‘ರಕ್ಷಕ್ ಅವರನ್ನು ದೇವರು ಚೆನ್ನಾಗಿ ಇಟ್ಟಿರಲಿ’: ಸುದೀಪ್ ಖಡಕ್ ತಿರುಗೇಟು
ಬಿಗ್ ಬಾಸ್ ಮನೆಯೊಳಗೆ ಮತ್ತು ಹೊರಗೆ ರಕ್ಷಕ್ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ಸುದೀಪ್ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿತ್ತು. ಬಿಗ್ ಬಾಸ್ ಕಾರ್ಯಕ್ರಮದ ಕೊನೇ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ರಕ್ಷಕ್ಗೆ ಖಡಕ್ ತಿರುಗೇಟು ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಖ್ಯಾತಿ ಗಳಿಸಿದ್ದಾರೆ. ಆದರೆ ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಬಂದ ಬಳಿಕ ಅವರು ಕೆಲವು ಕಡೆಗಳಲ್ಲಿ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳು ಟೀಕೆಗೆ ಒಳಗಾಗಿವೆ. ಅದರಲ್ಲೂ ಕಿಚ್ಚ ಸುದೀಪ್ ಬಗ್ಗೆ ರಕ್ಷಕ್ (Rakshak Bullet) ನೀಡಿದ ಹೇಳಿಕೆಗಳಿಗೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಅದಕ್ಕೆ ಸೋಶಿಯಲ್ ಮೀಡಿಯಾ ಮೂಲಕ ರಕ್ಷಕ್ ಕ್ಷಮೆ ಕೂಡ ಕೇಳಿದ್ದರು. ಹಾಗಂತ ಈ ಕಿರಿಕ್ ಇಷ್ಟಕ್ಕೇ ನಿಂತಿಲ್ಲ. ಬಿಗ್ ಬಾಸ್ ಕಾರ್ಯಕ್ರಮದ ಕೊನೇ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಸೀಸನ್ 10ರಲ್ಲಿ ಈಗಾಗಲೇ ಎಲಿಮಿನೇಟ್ ಆದ ಸ್ಪರ್ಧಿಗಳಿಗೆ ಮತ್ತೊಮ್ಮೆ ಅತಿಥಿಗಳಾಗಿ ಬಿಗ್ ಬಾಸ್ ಮನೆಗೆ ಕಾಲಿಡಲು ಅವಕಾಶ ನೀಡಲಾಗಿತ್ತು. ರಕ್ಷಕ್, ಈಶಾನಿ, ಸಿರಿ, ಮೈಕಲ್ ಅಜಯ್, ಸ್ನೇಹಿತ್ ಮುಂತಾದವರು ಈ ವಾರ ದೊಡ್ಮನೆಗೆ ಬಂದು ಹೋಗಿದ್ದಾರೆ. ಆದರೆ ತಮಗೆ ಸಿಕ್ಕ ಈ ಒಂದು ಅವಕಾಶವನ್ನು ರಕ್ಷಕ್ ಮತ್ತು ಈಶಾನಿ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಬಿಗ್ ಬಾಸ್ ಮನೆಯೊಳಗೆ ಬಂದ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ಸುದೀಪ್ ಅವರ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಪ್ರತಾಪ್ಗೆ ಕಾಗೆ ಅಂದಿದ್ದ ಈಶಾನಿಗೆ ಕಿಚ್ಚನ ಕ್ಲಾಸ್; ಎಲಿಮಿನೇಟ್ ಬಳಿಕವೂ ಕಿರಿಕ್
‘ಎಲಿಮಿನೇಟ್ ಆದವರ ಬೆಡ್ಶೀಟ್ಗಳು ವಿನಯ್ ಅವರ ಬೆಡ್ ಸೇರುತ್ತಿವೆ’ ಎಂದು ಡ್ರೋನ್ ಪ್ರತಾಪ್ ಈ ಮೊದಲು ನೀಡಿದ್ದ ಹೇಳಿಕೆಯನ್ನು ಇಟ್ಟುಕೊಂಡು ರಕ್ಷಕ್ ಅವರು ಮಾತಿನ ದಾಳಿಗೆ ಮುಂದಾಗಿದ್ದರು. ಅದರಿಂದ ಡ್ರೋನ್ ಪ್ರತಾಪ್ ಅವರಿಗೆ ಕಿರಿಕಿರಿ ಆಗಿತ್ತು. ಅಲ್ಲದೇ, ಈಶಾನಿ ಅವರು ಡ್ರೋನ್ ಪ್ರತಾಪ್ ಅವರನ್ನು ಕಾಗೆ ಎಂದು ಕರೆದಿದ್ದರು. ಈಗ ಇವರಿಬ್ಬರಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
‘ಆ ಸ್ಪರ್ಧಿ ಹೆಸರು ರಕ್ಷಕ್ ಅಲ್ವಾ? ರಕ್ಷಕ್ ಅವರಿಂದ ಇನ್ನೊಂದು ಬ್ಲಾಂಕೆಟ್ ಬರತ್ತೆ. ರಕ್ಷಕ್ ಅವರೇ.. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ’ ಎಂದು ಸುದೀಪ್ ಗರಂ ಆಗಿದ್ದಾರೆ. ಈಶಾನಿಯ ಮಾತುಗಳನ್ನು ಕೂಡ ಸುದೀಪ್ ಖಂಡಿಸಿದ್ದಾರೆ. ‘ಯಾವ ಆ್ಯಂಗಲ್ನಲ್ಲಿ ನೀವು ಸೋತು ಹೊರಗಡೆ ಹೋಗಿ, ಕಲಿತು ಒಳಗೆ ಬಂದ್ರಿ ಅಂತ ನಿಮಗೆ ಅನಿಸುತ್ತೆ ಹೇಳಿ..’ ಎಂದು ಸುದೀಪ್ ಚಾಟಿ ಬೀಸಿದ್ದಾರೆ. ಅದೇ ರೀತಿ, ನಮ್ರತಾ ಕುರಿತು ಸ್ನೇಹಿತ್ ಆಡಿದ ಮಾತುಗಳ ಬಗ್ಗೆಯೂ ಕಿಚ್ಚ ಸುದೀಪ್ ತಕರಾರು ತೆಗೆದಿದ್ದಾರೆ. ಈ ಸಂಚಿಕೆ ಜನವರಿ 20ರಂದು ರಾತ್ರಿ 9 ಗಂಟೆಗೆ ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ದಲ್ಲಿ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ