AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತುಕಾಲಿ ಗೆದ್ದರೆ ನಾನು ಹಿಮಾಲಯಕ್ಕೆ ಹೋಗಿ ದೀಕ್ಷೆ ಪಡೆಯುತ್ತೇನೆ’: ವಿನಯ್​ ಗೌಡ ಪ್ರತಿಜ್ಞೆ

ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​ ಅವರು ಫಿನಾಲೆ ತಲುಪಿದ್ದಾರೆ. ‘ತುಕಾಲಿ ಫಿನಾಲೆಯಲ್ಲಿ ಗೆದ್ದರೆ ವಿನಯ್​ ಗೌಡ ಪ್ರತಿಕ್ರಿಯೆ ಏನಾಗಿರುತ್ತದೆ’ ಎಂದು ಕಿಚ್ಚ ಸುದೀಪ್​ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ವಿನಯ್​ ಅವರು ಈ ರೀತಿ ಪ್ರತಿಜ್ಞೆ ಮಾಡಿದ್ದಾರೆ. ‘ಆ ಬೀನ್ ಬ್ಯಾಗ್ ಬಗ್ಗೆ ಬಹಳ ಜೋಪಾನವಾಗಿರಿ’ ಎಂದು ಸುದೀಪ್​ ಹೇಳಿದ್ದಾರೆ.

‘ತುಕಾಲಿ ಗೆದ್ದರೆ ನಾನು ಹಿಮಾಲಯಕ್ಕೆ ಹೋಗಿ ದೀಕ್ಷೆ ಪಡೆಯುತ್ತೇನೆ’: ವಿನಯ್​ ಗೌಡ ಪ್ರತಿಜ್ಞೆ
ವಿನಯ್​ ಗೌಡ, ತುಕಾಲಿ ಸಂತೋಷ್​
ಮದನ್​ ಕುಮಾರ್​
|

Updated on: Jan 21, 2024 | 8:29 AM

Share

ನೋಡನೋಡುತ್ತಿದ್ದಂತೆಯೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ರಿಯಾಲಿಟಿ ಶೋ ಕೊನೆಯ ಹಂತವನ್ನು ತಲುಪಿದೆ. ಜನವರಿ 27 ಮತ್ತು 28ರಂದು ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಈಗಾಗಲೇ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಅವರು ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ತುಕಾಲಿ ಸಂತೋಷ್​ (Tukali Santosh) ಅವರು ಫಿನಾಲೆಗೆ ಪ್ರವೇಶ ಪಡೆದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಕೊನೇ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಅವರು ಮಾತನಾಡಿದ್ದಾರೆ. ಈ ಸಂಚಿಕೆಯಲ್ಲಿ ವಿನಯ್​ ಗೌಡ (Vinay Gowda) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ತುಕಾಲಿ ಸಂತೋಷ್​ ಅವರನ್ನು ಕೆಲವರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಕೆಲವರು ಏನೇನೋ ತಂತ್ರಗಾರಿಕೆ ಮಾಡಿದರೂ ಕೂಡ ಫಿನಾಲೆಗೆ ಬರಲು ಸಾಧ್ಯವಾಗಲಿಲ್ಲ. ಅವರೆಲ್ಲರಿಗಿಂತಲೂ ಮುಂಚೆ ತುಕಾಲಿ ಸಂತೋಷ್​ ಅವರು ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ. ಆ ಬಗ್ಗೆ ಸುದೀಪ್​ ಒಂದು ಪ್ರಶ್ನೆ ಕೇಳಿದ್ದಾರೆ. ‘ನೀವೆಲ್ಲ ಬಹಳ ಒದ್ದಾಡಿಕೊಂಡು, ಕಿತ್ತಾಡಿಕೊಂಡು ಇರುವಾಗ ತುಕಾಲಿ ಸಂತೋಷ್​ ಅವರು ಮೆತ್ತಗೆ ಫಿನಾಲೆ ತಲುಪಿದರು. ಅವರೇ ಫಿನಾಲೆಯಲ್ಲಿ ಗೆದ್ದರೆ ವಿನಯ್​ ಗೌಡ ಪ್ರತಿಕ್ರಿಯೆ ಏನಾಗಿರುತ್ತದೆ’ ಎಂದು ಸುದೀಪ್​ ಕೇಳಿದ್ದಾರೆ.

ಇದನ್ನೂ ಓದಿ: ಫಿನಾಲೆ ತಲುಪಿದ ವರ್ತೂರು ಸಂತೋಷ್​; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ

‘ನಾನು ಏನೂ ಮಾತನಾಡದೇ, ಸೀದಾ ಹಿಮಾಲಯಕ್ಕೆ ಹೋಗಿ ದೀಕ್ಷೆ ತೆಗೆದುಕೊಳ್ಳುತ್ತೇವೆ ಸರ್​’ ಎಂದು ವಿನಯ್​ ಗೌಡ ಅವರು ಸುದೀಪ್​ ಎದುರು ಪ್ರತಿಜ್ಞೆ ಮಾಡಿದ್ದಾರೆ. ಈ ಮಾತು ಕೇಳಿ ಸುದೀಪ್​ ಅವರಿಗೆ ಅಚ್ಚರಿ ಆಗಿದೆ. ‘ಆ ಬೀನ್ ಬ್ಯಾಗ್ ಬಗ್ಗೆ ಬಹಳ ಜೋಪಾನವಾಗಿರಿ’ ಎಂದು ಸುದೀಪ್​ ಹೇಳಿದ್ದಾರೆ. ಫಿನಾಲೆಯಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ತಂದೆಯ ಹೆಸರು ದುರುಪಯೋಗ ಮಾಡಿಕೊಳ್ಳಬೇಡಿ’: ಬುಲೆಟ್​ ಪ್ರಕಾಶ್​ ಮಗ ರಕ್ಷಕ್​ಗೆ ಸುದೀಪ್​ ಎಚ್ಚರಿಕೆ

ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​ ಅವರು ಫಿನಾಲೆ ತಲುಪಿದ್ದಾರೆ. ಕಾಮಿಡಿ ಮಾಡುವ ಮೂಲಕ ತುಕಾಲಿ ಸಂತೋಷ್​ ಅವರು ಬಿಗ್ ಬಾಸ್​ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ ಬಂದಿದ್ದಾರೆ. ಅವರಿಂದಾಗಿ ಪ್ರೇಕ್ಷಕರಿಗೆ ಮನರಂಜನೆ ಸಿಕ್ಕಿದೆ. ವರ್ತೂರು ಸಂತೋಷ್ ಜೊತೆ ಅವರಿಗೆ ಹೆಚ್ಚು ಸ್ನೇಹ ಬೆಳೆದಿದೆ. ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವವರು ತಾವಿಬ್ಬರೇ ಆಗಿರಬೇಕು ಎಂದು ತುಕಾಲಿ ಸಂತೋಷ್​ ಆಸೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ