‘ದೃಷ್ಟಿ ಬೊಟ್ಟು’ ಧಾರಾವಾಹಿಯಿಂದ ಎಕ್ಸಿಟ್ ಆದ ವಿಜಯ್ ಸೂರ್ಯ? ಬಿಗ್ ಬಾಸ್ ಅನುಮಾನ

ಕಲರ್ಸ್ ಕನ್ನಡದ ‘ದೃಷ್ಟಿ ಬೊಟ್ಟು’ ಧಾರಾವಾಹಿಯಿಂದ ನಟ ವಿಜಯ್ ಸೂರ್ಯ ಅವರು ಹೊರ ನಡೆದಿರುವ ಬಗ್ಗೆ ವರದಿಗಳು ಹರಿದಾಡುತ್ತಿವೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವರು ಹೋಗುತ್ತಿದ್ದಾರೆ ಎಂಬ ಊಹಾಪೋಹಗಳು ಹಬ್ಬುತ್ತಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ವಿಜಯ್ ಸೂರ್ಯ ಅವರು ಈ ಹಿಂದೆ "ಅಗ್ನಿಸಾಕ್ಷಿ" ಧಾರಾವಾಹಿಯಲ್ಲೂ ನಟಿಸಿದ್ದರು.

‘ದೃಷ್ಟಿ ಬೊಟ್ಟು’ ಧಾರಾವಾಹಿಯಿಂದ ಎಕ್ಸಿಟ್ ಆದ ವಿಜಯ್ ಸೂರ್ಯ? ಬಿಗ್ ಬಾಸ್ ಅನುಮಾನ
ವಿಜಯ್ ಸೂರ್ಯ

Updated on: Sep 08, 2025 | 2:56 PM

‘ದೃಷ್ಟಿ ಬೊಟ್ಟು’ ಧಾರಾವಾಹಿ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಕಾಣುತ್ತಾ ಬರುತ್ತಿದೆ. ಈಗ ಧಾರಾವಾಹಿಯಲ್ಲಿ ವಿಜಯ್ ಸೂರ್ಯ (Vijay Surya) ಹೀರೋ ಆಗಿ ನಟಿಸಿದ್ದರು. ಈ ಧಾರಾವಾಹಿಯಿಂದ ಅವರು ಹೊರ ನಡೆದಿದ್ದಾರೆ ಎನ್ನುವ ಬಗ್ಗೆ ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅವರು ‘ಬಿಗ್ ಬಾಸ್​’ಗೆ ತೆರಳಲು ಈ ರೀತಿ ನಿರ್ಧಾರ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ವಾಹಿನಿ ಕಡೆಯಿಂದಾಗಲಿ ಅಥವಾ ಅವರ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ವಿಜಯ್ ಸೂರ್ಯ ಅವರು ಈ ಮೊದಲು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಆರು ವರ್ಷಗಳ ಕಾಲ ಪ್ರಸಾರ ಕಂಡಿತು. ಈ ಧಾರಾವಾಹಿಯಲ್ಲಿ ವಿಜಯ್ ಹಾಗೂ ವೈಷ್ಣವಿ ಗೌಡ ಒಟ್ಟಾಗಿ ನಟಿಸಿದರು. ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆಯಿತು. ಆ ಬಳಿಕ ವಿಜಯ್ ಸೂರ್ಯ ಅವರು ಕಿರುತೆರೆ ಲೋಕ ತೊರೆದು ಹಿರಿತೆರೆಯಲ್ಲಿ ಬ್ಯುಸಿ ಆದರು. ಅವರು ಸಿನಿಮಾಗಳನ್ನು ಮಾಡಿದರು.

ಒಂದು ಗ್ಯಾಪ್ ಬಳಿಕ ವಿಜಯ್ ಅವರು ಕಿರುತೆರೆಗೆ ಮರಳಿದ್ದಾರೆ. ‘ದೃಷ್ಟಿ ಬೊಟ್ಟು’ ಧಾರಾವಾಹಿಯಲ್ಲಿ ದತ್ತ ಶ್ರೀರಾಮ್ ಪಾಟೀಲ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಉತ್ತರ ಕರ್ನಾಟಕ ಶೈಲಿಯಲ್ಲಿ ಇತ್ತು. ಖಡಕ್ ಆದ ಪಾತ್ರ ಅವರದ್ದಾಗಿತ್ತು. ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರಂತೆ.

ಇದನ್ನೂ ಓದಿ
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ ಮಂದಣ್ಣ? ಗಮನ ಸೆಳೆದ ಉಂಗುರ
‘ಹಳ್ಳಿ ಪವರ್​​’ನಲ್ಲಿ ಮೊದಲ ವಾರವೇ ಇಬ್ಬರು ಎಲಿಮಿನೇಟ್
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ

ಸುಂದರಿಯರು ಮೋಸ ಮಾಡುತ್ತಾರೆ ಎಂಬ ನಂಬಿಕೆ ದತ್ತನದ್ದು. ಸೌಂದರ್ಯ ತನಗೆ ಮುಳುವು ಎಂದು ದೃಷ್ಟಿ ನಂಬಿದ್ದಳು. ಈ ಕಾರಣದಿಂದ ಕಪ್ಪು ಬಣ್ಣವನ್ನು ಅವಳು ಮುಖಕ್ಕೆ ಬಳಿದುಕೊಳ್ಳುತ್ತಿದ್ದಳು. ಇಬ್ಬರ ಮದುವೆಯೂ ನಡೆದಿದೆ. ಈಗ ದೃಷ್ಟಿಯ ನಿಜವಾದ ಬಣ್ಣ ದತ್ತಾಗೆ ಗೊತ್ತಾಗಿದೆ. ಹೀಗಾಗಿ, ಆತ ಸಾಕಷ್ಟು ಬೇಸರಗೊಂಡಿದ್ದಾನೆ.

ಇದನ್ನೂ ಓದಿ: ’ವೀರಪುತ್ರ’ನಾಗಿ ಅಗ್ನಿಸಾಕ್ಷಿ ಸಿದ್ದಾರ್ಥ್: ಖಡಕ್ ಲುಕ್​ನಲ್ಲಿ ಚಾಕಲೇಟ್ ಹೀರೋ ವಿಜಯ್ ಸೂರ್ಯ

ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರ ನಡೆದಿದ್ದು ಏಕೆ ಎಂಬ ವಿಚಾರ ಇನ್ನೂ ರಿವೀಲ್ ಆಗಿಲ್ಲ. ಅವರು ಬಿಗ್ ಬಾಸ್​ಗೆ ಬರುತ್ತಿರಬಹುದು, ಹೀಗಾಗಿ ಧಾರಾವಾಹಿ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಕಲರ್ಸ್​​ನಲ್ಲಿ ‘ದೃಷ್ಟಿ ಬೊಟ್ಟು’ ಧಾರಾವಾಹಿ ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.