ಬಿಗ್ ಬಾಸ್ ಮುಗಿದ ಬಳಿಕ ಆ ಜಾಗ ತುಂಬಲು ಬರುತ್ತಿವೆ ಹೊಸ ಧಾರಾವಾಹಿ ಹಾಗೂ ರಿಯಾಲಿಟಿ ಶೋ
ಬಿಗ್ ಬಾಸ್ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಎರಡು ಹೊಸ ಧಾರಾವಾಹಿ ಹಾಗೂ ಒಂದು ರಿಯಾಲಿಟಿ ಶೋ ಪ್ರಸಾರ ಆಗಲು ರೆಡಿ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಜನವರಿ 27 ಹಾಗೂ 28ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಈಗಿರುವ ಏಳು ಮಂದಿಯ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಅವರು ಯಾರು ಎನ್ನುವ ಕುತೂಹಲಕ್ಕೆ ಜನವರಿ 28ರಂದು ಉತ್ತರ ಸಿಗಲಿದೆ. ಬಿಗ್ ಬಾಸ್ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಎರಡು ಹೊಸ ಧಾರಾವಾಹಿ ಹಾಗೂ ಒಂದು ರಿಯಾಲಿಟಿ ಶೋ ಪ್ರಸಾರ ಆಗಲು ರೆಡಿ ಆಗಿದೆ.
ಶ್ರೀಗೌರಿ
‘ಶ್ರೀಗೌರಿ’ ಧಾರಾವಾಹಿ ಡಿಸೆಂಬರ್ 28ರಂದು ಪ್ರಸಾರ ಆರಂಭಿಸಲಿದೆ. ರಾತ್ರಿ 8:30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣಲಿದೆ. ‘ಬಿಗ್ ಬಾಸ್ ಒಟಿಟಿ’ ಮೂಲಕ ಜನಪ್ರಿಯತೆ ಪಡೆದ ಅಮೂಲ್ಯ ಗೌಡ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಅವರು ಶ್ರೀಗೌರಿ ಪಾತ್ರ ಮಾಡುತ್ತಿದ್ದಾರೆ. ‘ಯಶೋದೆ’ ಧಾರಾವಾಹಿಯಲ್ಲಿ ನಟಿಸಿ ನಂತರ ಚಿತ್ರರಂಗದಿಂದ ದೂರವೇ ಇದ್ದ ಕಾರ್ತಿಕ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸುನಿಲ್ ಪುರಾಣಿಕ್ ಅವರು ಕಥಾ ನಾಯಕಿಯ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಘು ವೈನ್ ಸ್ಟೋರ್ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ. ಈ ಮೊದಲು ರಾತ್ರಿ 8.30ಕ್ಕೆ ‘ಅಂತರಪಟ’ ಪ್ರಸಾರ ಆಗುತ್ತಿತ್ತು. ಅದರ ಪ್ರಸಾರ ಸಮಯ 10 ಗಂಟೆಗೆ ಮುಂದಕ್ಕೆ ಹೋಗಲಿದೆ.
ಕರಿಮಣಿ
‘ರಾಮಾಚಾರಿ’ ಧಾರಾವಾಹಿ ಸದ್ಯ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿದೆ. ಅದೇ ಸಮಯದಲ್ಲಿ ಧಾರಾವಾಹಿ ಮುಂದುವರಿಯಲಿದೆ. ‘ಕರಿಮಣಿ’ ಹೆಸರಿನ ಧಾರಾವಾಹಿ ಕೂಡ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ರಾತ್ರಿ 9:30ಕ್ಕೆ ಪ್ರಸಾರ ಕಾಣಲಿದೆ.
View this post on Instagram
View this post on Instagram
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ನಮ್ರತಾಗೆ ಕೈಮುಗಿದ ಸ್ನೇಹಿತ್
‘ನನ್ನಮ್ಮ ಸೂಪರ್ ಸ್ಟಾರ್ 3’
‘ನಮ್ಮಮ್ಮ ಸೂಪರ್ ಸ್ಟಾರ್’ ಈ ಮೊದಲು ಎರಡು ಸೀಸನ್ ಪ್ರಸಾರ ಕಂಡು ಯಶಸ್ವಿ ಆಗಿದೆ. ಅಮ್ಮ-ಮಕ್ಕಳ ರಿಯಾಲಿಟಿ ಶೋ ಇದು. ಈಗ ಮೂರನೇ ಸೀಸನ್ ಬರುತ್ತಿದೆ. ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಇದರ ಜಡ್ಜ್ ಸ್ಥಾನದಲ್ಲಿದ್ದಾರೆ. ಫೆಬ್ರವರಿ 3ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರ ಕಾಣಲಿದೆ.
Published On - 11:44 am, Sat, 20 January 24