ಮಂಜು ಕುತಂತ್ರಕ್ಕೆ ಬಲಿಯಾದ್ರಾ ಭವ್ಯಾ? ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್

|

Updated on: Nov 09, 2024 | 6:53 AM

ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಅವರ ಪ್ರದರ್ಶನ ಮತ್ತು ಮಂಜು ಅವರ ಕುತಂತ್ರದ ಆಟದ ಬಗ್ಗೆ ಈ ವಾರ ಚರ್ಚೆ ಆಗುತ್ತಿದೆ. ಭವ್ಯಾ ಅವರು ಉತ್ತಮವಾಗಿ ಆಡಿದರೂ, ಕ್ಯಾಪ್ಟನ್ಸಿ ರೇಸ್‌ನಲ್ಲಿ ಮಂಜು ಅವರ ಒಪ್ಪಂದಗಳಿಂದ ಸೋತರು. ಮಂಜು ಅವರು ತಮ್ಮ ಒಪ್ಪಂದಗಳಿಂದಾಗಿ ಟೀಕೆಗೆ ಗುರಿಯಾಗಿದ್ದಾರೆ ಮತ್ತು ಸುದೀಪ್ ಅವರು ಈ ವಿಷಯವನ್ನು ಪಂಚಾಯ್ತಿಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಮಂಜು ಕುತಂತ್ರಕ್ಕೆ ಬಲಿಯಾದ್ರಾ ಭವ್ಯಾ? ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್
ಭವ್ಯಾ ಗೌಡ
Follow us on

ಬಿಗ್ ಬಾಸ್​​ನಲ್ಲಿ ಭವ್ಯಾ ಗೌಡ ಅವರು ಚೆನ್ನಾಗಿ ಆಡುವುದಿಲ್ಲ ಎಂಬುದು ಎಂಬುದು ಅನೇಕರ ಟೀಕೆ ಆಗಿತ್ತು. ಆ ಟೀಕೆಗಳಿಗೆ ಭವ್ಯಾ ಗೌಡ ಅವರು ನೇರವಾಗಿ ಉತ್ತರ ಕೊಟ್ಟಿದ್ದಾರೆ. ಈ ವಾರ ಅವರು ಅತ್ಯುತ್ತಮವಾಗಿ ಆಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಇದ್ದ ಅವರು ಕೊನೆಯ ಹಂತದಲ್ಲಿ ಎಡವಿದ್ದಾರೆ. ಇದಕ್ಕೆ ಮಂಜು ಕಾರಣ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಉಗ್ರಂ ಮಂಜು ಅವರು ಭರ್ಜರಿ ತಂತ್ರಗಳ ಮೂಲಕ ಆಟ ಆಡುತ್ತಿದ್ದಾರೆ. ಅವರ ಕುತಂತ್ರಕ್ಕೆ ಅನೇಕರು ಬಲಿಯಾಗಿದ್ದಾರೆ. ಈ ವಾರ ಮಂಜು, ಭವ್ಯಾ ಹಾಗೂ ಗೋಲ್ಡ್ ಸುರೇಶ್ ಒಂದೇ ತಂಡದಲ್ಲಿ ಇದ್ದರು. ಈ ತಂಡ ಟಾಸ್ಕ್ ಗೆಲ್ಲುವಲ್ಲಿ ಭವ್ಯಾ ಅವರ ಕೊಡುಗೆ ತುಂಬಾನೇ ಹೆಚ್ಚಿದೆ. ಇದನ್ನು ಮಂಜು ಅವರು ಗಮನದಲ್ಲಿ ಇಟ್ಟುಕೊಂಡಿಲ್ಲ. ಭವ್ಯಾ ವಿರುದ್ಧವೇ ಅವರು ಮತ ಚಲಾಯಿಸಿದ್ದಾರೆ.

ಭವ್ಯಾ ಹಾಗೂ ತ್ರಿವಿಕ್ರಂ ಅವರು ಈ ಬಾರಿಯ ಕ್ಯಾಪ್ಟನ್ಸಿ ರೇಸ್​​ನಲ್ಲಿ ಇದ್ದರು. ಮನೆಯವರಿಗೇ ಕ್ಯಾಪ್ಟನ್​ನ ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಈ ವೇಳೆ ಮಂಜು ಅವರು ಮೂರು ಬಾರಿ ಭವ್ಯಾ ವಿರುದ್ಧ ಮತ ಚಲಾಯಿಸಿದರು. ತಮ್ಮ ಜೊತೆ ಆಪ್ತರಾದವರ ಜೊತೆಯೂ ಭವ್ಯಾ ವಿರುದ್ಧ ವೋಟ್ ಹಾಕುವಂತೆ ಅವರು ಕೋರಿಕೊಂಡಿದ್ದರು.

ತ್ರಿವಿಕ್ರಂ ಪರವಾಗಿ ಮಂಜು ಮಾತನಾಡುವುದಕ್ಕೂ ಒಂದು ಕಾರಣ ಇತ್ತು. ಅದುವೇ ಒಪ್ಪಂದ. ಪ್ರತಿ ಹಂತದಲ್ಲೂ ಮಂಜು ಅವರು ಒಪ್ಪಂದ ಮಾಡಿಕೊಂಡು ಆಟ ಆಡುತ್ತಿದ್ದಾರೆ. ತ್ರಿವಿಕ್ರಂ ಜೊತೆ ಅವರು ಕೆಲವು ಒಪ್ಪಂದ ಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ಆದರೆ ತಮ್ಮನ್ನು ನಾಮಿನೇಟ್ ಮಾಡದಂತೆ ಅವರು ಕೋರಿದ್ದಾರೆ. ಇದಕ್ಕೆ ತ್ರಿವಿಕ್ರಂ ಓಕೆ ಎಂದ ಬಳಿಕವೇ ಅವರ ಪರವಾಗಿ ವೋಟ್ ಚಲಾಯಿಸಿದ್ದಾರೆ ಮಂಜು. ಕೊನೆಯಲ್ಲಿ ತ್ರಿವಿಕ್ರಂ ಕ್ಯಾಪ್ಟನ್ ಆದರು.

ಇದನ್ನೂ ಓದಿ: ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆಗೆ ಬಿಗ್ ಬಾಸ್ ಪ್ಲ್ಯಾನ್

ಈ ರೀತಿಯ ಒಪ್ಪಂದದ ಆಟದಿಂದ ಅಸಲಿ ಆಟ ಆಡೋಕೆ ಆಗಲ್ಲ. ಹೀಗಾಗಿ, ಇಂದು (ನವೆಂಬರ್ 9) ಸುದೀಪ್ ಅವರು ಈ ವಿಚಾರವಾಗಿ ಪಂಚಾಯ್ತಿಯಲ್ಲಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.