‘ಛೋಟಾ ಚಾಂಪಿಯನ್ ಫಿನಾಲೆ’; ಅದ್ದೂರಿ ವೇದಿಕೆ ಮೇಲೆ ‘ತತ್ಸಮ ತದ್ಭವ’ ಸಿನಿಮಾ ತಂಡ
‘ಛೋಟಾ ಚಾಂಪಿಯನ್’ ಹಲವು ಮಕ್ಕಳಿಗೆ ವೇದಿಕೆ ಆಗಿದೆ. ಇತ್ತೀಚೆಗೆ ‘ಛೋಟಾ ಚಾಂಪಿಯನ್ಸ್’ ಫಿನಾಲೆ ತುಮಕೂರಿನಲ್ಲಿ ನಡೆದಿದೆ. ಈ ವಾರ ಇದು ಪ್ರಸಾರ ಕಾಣುತ್ತಿದೆ. ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಜೀ ಕನ್ನಡ ವಾಹಿನಿ ಕೇವಲ ಧಾರಾವಾಹಿ ಮಾತ್ರವಲ್ಲದೆ ರಿಯಾಲಿಟಿ ಶೋಗಳನ್ನು ನೀಡುವುದರಲ್ಲೂ ಮುಂದಿದೆ. ಹಲವು ರಿಯಾಲಿಟಿ ಶೋಗಳು ಈ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿವೆ. ಆ ಪೈಕಿ ‘ಛೋಟಾ ಚಾಂಪಿಯನ್’ (Chota Champion) ಕೂಡ ಸಾಕಷ್ಟು ಗಮನ ಸೆಳೆದಿದೆ. ಈ ಶೋನ ಫಿನಾಲೆ ಈ ವಾರ ಪ್ರಸಾರ ಕಾಣುತ್ತಿದೆ. ಈ ರಿಯಾಲಿಟಿ ಶೋ ನೋಡಲು ವೀಕ್ಷಕರು ಕಾದಿದ್ದಾರೆ. ಶನಿವಾರ (ಸೆಪ್ಟೆಂಬರ್ 2) ಹಾಗೂ ಭಾನುವಾರ (ಸೆಪ್ಟೆಂಬರ್ 3) ರಾತ್ರಿ ಆರು ಗಂಟೆಯಿಂದ ಏಳೂವರೆವರೆಗೆ ಈ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ.
‘ಛೋಟಾ ಚಾಂಪಿಯನ್’ ಹಲವು ಮಕ್ಕಳಿಗೆ ವೇದಿಕೆ ಆಗಿದೆ. ಸಣ್ಣ ವಯಸ್ಸಿನಲ್ಲೇ ಪ್ರತಿಭೆ ತೋರಿಸಲು ಜೀ ಕನ್ನಡ ವಾಹಿನಿ ಅವಕಾಶ ಮಾಡಿಕೊಟ್ಟಿದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳು ಸಖತ್ ಮನರಂಜನೆ ನೀಡಿದ್ದಾರೆ. ಇತ್ತೀಚೆಗೆ ‘ಛೋಟಾ ಚಾಂಪಿಯನ್ಸ್’ ಫಿನಾಲೆ ತುಮಕೂರಿನಲ್ಲಿ ನಡೆದಿದೆ. ಈ ವಾರ ಇದು ಪ್ರಸಾರ ಕಾಣುತ್ತಿದೆ. ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
‘ಛೋಟಾ ಚಾಂಪಿಯನ್’ ವೇದಿಕೆಗೆ ‘ತತ್ಸಮ ತದ್ಭವ’ ತಂಡ ಆಗಮಿಸಿದೆ. ಹೌದು, ಈ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲೇ ರಿಲೀಸ್ ಆಗಲಿದೆ. ಹೀಗಾಗಿ, ಈ ಚಿತ್ರದಲ್ಲಿ ನಟಿಸಿದ ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಕ್ಕಳು ನೀಡುವ ಮನರಂಜನೆಗೆ ಸಾಕ್ಷಿ ಆಗಿದ್ದು ಮಾತ್ರವಲ್ಲದೆ, ಸಿನಿಮಾ ಪ್ರಚಾರ ಕೂಡ ಮಾಡಿದ್ದಾರೆ. ‘ತುಮಕೂರು ನನಗೆ ತವರೂರು ಇದ್ದ ಹಾಗೆ’ ಎಂದು ಪ್ರಜ್ವಲ್ ದೇವರಾಜ್ ಹೇಳಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿ ಹಲವು ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ‘ಕಲ್ಪತರ ನಾಡಿನಲ್ಲಿ ಛೋಟಾ ಪ್ರತಿಭೆಗಳ ಮನರಂಜನೆಯ ಮಹಾ ಉತ್ಸವ. ಛೋಟಾ ಚಾಂಪಿಯನ್ Grand Finale. ಶನಿ-ಭಾನು ಸಂಜೆ 6ರಿಂದ 7.30ರವರೆಗೆ’ ಎಂದು ಪ್ರೋಮೋಗೆ ಕ್ಯಾಪ್ಷನ್ ನೀಡಲಾಗಿದೆ.
View this post on Instagram
ಇದನ್ನೂ ಓದಿ: ‘ಅತ್ತಿಗೆ ಹೇಳಿದ ಡೈಲಾಗ್ ನನಗೆ ಪರ್ಸನಲಿ ಕನೆಕ್ಟ್ ಆಯ್ತು’: ‘ತತ್ಸಮ ತದ್ಭವ’ ಟ್ರೇಲರ್ ನೋಡಿ ಧ್ರುವ ಸರ್ಜಾ ಮಾತು
‘ತತ್ಸಮ ತದ್ಭವ’ ಸಿನಿಮಾನ ವಿಶಾಲ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಮೇಘನಾ ರಾಜ್ ಹಾಗೂ ಚಿರು ಗೆಳೆಯ ಪನ್ನಗ ಭರಣ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ಸ್ಫೂರ್ತಿ ಅನಿಲ್ ಅವರು ಪನ್ನಗ ಭರಣ ಜೊತೆ ಸೇರಿಕೊಂಡಿದ್ದಾರೆ. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಸೇರಿ ಅನೇಕ ಕಲಾವಿದರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.