ಚಕ್ರವರ್ತಿ ನಿರ್ದೇಶನದ ‘ಹುಲಿ ನಾಯಕ’ನಿಗೆ ಉಪೇಂದ್ರ ಸಾಥ್
Upendra: ಚಕ್ರವರ್ತಿ ಚಂದ್ರಚೂಡ್ ನಿರ್ದೇಶಿಸುತ್ತಿರುವ 'ಹುಲಿ ನಾಯಕ' ಸಿನಿಮಾದ ಪೋಸ್ಟರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಟ ಉಪೇಂದ್ರ (Upendra) ಕೆಲವು ದಿನಗಳ ಹಿಂದಷ್ಟೆ ತಮ್ಮ ಹೇಳಿಯೊಂದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದರು. ಅವರ ಮೇಲೆ ಕೆಲವಾರು ಎಫ್ಐಆರ್ ಗಳು ದಾಖಲಾಗಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆದು, ಉಪೇಂದ್ರ ಬಂಧನಕ್ಕೆ ಒತ್ತಾಯ ಕೇಳಿ ಬಂದಿತ್ತು. ಆದರೆ ಹೈಕೋರ್ಟ್ ಉಪೇಂದ್ರಗೆ ರಿಲೀಫ್ ನೀಡಿತ್ತು. ಪ್ರಕರಣ ಬಹುತೇಕ ತಣ್ಣಗಾಗಿದ್ದು, ಉಪೇಂದ್ರ ಈಗ ಸಿನಿಮಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ ಹೊಸ ಸಿನಿಮಾಕ್ಕೆ ಉಪ್ಪಿ ಬೆಂಬಲ ನೀಡಿದ್ದಾರೆ.
ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ರಿಯಲ್ ಸ್ಟಾರ್ ಉಪೇಂದ್ರ, ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡುತ್ತಿರುವ, ಡಿ.ಜೆ ಚಕ್ರವರ್ತಿ ನಿರ್ದೇಶ ಮಾಡಿ, ಮಿಲಿಂದ್ ಗೌತಮ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.
ನೂತನ ಸಿನಿಮಾದ ಹೆಸರು “ಹುಲಿ ನಾಯಕ” ಎಂದಾಗಿದ್ದು, ಕೋಟೆಯ ಚಿತ್ರವಿರುವ ಕುತೂಹಲಕಾರಿ ಪೋಸ್ಟರ್ ಅನ್ನು ನಟ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಈ ಐತಿಹಾಸಿಕ ಕತೆಯುಳ್ಳ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ:‘ಬಾ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ’; ಸೂರಪ್ಪ ಬಾಬು ವಿರುದ್ಧ ಏಕವಚನದಲ್ಲಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್
‘ಅನ್ಲಾಕ್ ರಾಘವ’ ಸಿನಿಮಾದಲ್ಲಿ ನಟಿಸಿರುವ ನಟ ಮಿಲಿಂಗ್ ಗೌತಮ್ ಕಳೆದ ಕೆಲ ತಿಂಗಳಿನಿಂದಲೂ ಈ ಹೊಸ ಐತಿಹಾಸಿಕ ಸಿನಿಮಾಕ್ಕೆ ತಯಾರಾಗುತ್ತಿದ್ದರು. ಕೆಲ ತಿಂಗಳ ಹಿಂದೆ ಪ್ರಾಜೆಕ್ಟ್ ಒಂದನ್ನು ಘೋಷಣೆ ಮಾಡಿದ್ದ ಚಕ್ರವರ್ತಿ ಚಂದ್ರಚೂಡ್ ಇದೀಗ ಹಠಾತ್ತನೆ ‘ಹುಲಿ ನಾಯಕ’ ಕೈಗೆತ್ತಿಕೊಂಡಿದ್ದಾರೆ. ಇಂದು ಪೋಸ್ಟರ್ ಬಿಡುಗಡೆ ಬಳಿಕ ನಿರ್ದೇಶಕ ಡಿ.ಜೆ.ಚಕ್ರವರ್ತಿ, ನಿರ್ಮಾಪಕ ಮಂಜುನಾಥ್ ಹಾಗೂ ನಾಯಕ ಮಿಲಿಂದ್ ಗೌತಮ್ ಅವರಿಗೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹಾರೈಸಿದ್ದು, ಉಪೇಂದ್ರ ಶುಭ ಹಾರೈಸುತ್ತಿರುವ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.
ಕೆಲ ತಿಂಗಳ ಹಿಂದೆ ‘ಪಾದರಾಯ’ ಹೆಸರಿನ ಸಿನಿಮಾವನ್ನು ಚಕ್ರವರ್ತಿ ಚಂದ್ರಚೂಡ್ ಘೋಷಣೆ ಮಾಡಿದ್ದರು. ಸಿನಿಮಾದಲ್ಲಿ ಮಂಗ್ಲಿ ನಾಯಕಿಯಾಗಿಯೂ, ನಿರ್ದೇಶಕ ನಾಗಶೇಖರ್ ನಾಯಕನಾಗಿಯೂ ನಟಿಸಲಿದ್ದಾರೆ ಎಂದಾಗಿತ್ತು. ಆದರೆ ಈ ಸಿನಿಮಾ ಹಠಾತ್ತನೆ ನಿಂತು ಹೋಯಿತು. ತಮ್ಮ ಸಿನಿಮಾದ ಹೆಸರು ಹೇಳಿಕೊಂಡು ಕೆಲವರು ಹಣ ಮಾಡಲು ನಿಂತಿದ್ದಾರೆ ಎಂದು ಆರೋಪ ಮಾಡಿದ್ದ ಚಕ್ರವರ್ತಿ ಚಂದ್ರಚೂಡ್, ಸಿನಿಮಾದಲ್ಲಿ ತಾವೇ ನಟಿಸುವುದಾಗಿ ಘೋಷಣೆ ಮಾಡಿದರು. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಇದೀಗ ‘ಹುಲಿ ನಾಯಕ’ ಸಿನಿಮಾದೊಂದಿಗೆ ಬರಲು ಸಜ್ಜಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:56 pm, Sat, 26 August 23