ಔಟ್​ ಆದವರ ಬ್ಲಾಂಕೆಟ್​ನ ವಿನಯ್​ ಇಟ್ಟುಕೊಂಡಿದ್ದು ಯಾಕೆ? ಇಲ್ಲಿದೆ ಕಾರಣ

|

Updated on: Jan 29, 2024 | 10:16 PM

ತಮ್ಮದೇ ಗುಂಪಿನ ಸದಸ್ಯರು ಎಲಿಮಿನೇಟ್​ ಆದಾಗ ಅವರ ಬ್ಲಾಂಕೆಟ್​ಗಳನ್ನು ವಿನಯ್​ ಇಟ್ಟುಕೊಳ್ಳುತ್ತಿದ್ದರು. ಅದನ್ನೇ ಗುರಿಯಾಗಿಸಿಕೊಂಡು ಡ್ರೋನ್​ ಪ್ರತಾಪ್​ ಟೀಕೆ ಮಾಡಿದ್ದರು. ಅಷ್ಟಕ್ಕೂ ವಿನಯ್​ ಅವರು ಬೇರೆಯವರ ಬ್ಲಾಂಕೆಟ್​ ಇಟ್ಟುಕೊಂಡಿದ್ದು ಯಾಕೆ ಎಂಬುದನ್ನು ಸ್ವತಃ ವಿವರಿಸಿದ್ದಾರೆ. ಅನೇಕ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಔಟ್​ ಆದವರ ಬ್ಲಾಂಕೆಟ್​ನ ವಿನಯ್​ ಇಟ್ಟುಕೊಂಡಿದ್ದು ಯಾಕೆ? ಇಲ್ಲಿದೆ ಕಾರಣ
ವಿನಯ್​ ಗೌಡ
Follow us on

ನಟ ವಿನಯ್​ ಗೌಡ ಅವರು ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ 3ನೇ ರನ್ನರ್​ಅಪ್​ ಆಗಿದ್ದಾರೆ. ದೊಡ್ಮನೆಯಲ್ಲಿ ಇದ್ದಷ್ಟು ದಿನವೂ ಅವರು ಸಖತ್​ ಸದ್ದು ಮಾಡಿದ್ದರು. ಅವರೇ ವಿನ್​ ಆಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್​ (Drone Prathap) ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು. ಅದರಲ್ಲೂ ವೀಕೆಂಡ್​ ಎಪಿಸೋಡ್​ನಲ್ಲಿ ಡ್ರೋನ್​ ಪ್ರತಾಪ್​ ಅವರು ಹೇಳಿದ ಒಂದು ಮಾತಿನಿಂದ ವಿನಯ್​ಗೆ ತುಂಬ ಬೇಸರ ಆಗಿತ್ತು. ‘ಎಲಿಮಿನೇಟ್​ ಆದ ಸ್ನೇಹಿತರ ಬೆಡ್​ಶೀಟ್​ ಎಲ್ಲವೂ ವಿನಯ್​ (Vinay Gowda) ಅವರ ಬೆಡ್​ ಸೇರುತ್ತಿವೆ’ ಎಂದು ಪ್ರತಾಪ್​ ಹೇಳಿದ್ದು ಬಹಳ ಚರ್ಚೆ ಆಗಿತ್ತು. ಆ ಬಗ್ಗೆ ಈಗ ವಿನಯ್​ ಮಾತನಾಡಿದ್ದಾರೆ.

ಬಿಗ್ ಬಾಸ್​ ಶೋ ಮುಗಿದ ಬಳಿಕ ವಿನಯ್​ ಗೌಡ ಅವರು ‘ಟಿವಿ 9 ಕನ್ನಡ’ಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ಅನೇಕ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮದೇ ಗುಂಪಿನ ಸದಸ್ಯರು ಎಲಿಮಿನೇಟ್​ ಆದಾಗ ಅವರ ಬ್ಲಾಂಕೆಟ್​ಗಳನ್ನು ವಿನಯ್​ ಇಟ್ಟುಕೊಳ್ಳುತ್ತಿದ್ದರು. ಅದನ್ನೇ ಗುರಿಯಾಗಿಸಿಕೊಂಡು ಡ್ರೋನ್​ ಪ್ರತಾಪ್​ ಟೀಕೆ ಮಾಡಿದ್ದರು. ಅಷ್ಟಕ್ಕೂ ವಿನಯ್​ ಅವರು ಬೇರೆಯವರ ಬ್ಲಾಂಕೆಟ್​ ಇಟ್ಟುಕೊಂಡಿದ್ದು ಯಾಕೆ ಎಂಬುದನ್ನು ಸ್ವತಃ ವಿವರಿಸಿದ್ದಾರೆ.

ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

‘ಬಿಗ್​ ಬಾಸ್​ ಮನೆಯಲ್ಲಿ 100 ದಿನ ಇರುತ್ತೇವೆ. ಸ್ನೇಹಿತರ ಪೈಕಿ ಒಬ್ಬೊಬ್ಬರನ್ನೇ ಕಳೆದುಕೊಂಡಾಗ ಅವರನ್ನು ಮಿಸ್​ ಮಾಡಿಕೊಳ್ಳುತ್ತೇವೆ. ಎಲಿಮಿನೇಟ್​ ಆದ ಸ್ನೇಹಿತರು ಅವರವರ ವಸ್ತುಗಳನ್ನು ತೆಗೆದುಕೊಂಡು ಹೋದ ಬಳಿಕ ಅಲ್ಲಿ ಉಳಿಯುತ್ತಿದ್ದದ್ದು ಅವರ ಬ್ಲಾಂಕೆಟ್ಸ್​ ಮಾತ್ರ. ಅವರ ಜೊತೆಗಿನ ಫೀಲ್​ಗಾಗಿ ಆ ಬ್ಲಾಂಕೆಟ್​ಗಳನ್ನು ನನ್ನ ಜೊತೆ ಇಟ್ಟುಕೊಳ್ಳುತ್ತಿದ್ದೆ. ಅದರ ಮೇಲೆ ನಾನು ಮಲಗುತ್ತಿದೆ’ ಎಂದು ವಿನಯ್​ ಗೌಡ ಹೇಳಿದ್ದಾರೆ.

‘ಯಾಕೆ ಬ್ಲಾಂಕೆಟ್​ ಇಟ್ಟುಕೊಂಡಿದ್ದೀರಿ ಅಂತ ಡ್ರೋನ್​ ಪ್ರತಾಪ್​ ನನ್ನ ಬಳಿ ಬಂದು ತುಂಬ ಪ್ರೀತಿಯಿಂದ ಕೇಳಿದ. ಸ್ನೇಹಿತರನ್ನು ಮಿಸ್​ ಮಾಡಿಕೊಂಡಿದ್ದಕ್ಕೆ ಇದನ್ನು ಇಟ್ಟುಕೊಂಡಿದ್ದು ಅಂತ ಅವನಿಗೆ ಹೇಳಿದೆ. ಮರುದಿನ ಇವರು ಫ್ರೆಂಡ್ಸ್​ನ ತುಳಿದು ಮೇಲೆ ಬರ್ತಾರೆ, ಬ್ಲಾಂಕೆಟ್​ ಸೇರಿಸಿಕೊಳ್ತಾರೆ ಅಂತ ಅವನು ಪಂಚಾಯ್ತಿನಲ್ಲಿ ಹೇಳಿದಾಗ ನನಗೆ ತುಂಬ ಹರ್ಟ್​ ಆಯಿತು. ನಂತರ ಅವನು ಕ್ಷಮೆ ಕೇಳಿದ. ಎಲ್ಲವೂ ಅರ್ಥವಾಯಿತು’ ಎಂದಿದ್ದಾರೆ ವಿನಯ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ