‘ಡಿಕೆಡಿ’ ಜಡ್ಜ್​ ಸ್ಥಾನದಲ್ಲಿ ವಿಜಯ್ ರಾಘವೇಂದ್ರ; ‘ನಿಮ್ಮ ಜೀವನೋತ್ಸಾಹ ನಮಗೆಲ್ಲ ಸ್ಫೂರ್ತಿ’ ಎಂದ ವೀಕ್ಷಕರು

ವಿಜಯ್​ಗೆ ಸ್ಪಂದನಾ ಸಾವು ಆಘಾತಕಾರಿ ಆಗಿತ್ತು. ಅವರು ಹಲವು ದಿನಗಳಕಾಲ ಚಿತ್ರರಂಗದಿಂದ ದೂರವೇ ಇದ್ದರು. ‘ಡಿಕೆಡಿ’ ಶೋಗೂ ಅವರು ಬರುತ್ತಿರಲಿಲ್ಲ. ಈಗ ಅವರು ಎಲ್ಲವನ್ನೂ ಮರೆತು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲು ನಿರ್ಧರಿಸಿದ್ದಾರೆ. ಡಿಕೆಡಿ ಶೋಗೂ ಬರುತ್ತಿದ್ದಾರೆ.

‘ಡಿಕೆಡಿ’ ಜಡ್ಜ್​ ಸ್ಥಾನದಲ್ಲಿ ವಿಜಯ್ ರಾಘವೇಂದ್ರ; ‘ನಿಮ್ಮ ಜೀವನೋತ್ಸಾಹ ನಮಗೆಲ್ಲ ಸ್ಫೂರ್ತಿ’ ಎಂದ ವೀಕ್ಷಕರು
ವಿಜಯ್ ರಾಘವೇಂದ್ರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 01, 2023 | 1:08 PM

ವಿಜಯ್ ರಾಘವೇಂದ್ರ (Vijay Raghavendra) ಅವರ ಬಾಳಲ್ಲಿ ದೊಡ್ಡ ಕಹಿ ಘಟನೆ ನಡೆಯಿತು. ಅವರ ಪತ್ನಿ ಸ್ಪಂದನಾ ಅವರು ಕಳೆದ ತಿಂಗಳು ಹೃದಯಾಘಾತದಿಂದ ಮೃತಪಟ್ಟರು. ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಅವರನ್ನು ನೆನಪಿಸಿಕೊಂಡಾಗಲೆಲ್ಲ ವಿಜಯ್​ಗೆ ಅಳು ಬರುತ್ತದೆ. ಆದರೆ, ಈ ನೋವನ್ನು ನುಂಗಿ ಮುಂದೆ ಸಾಗಲೇಬೇಕಿದೆ. ಈಗ ವಿಜಯ್ ರಾಘವೇಂದ್ರ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ತೊಡಗಿಕೊಂಡಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಜಡ್ಜ್​ ಸ್ಥಾನದಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ವಿಜಯ್ ಅವರ ಜೀವನೋತ್ಸಾಹ ಕಂಡು ಅನೇಕರು ಭೇಷ್ ಎಂದಿದ್ದಾರೆ.

ವಿಜಯ್ ಹಾಗೂ ಸ್ಪಂದನಾ ಪ್ರೀತಿಸಿ ಮದುವೆ ಆದವರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಏಕಾಏಕಿ ಅವರು ಮೃತಪಟ್ಟರೆ ಯಾರಿಗಾದರೂ ಶಾಕ್ ಆಗುತ್ತದೆ. ವಿಜಯ್​ಗೂ ಸ್ಪಂದನಾ ಸಾವು ಆಘಾತಕಾರಿ ಆಗಿತ್ತು. ಅವರು ಹಲವು ದಿನಗಳಕಾಲ ಚಿತ್ರರಂಗದಿಂದ ದೂರವೇ ಇದ್ದರು. ‘ಡಿಕೆಡಿ’ ಶೋಗೂ ಅವರು ಬರುತ್ತಿರಲಿಲ್ಲ. ಈಗ ಅವರು ಎಲ್ಲವನ್ನೂ ಮರೆತು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲು ನಿರ್ಧರಿಸಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಈ ವಾರದ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಜಡ್ಜ್​​ ಸ್ಥಾನದಲ್ಲಿ ವಿಜಯ್ ರಾಘವೇಂದ್ರ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಪ್ರೋಮೋಗೆ ಬಗೆಬಗೆಯ ಕಮೆಂಟ್​ಗಳು ಬಂದಿವೆ. ‘ರಾಘು ಸರ್ ನೀವು ಬಂದಿದ್ದು ಖುಷಿ ಆಯ್ತು. ನೋವುಗಳ ಜೊತೆ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವುದು ಮುಖ್ಯ ಅನ್ನೋದನ್ನು ಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ನಿಮ್ಮ ಜೀವನೋತ್ಸಾಹ ನಮಗೆಲ್ಲ ಮಾದರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪೂರ್ತಿ ಎಪಿಸೋಡ್ ಶನಿವಾರ (ಸೆಪ್ಟೆಂಬರ್ 2) ಹಾಗೂ ಭಾನುವಾರ (ಸೆಪ್ಟೆಂಬರ್ 3) ರಾತ್ರಿ 7:30ಕ್ಕೆ ಪ್ರಸಾರ ಆಗಲಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಈಗಾಗಲೇ ಆರು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಏಳನೇ ಸೀಸನ್ ಪ್ರಸಾರ ಕಾಣುತ್ತಿದೆ. ಅನೇಕ ಪ್ರತಿಭೆಗಳಿಗೆ ‘ಡಿಕೆಡಿ’ ವೇದಿಕೆ ಆಗಿದೆ. ಶಿವರಾಜ್​ಕುಮಾರ್, ರಕ್ಷಿತಾ ಪ್ರೇಮ್, ಚಿನ್ನಿ ಮಾಸ್ಟರ್​, ವಿಜಯ್ ರಾಘವೇಂದ್ರ ಜಡ್ಜ್ ಸ್ಥಾನದಲ್ಲಿದ್ದಾರೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ವಿಜಯ್ ರಾಘವೇಂದ್ರ ‘ಕದ್ದ ಚಿತ್ರ’ದ ರಿಲೀಸ್ ದಿನಾಂಕ ಘೋಷಣೆ; ನೋವಿನಲ್ಲೂ ಮರೆತಿಲ್ಲ ಕರ್ತವ್ಯ

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರು ಆಗಸ್ಟ್ 6ರಂದು ಮಾಲ್ಡೀವ್ಸ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಾಕಷ್ಟು ಸಮಯ ಹಿಡಿಯಿತು. ಅಲ್ಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವಿಮಾನದ ಮೂಲಕ ಸ್ಪಂದನಾ ಶವವನ್ನು ಭಾರತಕ್ಕೆ ತರಲಾಯಿತು. ಬಳಿಕ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ವಿಜಯ್ ಅವರು ‘ಕದ್ದ ಚಿತ್ರ’ದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸೆಪ್ಟೆಂಬರ್ 8ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲೂ ಅವರು ಭಾಗಿ ಆಗುತ್ತಿದ್ದಾರೆ. ಈ ಚಿತ್ರವನ್ನು ಸುಹಾಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ