
ಕಿರುತೆರೆ ನಟಿ ವೈಷ್ಣವಿ ಅವರು ಇತ್ತೀಚೆಗೆ ಏರ್ಫೋರ್ಸ್ನಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಜೊತೆ ವಿವಾಹ ಆಗಿದ್ದು ಗೊತ್ತೇ ಇದೆ. ಅವರು ಉತ್ತರದವರು. ಇವರು ದಕ್ಷಿಣದವರು. ಆದಾಗ್ಯೂ ಎಲ್ಲ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ವೈಷ್ಣವಿ (Vaishnavi) ವಿವಾಹ ಆಗಿದ್ದಾರೆ. ಈ ಮೂಲಕ ಮದುವೆ ಆಗಬೇಕು ಎಂಬ ಬಹು ವರ್ಷಗಳ ಕನಸು ಈಡೇರಿದೆ ಎಂದೇ ಹೇಳಬಹುದು. ವಿವಾಹದ ಬಳಿಕ ಅವರ ತಾಳಿ ಹಾಕುತ್ತಿಲ್ಲ ಏಕೆ ಎಂಬುದನ್ನು ವಿವರಿಸಿದ್ದಾರೆ.
ಭಾರತ ವೈವಿಧ್ಯೆತೆ ತುಂಬಿರುವ ದೇಶ. ಹಿಂದೂಗಳೇ ಆದರೂ ಅಲ್ಲಿಯೂ ಬೇರೆ ಬೇರೆ ಸಂಪ್ರದಾಯ ಇದೆ ಎನ್ನಬಹುದು. ವೈಷ್ಣವಿ ಅವರು ದಕ್ಷಿಣದವರು. ಇಲ್ಲಿ ತಾಳಿ ಹಾಕುವ ಸಂಪ್ರದಾಯ ಇದೆ. ಆದರೆ, ಅನುಕೂಲ್ ಮಿಶ್ರಾ ಕುಟುಂಬದಲ್ಲಿ ಆ ರೀತಿಯ ಪದ್ಧತಿಯೇ ಇಲ್ಲವಂತೆ. ಈ ಕಾರಣದಿಂದಲೇ ಅವರು ತಾಳಿಯನ್ನೇ ಹಾಕುತ್ತಿಲ್ಲ.
ವೈಷ್ಣವಿ ಅವರು ತಾಳಿ ಹಾಕಿಲ್ಲ ಎಂದು ಸಾಕಷ್ಟು ಜನರು ಟ್ರೋಲ್ ಮಾಡಿದ್ದನ್ನು ನೀವು ನೋಡಿರಬಹುದು. ಆ ಟ್ರೋಲ್ಗಳನ್ನು ವೈಷ್ಣವಿ ಅವರು ಗಮನಿಸಿದ್ದಾರೆ. ಇದಕ್ಕೆ ಅವರು ಸಿಟ್ಟು ಮಾಡಿಕೊಳ್ಳದೇ ಕೂಲ್ ಆಗಿ ಉತ್ತರಿಸುವ ಕೆಲಸವನ್ನು ಮಾಡಿದ್ದಾರೆ.
‘ಮದುವೆ ಆದಮೇಲೆ ತಾಳಿ ಯಾಕೆ ಹಾಕುತ್ತಿಲ್ಲ, ಸಂಪ್ರದಾಯಕ್ಕೆ ಗೌರವ ಕೊಡುತ್ತಿಲ್ಲ, ಹಾಗಿದ್ದರೆ ಮದುವೆ ಯಾಕೆ ಬೇಕಿತ್ತು ಎಂದು ಕೆಲವರು ಕೇಳಿದ್ದಾರೆ. ಅದರ ಬಗ್ಗೆ ಮಾತನಾಡುತ್ತಿದ್ದೇನೆ. ಹುಡುಗರ ಮನೆ ಸಂಪ್ರದಾಯವನ್ನು ಹಡುಗಿಯರು ಪಾಲಿಸಬೇಕು. ನಾನು ಅದನ್ನೇ ಮಾಡುತ್ತಿದ್ದೇನೆ. ನಾನು ತಾಳಿ ಏಕೆ ಹಾಕುತ್ತಿಲ್ಲ ಎಂದರೆ, ಅವರ ಪದ್ಧತಿಯಲ್ಲಿ ಅದು ಇಲ್ಲ’ ಎಂದು ವೈಷ್ಣವಿ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಮದುವೆ ಬಳಿಕ ನಟಿ ವೈಷ್ಣವಿ ಗೌಡ ಭೇಟಿ ನೀಡಿದ ಸುಂದರ ತಾಣಗಳಿವು
‘ನನ್ನ ಅತ್ತೆ ತಾಳಿ ಹಾಕುವುದಿಲ್ಲ. ಏಕೆ ಎಂದು ನಾನು ಕೇಳಿಲ್ಲ. ತಾಳಿ ಮುಖ್ಯ ಅಲ್ಲ ಎಂದು ಅವರು ಹೇಳಿದರು. ಆದರೆ, ಇಲ್ಲಿ ಬೇರೆ ಶಾಸ್ತ್ರ ಇದೆ. ಮೂಗಿಗೆ ಚುಚ್ಚಿರಬೇಕು. ಕೈಗೆ ಗಾಜಿನ ಬಳೆ, ಒಂದು ಥ್ರೆಡ್ ಇರಬೇಕು. ಜೊತೆಗೆ ಕಾಲಿಗೆ ಉಂಗುರ ಹಾಕಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲಾ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.