ರಮೇಶ್ ಅರವಿಂದ್ ನಿರ್ಮಾಣದ ಹೊಸ ಧಾರಾವಾಹಿ ‘ಆಸೆ’; ಡಿ.11ರಿಂದ ರಾತ್ರಿ 7.30ಕ್ಕೆ ‘ಸ್ಟಾರ್ ಸುವರ್ಣ’ದಲ್ಲಿ

ಒಂದು ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದ ಹುಡುಗ ಸೂರ್ಯ. ಇನ್ನೊಂದು ಕಡೆ ಮನೆಯವರ ಸಂತೋಷಕ್ಕಾಗಿ ಬಹಳ ಆಸೆಯನ್ನು ಇಟ್ಟುಕೊಂಡಿರುವ ಮೀನಾ. ಹೀಗೆ ತದ್ವಿರುದ್ಧವಾದ ಇಬ್ಬರ ಬದುಕು ಎದುರುಬದುರಾದರೆ ಏನಾಗುತ್ತೆ ಎಂಬುದು ‘ಆಸೆ’ ಧಾರಾವಾಹಿಯ ಕಥಾಹಂದರ.

ರಮೇಶ್ ಅರವಿಂದ್ ನಿರ್ಮಾಣದ ಹೊಸ ಧಾರಾವಾಹಿ ‘ಆಸೆ’; ಡಿ.11ರಿಂದ ರಾತ್ರಿ 7.30ಕ್ಕೆ ‘ಸ್ಟಾರ್ ಸುವರ್ಣ’ದಲ್ಲಿ
ಆಸೆ ಧಾರಾವಾಹಿ
Follow us
|

Updated on: Dec 06, 2023 | 6:31 PM

ಕನ್ನಡ ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ (Kannada Serial) ನಡುವೆ ಸಖತ್​ ಪೈಪೋಟಿ ಇದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದ ಹಲವು ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಎಲ್ಲ ವಾಹಿನಿಗಳು ಕೂಡ ಧಾರಾವಾಹಿಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ಈ ವಿಚಾರದಲ್ಲಿ ‘ಸ್ಟಾರ್​ ಸುವರ್ಣ’ (Star Suvarna) ಕೂಡ ಹಿಂದೆ ಬಿದ್ದಿಲ್ಲ. ಈ ವಾಹಿನಿಯಲ್ಲಿ ಹಲವು ಸೀರಿಯಲ್​ಗಳು ಜನರ ಮನ ಗೆಲ್ಲುವ ಪ್ರಯತ್ನದಲ್ಲಿವೆ. ಈಗ ‘ಸ್ಟಾರ್​ ಸುವರ್ಣ’ ವಾಹಿನಿಯ ಧಾರಾವಾಹಿಗಳ ಪಟ್ಟಿಗೆ ‘ಆಸೆ’ ಎಂಬ ಹೊಸ ಸೀರಿಯಲ್​ ಕೂಡ ಸೇರ್ಪಡೆ ಆಗುತ್ತಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ರಮೇಶ್​ ಅರವಿಂದ್​ (Ramesh Aravind) ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ವಿಶೇಷ.

ರಮೇಶ್​ ಅರವಿಂದ್​ ಅವರಿಗೆ ಕಿರುತೆರೆಯ ಜೊತೆ ಉತ್ತಮ ನಂಟು ಇದೆ. ನಿರೂಪಕನಾಗಿ ಅವರು ಕೆಲವು ಶೋಗಳನ್ನು ನಡೆಸಿಕೊಟ್ಟು ಜನಮನ ಗೆದ್ದಿದ್ದಾರೆ. ಇದರ ಜೊತೆಗೆ ಧಾರಾವಾಹಿ ನಿರ್ಮಾಣದಲ್ಲೂ ಅವರು ಆಸಕ್ತಿ ತೋರಿಸಿದ್ದಾರೆ. ರಮೇಶ್ ಅರವಿಂದ್ ನಿರ್ಮಿಸುತ್ತಿರುವ ‘ಆಸೆ’ ಧಾರಾವಾಹಿಯು ತನ್ನ ಡಿಫರೆಂಟ್​ ಕಥಾಹಂದರದ ಕಾರಣದಿಂದ ನಿರೀಕ್ಷೆ ಮೂಡಿಸಿದೆ. ‘ಸಾಮಾನ್ಯ ಜನರ ಅಸಾಮಾನ್ಯ ಕಥೆಯಿದು’ ಎಂದು ‘ಸ್ಟಾರ್​ ಸುವರ್ಣ’ ವಾಹಿನಿ ಹೇಳಿದೆ.

‘ಆಸೆ’ ಸೀರಿಯಲ್​ ಕಥೆ:

ಬಾಲ್ಯದಲ್ಲಿ ತಿಳಿಯದೇ ನಡೆದ ಒಂದು ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ. ಇವನ ಮಾತು ಕೊಂಚ ಒರಟು. ಹಾಗಿದ್ದರೂ ಕೂಡ ಅವನ ಮನಸು ಮೃದುವಾಗಿದೆ. ಜೀವನದಲ್ಲಿ ನೊಂದು-ಬೆಂದು ಆಕಾಂಕ್ಷೆಯನ್ನೇ ಆತ ಕಳೆದುಕೊಂಡಿದ್ದಾನೆ. ತಂದೆಗೆ ಸೂರ್ಯ ಎಂದರೆ ಬಹಳ ಮುದ್ದು. ಇನ್ನೊಂದೆಡೆ ಬಡತನದಲ್ಲಿ ಬೇಯುತ್ತಿದ್ದರೂ ಕೂಡ ಮುಖದಲ್ಲಿ ಯಾವಾಗಲೂ ಮಂದಹಾಸವನ್ನು ಹೊಂದಿರುವ ಹುಡುಗಿ ಮೀನಾ. ಅವಳೇ ಈ ಕಥೆಯ ನಾಯಕಿ. ಕುಟುಂಬದ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದವಳು ಈಕೆ. ಹೆತ್ತವರಿಗೆ ಸಹಕರಿಸುತ್ತಿರುವ ಮುಗ್ದ ಮನಸಿನ ಕಣ್ಮಣಿ ಇವಳು. ಒಡಹುಟ್ಟಿದವರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ಮೀನಾ ಒಂದು ರೀತಿಯಲ್ಲಿ ತಾಯಿಯ ಎರಡನೇ ರೂಪ ಎನ್ನಬಹುದು.

ಒಂದು ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದ ಹುಡುಗ ಸೂರ್ಯ. ಇನ್ನೊಂದು ಕಡೆ ಮನೆಯವರ ಸಂತೋಷಕ್ಕಾಗಿ ಬಹಳ ಆಸೆಯನ್ನು ಇಟ್ಟುಕೊಂಡಿರುವ ಮೀನಾ. ಹೀಗೆ ತದ್ವಿರುದ್ಧವಾದ ಇಬ್ಬರ ಬದುಕು ಎದುರುಬದರಾದರೆ ಏನಾಗುತ್ತೆ ಎಂಬುದು ‘ಆಸೆ’ ಧಾರಾವಾಹಿಯ ಕಥಾಹಂದರ. ಈ ಸೀರಿಯಲ್​ನಲ್ಲಿ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರು ಒಂದು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪ್ರಿಯಾಂಕಾ, ನಿನಾದ್, ಸ್ನೇಹಾ, ಪ್ರಗತಿ, ನಾಗೇಂದ್ರ ಶಾ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

ಇದನ್ನೂ ಓದಿ: Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್​ ಫಡ್ನಿಸ್​ ಇನ್ನಿಲ್ಲ; ಲಿವರ್​ ಸಮಸ್ಯೆಯಿಂದ ನಿಧನ

‘ಆಸೆ’ ಧಾರಾವಾಹಿಯ ಶೀರ್ಷಿಕೆ ಗೀತೆ ಈಗಾಗಲೇ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ. ಇದೇ ಸೋಮವಾರದಿಂದ (ಡಿ.11) ಸಂಜೆ 7.30ಕ್ಕೆ ಈ ಸೀರಿಯಲ್​ ಶುರುವಾಗುತ್ತಿದೆ. ‘ಸ್ಟಾರ್ ಸುವರ್ಣ’ ವಾಹಿನಿಯ ಮತ್ತೊಂದು ಧಾರಾವಾಹಿ ‘ಕಾವೇರಿ ಕನ್ನಡ ಮೀಡಿಯಂ’ ಈಗ ಬದಲಾದ ಸಮಯದಲ್ಲಿ ಬರುತ್ತಿದೆ. ಸೋಮವಾರದಿಂದ ರಾತ್ರಿ 10.30ಕ್ಕೆ ಆ ಧಾರಾವಾಹಿ ಬಿತ್ತರ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?
ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?
ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಟಿಸಿ ಕೈಗೆ ಸಿಕ್ಕಿಬಿದ್ದರು
ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಟಿಸಿ ಕೈಗೆ ಸಿಕ್ಕಿಬಿದ್ದರು
ಅಭ್ಯರ್ಥಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕುಮಾರಸ್ವಾಮಿಗಿದೆ: ಆರ್ ಅಶೋಕ
ಅಭ್ಯರ್ಥಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕುಮಾರಸ್ವಾಮಿಗಿದೆ: ಆರ್ ಅಶೋಕ
ಕುಮಾರಸ್ವಾಮಿ ನಂತರ ಯೋಗೇಶ್ವರ್ ಚನ್ನಪಟ್ಟಣಕ್ಕೆ ಸೂಕ್ತ ಅಭ್ಯರ್ಥಿ: ಅಶ್ವಥ್
ಕುಮಾರಸ್ವಾಮಿ ನಂತರ ಯೋಗೇಶ್ವರ್ ಚನ್ನಪಟ್ಟಣಕ್ಕೆ ಸೂಕ್ತ ಅಭ್ಯರ್ಥಿ: ಅಶ್ವಥ್
ಟಾಸ್ಕ್ ವೇಳೆ ಬಡಿದಾಡಿಕೊಂಡ ಉಗ್ರಂ ಮಂಜು, ಶಿಶಿರ್; ದೊಡ್ಮನೆ ಮತ್ತೆ ರಣರಂಗ
ಟಾಸ್ಕ್ ವೇಳೆ ಬಡಿದಾಡಿಕೊಂಡ ಉಗ್ರಂ ಮಂಜು, ಶಿಶಿರ್; ದೊಡ್ಮನೆ ಮತ್ತೆ ರಣರಂಗ