‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ಬದಲು ಯಾರನ್ನು ಆಯ್ಕೆ ಮಾಡ್ತೀರಾ? ವಿಕಾಶ್ ಉತ್ತರ ಏನು?

ಜೀ ಕನ್ನಡದ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ವಿಕಾಶ್ ಉತ್ತಯ್ಯ ಮತ್ತು ನಿಶಾ ರವಿಕೃಷ್ಣನ್ ಅವರ ಜೋಡಿ ಜನಪ್ರಿಯವಾಗಿದೆ. ನಿಶಾ ಅವರ ಬದಲಿ ಕುರಿತ ಪ್ರಶ್ನೆಗೆ ವಿಕಾಶ್ ಅವರು ನಿಶಾ ಅವರನ್ನೇ ಆಯ್ಕೆ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ. ವಿಕಾಶ್ ಅವರು ಇದಕ್ಕೆ ಬಹುತೇಕ ಗಂಭೀರ ಉತ್ತರವನ್ನೇ ನೀಡಿದರು ಎನ್ನಬಹುದು.

‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ಬದಲು ಯಾರನ್ನು ಆಯ್ಕೆ ಮಾಡ್ತೀರಾ? ವಿಕಾಶ್ ಉತ್ತರ ಏನು?
ಅಣ್ಣಯ್ಯ
Edited By:

Updated on: Jul 03, 2025 | 6:00 AM

ಜೀ ಕನ್ನಡದಲ್ಲಿ ‘ಅಣ್ಣಯ್ಯ’ ಧಾರಾವಾಹಿಯು (Annayya Serial) ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ವಿಕಾಶ್ ಉತ್ತಯ್ಯ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಗೆ ನಿಶಾ ರವಿಕೃಷ್ಣನ್ ಅವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಿಶಾ ಅವರು ಇಲ್ಲ ಎಂದರೆ ಅವರ ಬದಲು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ವಿಕಾಶ್​ಗೆ ಕೇಳಲಾಯಿತು ಮತ್ತು ಅವರು ಈ ಪ್ರಶ್ನೆಗೆ ನೇರ ಉತ್ತರವನ್ನು ನೀಡಿದರು.

ಕೀರ್ತಿ ಇಎನ್​ಟಿ ಕ್ಲೀನಿಕ್ ಹೆಸರಿನ ಯೂಟ್ಯೂಬ್ ಚಾನೆಲ್​ನ ಕೀರ್ತಿ ಅವರು ನಡೆಸುತ್ತಿದ್ದಾರೆ. ಅವರ ಈ ಚಾನೆಲ್​ಗೆ ವಿಕಾಶ್ ಅವರು ಅತಿಥಿಯಾಗಿ ಬಂದರು. ಇಲ್ಲಿ ಗಂಭೀರ ಪ್ರಶ್ನೆಗಳಿಗಿಂತ ಫನ್ ಪ್ರಶ್ನೆಯನ್ನೇ ಹೆಚ್ಚು ಕೇಳಲಾಗುತ್ತದೆ. ಈ ವೇಳೆ ನಿಶಾ ಬಗ್ಗೆ ಫನ್ ಪ್ರಶ್ನೆ ಕೇಳಲಾಯಿತು. ಆದರೆ, ವಿಕಾಶ್ ಅವರು ಇದಕ್ಕೆ ಬಹುತೇಕ ಗಂಭೀರ ಉತ್ತರವನ್ನೇ ನೀಡಿದರು ಎನ್ನಬಹುದು.

ಇದನ್ನೂ ಓದಿ
‘ನಾನು ಫಾತಿಮಾಗೆ ಲವರ್, ತಂದೆ ಎರಡೂ ಅಲ್ಲ’; ಆಮಿರ್ ಖಾನ್ ನೇರ ಮಾತು
ನೀಲಿ ತಾರೆಯ ಅನುಮಾನಾಸ್ಪದ ಸಾವು; ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ
ಲವ್ ಇನ್ ದಿ ಏರ್; ಮಗುವಿನಂತೆ ಯಶ್​​ನ ತಬ್ಬಿ ಕುಳಿತ ರಾಧಿಕಾ ಪಂಡಿತ್
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

‘ಜೀ ಕನ್ನಡದವರು ಅಣ್ಣಯ್ಯ ಧಾರಾವಾಹಿಯಲ್ಲಿ ನಿಶಾ ಬದಲು ಬೇರೆಯವರನ್ನು ಆಯ್ಕೆ ಮಾಡಬೇಕು ಎಂದುಕೊಂಡಿದ್ದೇವೆ. ಜೀ ಕನ್ನಡದ ಕಲಾವಿದರನ್ನೇ ಆಯ್ಕೆ ಮಾಡಬೇಕು ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ’ ಎಂದು ಸಂದರ್ಶಕ ಕೀರ್ತಿ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ವಿಕಾಶ್, ನಿಶಾನೇ ಆಯ್ಕೆ ಮಾಡ್ಕೋತೀನಿ ಎಂದರು.

‘ಆ ರೀತಿ ಯೋಚನೆ ಮಾಡಲೇಬಾರದು. ಅದು ನಡೆದು ಹೋದರೆ? ಹೀಗಾಗಿ, ಪಾರುನೇ ನನ್ನ ಆಯ್ಕೆ. ಅಣ್ಣಯ್ಯ ಧಾರಾವಾಹಿಯಲ್ಲಿ ಅವರನ್ನು ಬಿಟ್ಟು ಬೇರೆಯವರನ್ನು ನಟಿಸಲು ನನಗೆ ಇಷ್ಟ ಇಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದ ‘ಅಣ್ಣಯ್ಯ’; ಟಾಪ್ 5 ಸೀರಿಯಲ್​ಗಳಿವು

‘ಅಣ್ಣಯ್ಯ’ ಧಾರಾವಾಹಿಯು ಜೀ ಕನ್ನಡದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಧಾರಾವಾಹಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈ ಕಾರಣದಿಂದಲೇ ಧಾರಾವಾಹಿಯು ಟಿಆರ್​ಪಿಯಲ್ಲೂ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ನಿಶಾ ಹಾಗೂ ವಿಕಾಶ್ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿದೆ. ನಿಶಾ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಬ್ಯುಸಿ ಇದ್ದಾರೆ. ಈಗ ಅವರ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ರಿಲೀಸ್ ಆಗಲು ರೆಡಿ ಆಗಿದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.