‘ಅತ್ತಿಗೆ ಹೇಳಿದ ಡೈಲಾಗ್ ನನಗೆ ಪರ್ಸನಲಿ ಕನೆಕ್ಟ್ ಆಯ್ತು’: ‘ತತ್ಸಮ ತದ್ಭವ’ ಟ್ರೇಲರ್ ನೋಡಿ ಧ್ರುವ ಸರ್ಜಾ ಮಾತು
ಮೇಘನಾ ರಾಜ್ ಅವರು ನಟಿಸಿರುವ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ, ಡಾಲಿ ಧನಂಜಯ್ ಮುಂತಾದವರು ಅತಿಥಿಗಳಾಗಿ ಬಂದು ಶುಭ ಹಾರೈಸಿದ್ದಾರೆ. ಟ್ರೇಲರ್ ನೋಡಿದ ಬಳಿಕ ಧ್ರುವ ಸರ್ಜಾ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ನಟಿ ಮೇಘನಾ ರಾಜ್ (Meghana Raj) ಅವರು ‘ತತ್ಸಮ ತದ್ಭವ’ ಸಿನಿಮಾ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಬಾಲಾಜಿ ಮನೋಹರ್, ದೇವರಾಜ್, ಶ್ರುತಿ, ಟಿ.ಎಸ್. ನಾಗಾಭರಣ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ತತ್ಸಮ ತದ್ಭವ’ (Tatsama Tadbhava) ಸಿನಿಮಾದ ಟ್ರೇಲರ್ ಇಂದು (ಆಗಸ್ಟ್ 27) ಬಿಡುಗಡೆ ಆಗಿದೆ. ಈ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ, ಡಾಲಿ ಧನಂಜಯ್ ಮುಂತಾದವರು ಗೆಸ್ಟ್ ಆಗಿ ಬಂದು ಶುಭ ಕೋರಿದ್ದಾರೆ. ಟ್ರೇಲರ್ ನೋಡಿದ ಬಳಿಕ ಧ್ರುವ ಸರ್ಜಾ (Dhruva Sarja) ಅವರು ಕೊಂಚ ಎಮೋಷನಲ್ ಆದರು. ಅತ್ತಿಗೆಯ ಸಿನಿಮಾಗೆ ಅವರು ಶುಭ ಕೋರಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಅವರು ಆಡಿದ ಮಾತುಗಳೇನು? ಇಲ್ಲಿದೆ ವಿವರ..
ಧ್ರುವ ಸರ್ಜಾ ಅವರಿಗೆ ‘ತತ್ಸಮ ತದ್ಭವ’ ಟ್ರೇಲರ್ ಇಷ್ಟ ಆಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಸೆಪ್ಟೆಂಬರ್ 15ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಸಸ್ಪೆನ್ಸ್, ಕ್ರೈಮ್, ಥ್ರಿಲ್ಲರ್ ಮುಂತಾದ ಅಂಶಗಳು ಈ ಸಿನಿಮಾದ ಟ್ರೇಲರ್ನಲ್ಲಿ ಇದೆ. ಎಲ್ಲರೂ ಇದನ್ನು ಟ್ರೇಲರ್ ರೀತಿ ನೋಡಿದರು. ಆದರೆ ನನಗೆ ಇದರಲ್ಲಿನ ಒಂದು ಅಂಶ ಪರ್ಸನಲ್ ಆಗಿ ಕಲೆಕ್ಟ್ ಆಯ್ತು. ಮೈ ಹಸ್ಬೆಂಡ್ ಈಸ್ ಮಿಸ್ಸಿಂಗ್ ಅಂತ ಮೊದಲ ಶಾಟ್ನಲ್ಲೇ ಅತ್ತಿಗೆ ಹೇಳುತ್ತಾರೆ. ನಿಜ ಹೇಳಬೇಕು ಎಂದರೆ ಈ ಕಾರ್ಯಕ್ರಮದಲ್ಲಿ ನನ್ನ ಅಣ್ಣ ಮಿಸ್ಸಿಂಗ್. ನಿರ್ದೇಶಕ ವಿಶಾಲ್ ಆತ್ರೇಯಾ, ನಿರ್ಮಾಪಕ ಪನ್ನಗ ಭರಣ, ನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ಪ್ರಜ್ವಲ್ ಅವರು ತುಂಬ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅತ್ತಿಗೆಯದ್ದು ಇದು ಕಮ್ಬ್ಯಾಕ್ ಅಲ್ಲ. ಅವರು ಯಾವಾಗಲೂ ಇಲ್ಲಿಯೇ ಇದ್ದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇದನ್ನೂ ಓದಿ: ಈ ಚಾಲೆಂಜ್ ಗೆದ್ದರೆ ನಿಮಗೆ ಸಿಗಲಿದೆ ಮೇಘನಾ ರಾಜ್ ಭೇಟಿ ಮಾಡುವ ಅವಕಾಶ; ನೀವು ಮಾಡಬೇಕಾಗಿದ್ದಿಷ್ಟೇ..
‘ಇದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮೇಘನಾ ರಾಜ್ ಜೊತೆ ನಾನು ‘ಅಲ್ಲಮ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆ. ಹೊಸ ನಿರ್ದೇಶಕರು, ಹೊಸ ನಿರ್ಮಾಪಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಪನ್ನಗ ಭರಣ ಯಾವಾಗಲೂ ಕನಸುಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಮೇಘನಾ ರಾಜ್ ಮತ್ತು ಪ್ರಜ್ವಲ್ ಅವರನ್ನು ಬೇರೆ ರೀತಿ ತೋರಿಸಲಾಗಿದೆ ಅಂತ ನಮ್ಮ ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ’ ಎಂದು ಡಾಲಿ ಧನಂಜಯ್ ಹಾರೈಸಿದ್ದಾರೆ.
ಇದನ್ನೂ ಓದಿ: Meghana Raj: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಮೇಘನಾ ರಾಜ್
ಈ ಸಿನಿಮಾಗೆ ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ ಮಾಡಿದ್ದಾರೆ. ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಆದ ಬಳಿಕ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಸ್ಮರಿಸಿಕೊಂಡಿದ್ದಾರೆ. ‘ಈ ಸಿನಿಮಾ ಶುರುವಾಗಲು ಚಿರು ಕಾರಣ. ಅಂದು ರಾತ್ರಿ ಪನ್ನಗ ಮತ್ತು ಪ್ರಜ್ವಲ್ ಅವರನ್ನು ಕೂರಿಸಿಕೊಂಡು ಜೊತೆಯಾಗಿ ಪ್ರೊಡಕ್ಷನ್ ಮಾಡುವ ಆಸೆಯನ್ನು ಚಿರು ಹೇಳಿಕೊಂಡಿದ್ದರು. ಆದರೆ ನಂತರ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆ. ಜೀವನ ನಿಲ್ಲಬಾರದು. ಸ್ನೇಹಿತನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪನ್ನಗ ಭರಣ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ಸಿನಿಮಾ ಶುರುವಾದ ಬಗೆಯನ್ನು ವಿವರಿಸಿದರು ಮೇಘನಾ ರಾಜ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.