ಫಿನಾಲೆ ತಲುಪೋ ಮೊದಲ ಸ್ಪರ್ಧಿ ವರ್ತೂರು ಸಂತೋಷ್​; ಅಬ್ಬಾ ಇದೆಂಥಾ ಬದಲಾವಣೆ

|

Updated on: Dec 06, 2023 | 7:25 AM

ಈ ವಾರ ವರ್ತೂರು ಸಂತೋಷ್ ಅವರು ಸಖತ್ ಕ್ಲಾರಿಟಿಯೊಂದಿಗೆ ಮಾತನಾಡುತ್ತಿದ್ದಾರೆ. ತೆಗೆದುಕೊಂಡ ಸ್ಟ್ಯಾಂಡ್​ನಿಂದ ಹಿಂದೆ ಸರಿಯುತ್ತಿಲ್ಲ. ಇದು ಅನೇಕರಿಗೆ ಇಷ್ಟ ಆಗುತ್ತಿದೆ.

ಫಿನಾಲೆ ತಲುಪೋ ಮೊದಲ ಸ್ಪರ್ಧಿ ವರ್ತೂರು ಸಂತೋಷ್​; ಅಬ್ಬಾ ಇದೆಂಥಾ ಬದಲಾವಣೆ
ವರ್ತೂರು ಸಂತೋಷ್
Follow us on

ಬಿಗ್ ಬಾಸ್ (Bigg Boss Kannada) ಕನ್ನಡ ಸೀಸನ್ 10ರಲ್ಲಿ ವರ್ತೂರು ಸಂತೋಷ್ ಅವರು ಆರಂಭದಲ್ಲಿ ಸಖತ್ ಡಲ್ ಆಗಿದ್ದರು. ಈಗ ಅವರು ಏಕಾಏಕಿ ಬದಲಾಗಿದ್ದಾರೆ. ಅವರ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಅವರು ಆಡುತ್ತಿರುವ ರೀತಿ ಸಾಕಷ್ಟು ಜನರಿಗೆ ಇಷ್ಟ ಆಗುತ್ತಿದೆ. ವರ್ತೂರು ಸಂತೋಷ್ ಅವರ ಬಗ್ಗೆ ವಿನಯ್ ಗೌಡ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಮನೆಯಲ್ಲಿ ಹೆಚ್ಚು ಪಾಸಿಟಿವಿಟಿ ಹರಡುವ ವ್ಯಕ್ತಿಯಾಗಿ ವರ್ತೂರು ಸಂತೋಷ್ ಅವರು ಕಾಣಿಸಿಕೊಂಡಿದ್ದಾರೆ.

ವರ್ತೂರು ಸಂತೋಷ್ ಅವರು ದೊಡ್ಮನೆಯಲ್ಲಿ ಆರಂಭದಲ್ಲಿ ಡಲ್ ಆಗಿದ್ದರು. ಹುಲಿ ಉಗುರು ಪ್ರಕರಣದಲ್ಲಿ ಹೊರಗೆ ಹೋಗಿ ಬಂದ ಬಳಿಕವಂತೂ ಅವರ ಬಳಿ ಗೇಮ್ ಆಡೋಕೆ ಸಾಧ್ಯವಿಲ್ಲ ಎಂಬ ರೀತಿ ಆಯಿತು. ಈ ಕಾರಣದಿಂದ ಅವರು ದೊಡ್ಮನೆಯಿಂದ ಹೊರ ಹೋಗುವುದಾಗಿ ಪಟ್ಟು ಹಿಡಿದರು. ಆದರೆ, ಅವರ ತಾಯಿ ಬಂದು ಸಮಾಧಾನ ಮಾಡಿದ ಬಳಿಕ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಈ ವಾರದಿಂದ ಅವರ ಮಾತುಗಳಲ್ಲಿ ಸಖತ್ ಕ್ಲಾರಿಟಿ ಇದೆ. ಇದು ಅನೇಕರಿಗೆ ಇಷ್ಟ ಆಗಿದೆ.

ಈ ವಾರ ವರ್ತೂರು ಸಂತೋಷ್ ಅವರು ಸಖತ್ ಕ್ಲಾರಿಟಿಯೊಂದಿಗೆ ಮಾತನಾಡುತ್ತಿದ್ದಾರೆ. ತೆಗೆದುಕೊಂಡ ಸ್ಟ್ಯಾಂಡ್​ನಿಂದ ಹಿಂದೆ ಸರಿಯುತ್ತಿಲ್ಲ. ‘ಮೊದಲು ಫಿನಾಲೆ ಸೇರೋ ಸ್ಪರ್ಧಿ ಯಾರು’ ಎನ್ನುವ ಪ್ರಶ್ನೆಗೆ ವಿನಯ್ ಅವರು ವರ್ತೂರು ಸಂತೋಷ್ ಅವರ ಹೆಸರನ್ನು ಹೇಳಿದ್ದರು. ಈ ಮೂಲಕ ಸಂತೋಷ್​ ಅವರಲ್ಲಿ ಆದ ಬದಲಾವಣೆ ಒಪ್ಪಿಕೊಂಡಿದ್ದರು.

ಇನ್ನು ಪಾಸಿಟಿವ್ ಹಾಗೂ ನೆಗೆಟಿವ್ ಮೈಂಡ್​ಸೆಟ್ ಯಾರದ್ದು ಎಂಬುದನ್ನು ಹೇಳಬೇಕಿತ್ತು. ಈ ವೇಳೆ ವರ್ತೂರು ಅವರನ್ನು ವಿನಯ್ ಹೊಗಳಿದ್ದಾರೆ. ‘ಅವರು ನಮಗೆ ಕಾಣದೆ ಶಾಡೋ ಆಗಿದ್ದರು. ಈ ಮನೆಯಲ್ಲಿರೋಕೆ ವೇಸ್ಟ್ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಯಾವಾಗ ಬಾಯ್ಬಿಟ್ಟು ಮಾತನಾಡೋಕೆ ಶುರುಮಾಡಿದರೋ ಆಗ ನನಗೆ ಅವರ ಬಗ್ಗೆ ಗೊತ್ತಾಯಿತು. ಮನೆಯಲ್ಲಿ ಏನು ಮಾತನಾಡಬೇಕು, ಮಾತನಾಡಬಾರು ಎಂದು ಧ್ವನಿ ಇರೋದು ವರ್ತೂರು ಸಂತೋಷ್​​ಗೆ ಮಾತ್ರ’ ಎಂದರು ವಿನಯ್.

ಇದನ್ನೂ ಓದಿ: ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ

ವರ್ತೂರು ಸಂತೋಷ್ ಅವರಲ್ಲಿ ಆದ ಬದಲಾವಣೆಗೆ ಎಲ್ಲರೂ ಶಾಕ್ ಆಗಿದ್ದಾರೆ. ಅವರು ಫಿನಾಲೆ ತಲುಪೋದು ಗ್ಯಾರಂಟಿ ಎಂದು ಅನೇಕರು ಮಾತನಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ