ಕಾರ್ತಿಕ್​ ಮೇಲೆ ಸಂಗೀತಾ, ನಮ್ರತಾ ಮಾತಿನ ದಾಳಿ; ಜೊತೆ ಇದ್ರೂ ಕಷ್ಟ, ಒಬ್ಬರೇ ಇದ್ರೂ ಕಷ್ಟ

ತಮ್ಮ ನಿಲುವು ಏನು ಎಂಬುದನ್ನು ಕಾರ್ತಿಕ್​ ಮಹೇಶ್​ ತಿಳಿಸಿದ್ದಾರೆ. ‘ನಾನು ಕುಗ್ಗಿದ್ದು ಹೌದು. ಆದರೆ ದೈಹಿಕವಾಗಿ ಅಲ್ಲ. ಮಾನಸಿಕವಾಗಿ ಲೋ ಆಗಿದ್ದೆ. ಆಟದಿಂದ ನಾನು ಡೈವರ್ಟ್​ ಆಗಿಲ್ಲ. ಸ್ನೇಹಿತರಾಗಿ ಇರುವುದು ಸಹಜ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್​ ಮಾಡೋದು ಕೂಡ ಸಹಜ’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ.

ಕಾರ್ತಿಕ್​ ಮೇಲೆ ಸಂಗೀತಾ, ನಮ್ರತಾ ಮಾತಿನ ದಾಳಿ; ಜೊತೆ ಇದ್ರೂ ಕಷ್ಟ, ಒಬ್ಬರೇ ಇದ್ರೂ ಕಷ್ಟ
ಸಂಗೀತಾ ಶೃಂಗೇರಿ, ನಮ್ರತಾ ಗೌಡ, ಕಾರ್ತಿಕ್​ ಮಹೇಶ್​
Follow us
ಮದನ್​ ಕುಮಾರ್​
|

Updated on:Jan 21, 2024 | 8:36 AM

ನಟ ಕಾರ್ತಿಕ್​ ಮಹೇಶ್​ ಅವರು ಬಿಗ್​ ಬಾಸ್ (Bigg Boss Kannada) ಮನೆಯಲ್ಲಿ ಸ್ಟ್ರಾಂಗ್​ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಕೊನೆಯ ಹಂತದ ತನಕ ಅವರು ಸಾಗಿ ಬಂದಿದ್ದಾರೆ. ಫಿನಾಲೆ ಹತ್ತಿರ ಇರುವಾಗ ಅವರು ಕುಗ್ಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ವಾರದ ಪಂಚಾಯ್ತಿಯಲ್ಲಿ ಸುದೀಪ್​ ಅವರು ಈ ಪ್ರಶ್ನೆ ಕೇಳಿದ್ದಾರೆ. ಹೌದು ಎಂದು ಸಂಗೀತಾ ಶೃಂಗೇರಿ (Sangeetha Sringeri) ಮತ್ತು ನಮ್ರತಾ ಗೌಡ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಆದರೆ ಅದನ್ನು ಕಾರ್ತಿಕ್​ ಮಹೇಶ್​ (Karthik Mahesh) ಅವರು ಒಪ್ಪಿಕೊಂಡಿಲ್ಲ. ಆರಂಭದಿಂದ ಈವರೆಗೆ ಕಾರ್ತಿಕ್​ ಅವರಲ್ಲಿ ಆದ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಮ್ರತಾ ಮತ್ತು ಸಂಗೀತಾ ಅವರು ಮಾತಿನ ದಾಳಿ ಮಾಡಿದ್ದಾರೆ.

ಆರಂಭದಲ್ಲಿ ಸಂಗೀತಾ ಶೃಂಗೇರಿ ಜೊತೆ ಕಾರ್ತಿಕ್​ ಮಹೇಶ್​ ಅವರು ಆಪ್ತವಾಗಿದ್ದರು. ಅನೇಕ ಟಾಸ್ಕ್​ಗಳಲ್ಲಿ ಸಂಗೀತಾಗೆ ಅವರು ಸಪೋರ್ಟ್​ ಮಾಡಿದ್ದರು. ಅದೇ ರೀತಿ ಸಂಗೀತಾ ಕೂಡ ಕಾರ್ತಿಕ್​ಗೆ ಬೆಂಬಲ ನೀಡಿದ್ದರು. ಬಳಿಕ ಅವರ ನಡುವೆ ವೈಮನಸ್ಸು ಉಂಟಾಯಿತು. ಆಗ ಅವರು ನಮ್ರತಾ ಗೌಡ ಜೊತೆ ಸ್ನೇಹ ಬೆಳೆಸಿದರು. ಈಗ ಆ ಸ್ನೇಹ ಕೂಡ ಅಂತ್ಯವಾಗಿದೆ. ಈ ವಿಚಾರದಲ್ಲಿ ಕಾರ್ತಿಕ್​ ಅವರನ್ನು ಸಂಗೀತಾ ಮತ್ತು ನಮ್ರತಾ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನನ್ನ ಗೆಳೆತನವನ್ನು ಬಳಸಿಕೊಂಡ್ರಿ’; ಕಾರ್ತಿಕ್ ಹಾಗೂ ನಮ್ರತಾ ಮಧ್ಯೆ ಮೂಡಿತು ಮತ್ತಷ್ಟು ಅಂತರ

ಬಿಗ್​ ಬಾಸ್​ ಮನೆಯಲ್ಲಿ ಒಬ್ಬರ ಜೊತೆ ಸ್ನೇಹ ಮೂಡುವುದು, ಬಳಿಕ ಆ ಸ್ನೇಹ ಅಂತ್ಯವಾಗುವುದು ಸಹಜ. ಒಬ್ಬರ ಜೊತೆ ಫ್ರೆಂಡ್​ಶಿಪ್​ ಮುಗಿದ ಬಳಿಕ ಇನ್ನೊಬ್ಬರ ಜೊತೆ ಆಪ್ತತೆ ಹೆಚ್ಚುವುದು ಕೂಡ ಅಷ್ಟೇ ಸಹಜ. ಕಾರ್ತಿಕ್ ಮಹೇಶ್​ ಕೂಡ ಅದನ್ನೇ ಮಾಡಿದ್ದಾರೆ. ಹಾಗಿದ್ದರೂ ಕೂಡ ಅವರ ವರ್ತನೆಯನ್ನು ಸಂಗೀತಾ, ನಮ್ರತಾ ಟೀಕಿಸಿದ್ದಾರೆ. ‘ಕಾರ್ತಿಕ್​ಗೆ ಒಂಟಿಯಾಗಿ ಇರಲು ಸಾಧ್ಯವಿಲ್ಲ’ ಎಂದು ಅವರಿಬ್ಬರು ಹೇಳಿದ್ದಾರೆ. ಒಂದು ವೇಳೆ ಒಂಟಿಯಾಗಿದ್ದರೆ ‘ಯಾರ ಜೊತೆಯೂ ಸೇರುವುದಿಲ್ಲ’ ಎಂಬ ಕಾರಣ ನೀಡಿ ನಾಮಿನೇಟ್​ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ‘ಜೊತೆಗೆ ಇದ್ದರೂ ಕಷ್ಟ, ಒಬ್ಬರೇ ಇದ್ದರೂ ಕಷ್ಟ’ ಎಂಬ ಪರಿಸ್ಥಿತಿ ಕಾರ್ತಿಕ್​ ಮಹೇಶ್​ ಅವರದ್ದಾಗಿದೆ.

ತಮ್ಮ ನಿಲುವು ಏನು ಎಂಬುದನ್ನು ಕಾರ್ತಿಕ್​ ಮಹೇಶ್​ ತಿಳಿಸಿದ್ದಾರೆ. ‘ನಾನು ಕುಗ್ಗಿದ್ದು ನಿಜ. ಆದರೆ ದೈಹಿಕವಾಗಿ ಅಲ್ಲ. ಮಾನಸಿಕವಾಗಿ ಲೋ ಆಗಿದ್ದೆ. ಆಟದಿಂದ ನಾನು ಡೈವರ್ಟ್​ ಆಗಿಲ್ಲ. ಸ್ನೇಹಿತರಾಗಿರುವುದು ಸಹಜ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್​ ಮಾಡೋದು ಸಹಜ’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ಸಂಗೀತಾ, ನಮ್ರತಾ, ತನಿಷಾ ಜೊತೆಗಿನ ಸ್ನೇಹ ಅಂತ್ಯವಾದ ಬಳಿಕ ಕಾರ್ತಿಕ್​ ಮಹೇಶ್​ ಅವರು ತುಕಾಲಿ ಸಂತೋಷ್​ ಹಾಗೂ ವರ್ತೂರು ಸಂತೋಷ್​ ಜೊತೆ ಹೆಚ್ಚು ಕಾಲ ಕಳೆಯಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:58 am, Sun, 21 January 24