ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ (Tukali Santosh) ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಒಬ್ಬರ ಮಾತನ್ನು ಒಬ್ಬರು ಕೇಳುತ್ತಿದ್ದಾರೆ. ಇಬ್ಬರ ಫ್ರೆಂಡ್ಶಿಪ್ ಬ್ರೇಕ್ ಆಗುವ ಸೂಚನೆ ಸಿಕ್ಕಿದೆ. ಇಬ್ಬರ ಜೊತೆಯೂ ಒಳ್ಳೆಯ ಒಡನಾಟ ಹೊಂದಿರುವ ಪ್ರತಾಪ್ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದಲ್ಲಿ ಸ್ಪರ್ಧೆ ಮತ್ತಷ್ಟು ಹೆಚ್ಚಲಿದೆ. ಕಲರ್ಸ್ ಕನ್ನಡ, ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ.
ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಆರಂಭದಲ್ಲಿ ಬೇರೆ ಬೇರೆ ಆಗೇ ಇದ್ದರು. ಯಾವಾಗ ವರ್ತೂರು ಸಂತೋಷ್ ಅವರು ಹೊರಗೆ ಹೋಗಿ ಬಂದರೋ ತುಕಾಲಿ ಜೊತೆ ಫ್ರೆಂಡ್ಶಿಪ್ ಬೆಳೆಯಿತು. ಈಗ ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೇ ಇರುತ್ತಾರೆ. ಒಂದೇ ತಂಡದಲ್ಲಿ ಆಡಲು ಬಯಸುತ್ತಾರೆ. ಆದರೆ, ಇವರ ಫ್ರೆಂಡ್ಶಿಪ್ ಶೀಘ್ರವೇ ಕೊನೆ ಆಗಬಹುದು ಅನ್ನೋದು ಪ್ರತಾಪ್ ಅಭಿಪ್ರಾಯ.
ಇದನ್ನೂ ಓದಿ: ‘ನಾನೇ ಕಾರಣ ಅನಿಸುತ್ತೆ’; ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರು ಸಂತೋಷ್ಗೆ ಮಾತ್ರ
ಕಾರ್ತಿಕ್ ಹಾಗೂ ಸಂಗೀತಾ ಜೊತೆ ಡ್ರೋನ್ ಪ್ರತಾಪ್ ಕುಳಿತಿದ್ದರು. ಈ ವೇಳೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ವರ್ತೂರು ಸಂತೋಷ್ ಅವರಿಗೆ ಕಾಮಿಡಿ ಸಂತೋಷ್ ಮೇಲೆ ಅಸಮಧಾನ ಇದೆ. ಮೊದಲಿದ್ದ ಬಾಂಡಿಂಗ್ ಈಗ ಇಲ್ಲ. ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿಲ್ಲ. ಇದು ಸರಿ ಹೋದರೂ ಹೋಗಬಹುದು’ ಎಂದಿದ್ದಾರೆ ಡ್ರೋನ್ ಪ್ರತಾಪ್.
ಇದನ್ನೂ ಓದಿ: ‘ನನಗೆ ಪ್ರತಾಪ್ ತುಂಬ ಇಷ್ಟ’: ಕನ್ಫೆಷನ್ ರೂಮ್ನಲ್ಲಿ ಕಣ್ಣೀರು ಹಾಕಿಕೊಂಡು ಹೇಳಿದ ಸಂಗೀತಾ
ಪ್ರತಾಪ್ ಅವರು ಬಿಗ್ ಬಾಸ್ನಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಅವರಿಗೆ ಇಬ್ಬರೂ ಸಂತೋಷ್ ಜೊತೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ ಅವರ ಊಹೆ ಸರಿ ಆದರೂ ಅಚ್ಚರಿ ಏನಿಲ್ಲ. ಈ ವಾರ ಫನ್ ಟಾಸ್ಕ್ ನೀಡಲಾಗುತ್ತಿದೆ. ಹೀಗಾಗಿ, ಹೆಚ್ಚು ಜಗಳ ನಡೆದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Thu, 14 December 23