ಪ್ರತಾಪ್ಗೆ ಕಾಗೆ ಅಂದಿದ್ದ ಈಶಾನಿಗೆ ಕಿಚ್ಚನ ಕ್ಲಾಸ್? ಎಲಿಮಿನೇಟ್ ಬಳಿಕವೂ ಕಿರಿಕ್
ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಂದು ಮಹತ್ವದ ಸಂಗತಿ ಜರುಗಿತು. ಈಗಾಗಲೇ ಎಲಿಮಿನೇಟ್ ಆಗಿರುವ ಮೈಕಲ್ ಅಜಯ್, ಸ್ನೇಹಿತ್ ಗೌಡ, ಈಶಾನಿ, ರಕ್ಷಕ್ ಮುಂತಾದವರು ಮತ್ತೆ ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಡ್ರೋನ್ ಪ್ರತಾಪ್ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗ ಅಂತಿಮ ಘಟ್ಟವನ್ನು ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಜನವರಿ 27 ಮತ್ತು 28ರಂದು ಅದ್ದೂರಿಯಾಗಿ ಬಿಗ್ ಬಾಸ್ ಫಿನಾಲೆ (Bigg Boss Kannada Finale) ಪ್ರಸಾರ ಆಗಲಿದೆ. ಕಿಚ್ಚ ಸುದೀಪ್ ಅವರು ಇಂದು (ಜನವರಿ 20) ಈ ಸೀಸನ್ನ ಕೊನೇ ಪಂಚಾಯ್ತಿ ನಡೆಸಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವವರ ತಪ್ಪು ಮಾಡಿದರೆ ಸುದೀಪ್ (Kichcha Sudeep) ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅದು ಸಹಜ. ಆದರೆ ಎಲಿಮಿನೇಟ್ ಆಗಿ ಹೋದವರು ತಪ್ಪು ಮಾಡಿದರೆ? ಅಂಥವರ ಬಗ್ಗೆ ಸುದೀಪ್ ಮಾತನಾಡಿದ್ದು ಕಡಿಮೆ. ಆದರೆ ಈ ವಾರ ಅವರು ಆ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಆಗಿರುವುದು ಈಶಾನಿ (Eshani) ನೀಡಿದ ಕೆಲವು ಹೇಳಿಕೆಗಳು!
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕೆಲವು ಮಹತ್ವದ ಸಂಗತಿಗಳು ಜರುಗಿದವು. ಈಗಾಗಲೇ ಎಲಿಮಿನೇಟ್ ಆಗಿ ಹೊರಗೆ ಹೊಗಿರುವ ಮೈಕೆಲ್ ಅಜಯ್, ಸ್ನೇಹಿತ್ ಗೌಡ, ಈಶಾನಿ, ರಕ್ಷಕ್, ಸಿರಿ ಮುಂತಾದವರು ಮತ್ತೆ ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಡ್ರೋನ್ ಪ್ರತಾಪ್ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ. ಇದರ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಸುದೀಪ್ ಪ್ರಸ್ತಾಪ ಮಾಡುತ್ತಾರೆ ಎಂಬುದಕ್ಕೆ ಈಗ ಸುಳಿವು ಸಿಕ್ಕಿದೆ.
ವಿರೋಧದ ಬಳಿಕ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಕ್ಷಕ್
‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ಪ್ರೋಮೋನಲ್ಲಿ ಸುದೀಪ್ ಅವರು ಈ ಬಗ್ಗೆ ಮಾತಾಡಿದ್ದಾರೆ. ‘ಈ ವಾರ ಮನೆಗೆ ಹಳೇ ಗೆಳೆಯರು ವಾಪಸ್ ಬಂದರು. ಅವರು ಹೊಸ ಉತ್ಸಾಹ ತಂದ್ರಾ ಅಥವಾ ಇರುವ ಉತ್ಸಾಹವನ್ನು ಹಾಳುಮಾಡಿ ಹೋದ್ರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಈ ಸೀಸನ್ನ ಕೊನೇ ಪಂಚಾಯ್ತಿಯಲ್ಲಿ ಈ ಎಲ್ಲ ವಿಷಯಗಳು ಪ್ರಸ್ತಾಪ ಆಗಲಿವೆ. ಜನವರಿ 20ರಂದು ಈ ಸಂಚಿಕೆ ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ.
View this post on Instagram
ಈಶಾನಿ ಹೇಳಿದ್ದು ಏನು?
‘ಕಾಗೆ ಕಕ್ಕ ಮಾಡಿ ಎಲ್ಲ ಕಡೆ ಹೋಗುತ್ತಲೇ ಇದೆ. ಸಿಂಪಥಿ ಕಾರ್ಡ್ ಬಳಕೆ ಮಾಡಿ’ ಎಂದು ಈಶಾನಿ ಹೇಳಿದ್ದರು. ಎಲಿಮಿನೇಟ್ ಆದ ಬಳಿಕ ಅತಿಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅವಕಾಶ ಈಶಾನಿಗೆ ಸಿಕ್ಕಿತು. ಅತಿಥಿಯಾಗಿ ಬಂದ ಅವರು ಇಷ್ಟೆಲ್ಲ ಖಾರವಾಗಿ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈಶಾನಿ ಅವರ ಮಾತುಗಳ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂಬುದನ್ನು ತಿಳಿಯಲು ಜ.20ರ ಸಂಚಿಕೆ ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




