲ್ಲಿ ಇನ್ನೊಬ್ಬರು ಔಟ್ ಆಗಲಿದ್ದಾರೆ. ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದು ಮುನ್ನಡೆ ಸಾಧಿಸಿದ್ದಾರೆ. ಅವರ ಚಾಲಾಕಿತನಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಸುದೀಪ್ ಕೂಡ ಹನುಮಂತನ ಆಟಕ್ಕೆ ಭೇಷ್ ಎಂದಿದ್ದಾರೆ. ಕಳೆದ ವಾರ ಚೈತ್ರಾ ಕುಂದಾಪುರ ಎಮಿಲಿನೇಟ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.