ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ

ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಈ ಫ್ರೆಂಡ್​ಶಿಪ್ ಹಾಳಾಗುವ ಸೂಚನೆ ಸಿಕ್ಕಿತ್ತು. ಆದರೆ, ತನಿಷಾ ಅವರು ಇದನ್ನು ಲೈಟ್ ಆಗಿ ತೆಗೆದುಕೊಂಡಿದ್ದಾರೆ.

ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ
ವರ್ತೂರು ಸಂತೋಷ್-ತನಿಷಾ

Updated on: Dec 05, 2023 | 8:11 AM

ತನಿಷಾ ಕುಪ್ಪಂಡ (Tanisha Kuppanda) ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಆದರೆ, ಆಟದ  ಮಧ್ಯೆ ಅವರು ಫ್ರೆಂಡ್​​ಶಿಪ್​ ತರುತ್ತಿಲ್ಲ. ‘ನಿನಗಾಗಿ ನಾನು ತ್ಯಾಗ ಮಾಡುತ್ತೇನೆ. ನನಗೆ ಫ್ರೆಂಡ್​ಶಿಪ್​ ಮುಖ್ಯ’ ಎಂದು ಅವರು ಹೇಳಿಲ್ಲ. ಬದಲಿಗೆ ತಾವು ಸೇವ್ ಆಗಬೇಕು ಎಂಬುದು ಅವರ ತಲೆಗೆ ಬಂದಿದೆ. ಈ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಸಂತೋಷ್ ಅವರು ಆಡಿದ ಮಾತನ್ನು ಕೇಳಿ ತನಿಷಾ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬಾರಿ ಕ್ಯಾಪ್ಟನ್ ಸ್ನೇಹಿತ್​ಗೆ ವಿಶೇಷ ಅಧಿಕಾರ ಇತ್ತು. ಇದರ ಪ್ರಕಾರ ಇಬ್ಬರು ಸ್ನೇಹಿತ್ ಎದುರು ಬಂದು ನಿಲ್ಲಬೇಕು. ಅವರಲ್ಲಿ ಒಬ್ಬರನ್ನು ಸ್ನೇಹಿತ್ ಸೇವ್ ಮಾಡಬೇಕು. ಈ ಪ್ರಕ್ರಿಯೆ ನಡೆಯಿತು. ಕೊನೆಯಲ್ಲಿ ಉಳಿದಿದ್ದು ವರ್ತೂರು ಸಂತೋಷ್, ತನಿಷಾ ಹಾಗೂ ಕಾರ್ತಿಕ್. ಈ ಪೈಕಿ ಒಬ್ಬರನ್ನು ಸೇವ್ ಮಾಡಬೇಕಿತ್ತು. ಎಲ್ಲರೂ ತಮ್ಮ ವಾದ ಮುಂದಿಟ್ಟರು.

ಸ್ನೇಹಿತ್ ಅವರ ಎದುರು ಕಾರ್ತಿಕ್ ಒಂದು ಬೇಡಿಕೆ ಇಟ್ಟರು. ‘ತನಿಷಾ ಕಾಲಿಗೆ ಗಾಯ ಆಗಿದೆ. ಅವಳನ್ನು ಸೇವ್ ಮಾಡಿ’ ಎಂದರು. ಇದು ಸಂತೋಷ್ ಕೋಪಕ್ಕೆ ಕಾರಣ ಆಯಿತು. ‘ತನಿಷಾ ಕಾಲಿಗೆ ಗಾಯ ಆಗಿದ್ದು ನನ್ನಿಂದ. ಹಾಗಂತ ನಾನು ಬೇಕು ಅಂತ ಇದನ್ನು ಮಾಡಿಲ್ಲ. ನನ್ನ ಬದಲು ಅವಳನ್ನು ಸೇವ್ ಮಾಡಿ ಎಂದು ಹೇಳಲ್ಲ. ನಾನು ಗೇಮ್ ಆಡೋಕೆ ಬಂದಿದ್ದು. ವಾರದ ಹಿಂದೆ ಟೀಂ ಕಚ್ಚಾಟ ನೋಡಲು ಸಾಧ್ಯವಾಗದೇ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹಿಂದೆ ಸರಿದೆ. ಇದೇ ಕಾರಣ ನೀಡಿ ಕಳಪೆ ಕೊಟ್ಟರು. ಈಗ ಆಟ ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ನೇರವಾಗಿ ಹೇಳಿದರು.

ಇದನ್ನೂ ಓದಿ:Bigg Boss Kannada: ತನಿಷಾ ವಿಚಾರದಲ್ಲೂ ಮುಲಾಜು ನೋಡಿಲ್ಲ ವರ್ತೂರು ಸಂತೋಷ್​; ಆಟ ಅಂದ್ರೆ ಆಟ ಅಷ್ಟೇ 

ಬಂದಾಗಿನಿಂದಲೂ ವರ್ತೂರು ಸಂತೋಷ್ ನೇರವಾಗಿ ಮಾತನಾಡಿಲ್ಲ. ಅವರು ಸೈಲೆಂಟ್ ಆಗಿದ್ದೇ ಹೆಚ್ಚು. ಆದರೆ, ಈಗ ಎಲ್ಲವನ್ನೂ ಮರೆತು ಮಾತನಾಡಿದ್ದಾರೆ. ತಮ್ಮ ನಿಜ ಮುಖ ತೋರಿಸಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ. ತಮ್ಮ ವಿರುದ್ಧವೇ ಮಾತನಾಡಿದ ಹೊರತಾಗಿಯೂ ತನಿಷಾ ಅವರು ವರ್ತೂರು ಸಂತೋಷ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ