‘ನನ್ನ ಗೆಳೆತನವನ್ನು ಬಳಸಿಕೊಂಡ್ರಿ’; ಕಾರ್ತಿಕ್ ಹಾಗೂ ನಮ್ರತಾ ಮಧ್ಯೆ ಮೂಡಿತು ಮತ್ತಷ್ಟು ಅಂತರ

ಫ್ಲರ್ಟ್ ಮಾಡಿದ್ದು ತಪ್ಪು ಅನ್ನೋದು ಅವರಿಗೆ ಗೊತ್ತಾಗಿದೆ. ಹೀಗಾಗಿ ಕಾರ್ತಿಕ್ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ. ಈ ಮಧ್ಯೆ ಕಾರ್ತಿಕ್ ಅವರು ನಮ್ರತಾಗೆ ಬೇಸರ ಆಗುವಂತೆ ನಡೆದುಕೊಂಡಿದ್ದು ಅವರಿಗೆ ಮತ್ತಷ್ಟು ಸಿಟ್ಟು ತರಿಸಿದೆ.

‘ನನ್ನ ಗೆಳೆತನವನ್ನು ಬಳಸಿಕೊಂಡ್ರಿ’; ಕಾರ್ತಿಕ್ ಹಾಗೂ ನಮ್ರತಾ ಮಧ್ಯೆ ಮೂಡಿತು ಮತ್ತಷ್ಟು ಅಂತರ
ಕಾರ್ತಿಕ್-ನಮ್ರತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 20, 2024 | 7:24 AM

ಸ್ನೇಹಿತ್ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಿಂದ ಎಲಿಮಿನೇಟ್ ಆದ ಬಳಿಕ ನಮ್ರತಾ ಗೌಡ ಅವರು ಕಾರ್ತಿಕ್ ಮಹೇಶ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಇಬ್ಬರ ಮಧ್ಯೆ ಆಪ್ತತೆ ಬೆಳೆದಿತ್ತು. ಆದರೆ, ಈ ಸ್ನೇಹ ಕೊನೆ ಆಗಿದೆ. ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಸ್ನೇಹಿತ್ ಅವರು ಅತಿಥಿ ಆಗಿ ಬಂದಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಕುರಿತು ಚರ್ಚೆ ಆಗಿತ್ತು. ‘ನಿಮ್ಮ ಗೆಳೆತನ ಕೆಟ್ಟದಾಗಿ ಕಾಣುತ್ತಿದೆ’ ಎಂದಿದ್ದರು ಸ್ನೇಹಿತ್. ಇದರಿಂದ ನಮ್ರತಾ ಸಾಕಷ್ಟು ಚಿಂತೆಗೆ ಒಳಗಾದರು. ಈಗ ಕಾರ್ತಿಕ್ ಹಾಗೂ ನಮ್ರತಾ ಮಧ್ಯೆ ವೈಮನಸ್ಸು ಬಂದಿದೆ. ಇಬ್ಬರೂ ಜಗಳ ಮಾಡಿಕೊಳ್ಳುತ್ತಿದ್ದಾರೆ.

ನಮ್ರತಾ ಗೌಡ ಹಾಗೂ ಕಾರ್ತಿಕ್ ಇಬ್ಬರೂ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದರು. ಇಬ್ಬರೂ ಸಾಕಷ್ಟು ಫ್ಲರ್ಟ್ ಮಾಡಿಕೊಂಡಿದ್ದಾರೆ. ಇದು ಎಲ್ಲರಿಗೂ ಕಾಣಿಸಿದೆ. ಯಾವಾಗ ದೊಡ್ಮನೆಗೆ ಅತಿಥಿಗಳು ಬಂದು ಹೋದರೋ ನಮ್ರತಾ ಅವರು ಬದಲಾಗಿದ್ದಾರೆ. ಫ್ಲರ್ಟ್ ಮಾಡಿದ್ದು ತಪ್ಪು ಅನ್ನೋದು ಅವರಿಗೆ ಗೊತ್ತಾಗಿದೆ. ಹೀಗಾಗಿ ಕಾರ್ತಿಕ್ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ. ಈ ಮಧ್ಯೆ ಕಾರ್ತಿಕ್ ಅವರು ನಮ್ರತಾಗೆ ಬೇಸರ ಆಗುವಂತೆ ನಡೆದುಕೊಂಡಿದ್ದು ಅವರಿಗೆ ಮತ್ತಷ್ಟು ಸಿಟ್ಟು ತರಿಸಿದೆ.

‘ತನಿಷಾ ಜೊತೆ ಕಾರ್ತಿಕ್ ತುಂಬಾನೇ ಆಪ್ತವಾಗಿದ್ದಾರೆ. ಅವರಿಂದ ತಮ್ಮ ಟೀ ಕಪ್ ತೊಳೆಸಿಕೊಳ್ಳುತ್ತಾರೆ’ ಎನ್ನುವ ಆರೋಪ ಈ ಮೊದಲು ಕೇಳಿ ಬಂದಿತ್ತು. ಇದನ್ನು ಸುಳ್ಳು ಮಾಡಬೇಕು ಎಂದು ಹೊರಟ ಕಾರ್ತಿಕ್ ಅವರು ತನಿಷಾ ಅವರನ್ನೇ ನಾಮಿನೇಟ್ ಮಾಡಿದರು. ಇತ್ತೀಚೆಗೆ ಮಿಡ್​ ವೀಕ್ ಎಲಿಮಿನೇಷನ್ ನಡೆದಿದ್ದು, ತನಿಷಾ ಔಟ್ ಆಗಿದ್ದಾರೆ. ‘ಯಾರು ಹೊರಹೋಗಬೇಕು’ ಎಂದು ಬಿಗ್ ಬಾಸ್ ಮನೆಯವರ ಅಭಿಪ್ರಾಯ ಕೇಳಿದಾಗ ಕಾರ್ತಿಕ್ ಅವರು ನಮ್ರತಾ ಹೆಸರನ್ನು ತೆಗೆದುಕೊಂಡರು. ಇದು ಅವರ ಕೋಪಕ್ಕೆ ಕಾರಣ ಆಗಿದೆ.

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 19ರಂದು ಪ್ರಸಾರವಾದ ಎಪಿಸೋಡ್​ನಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ‘ನಾನು ಮನೆಯಿಂದ ಹೊರಹೋಗಬೇಕು ಎಂದು ಏಕೆ ಭಾವಿಸಿದಿರಿ? ನೀವು ತನಿಷಾ ಹೆಸರನ್ನು ತಾನೇ ನಾಮಿನೇಟ್ ಮಾಡಿದ್ದು? ಅವರ ಹೆಸರನ್ನೇ ತೆಗೆದುಕೊಳ್ಳಬೇಕಿತ್ತು. ನಾಮಿನೇಟ್ ಮಾಡೋದು ತನಿಷಾನ, ಯಾರು ಹೊರಹೋಗಲಿ ಎಂದು ಕೇಳಿದಾಗ ತೆಗೆದುಕೊಳ್ಳೋದು ನನ್ನ ಹೆಸರನ್ನು’ ಎಂದು ಸಿಟ್ಟಾದರು ನಮ್ರತಾ. ‘ಎಲ್ಲರೂ ನಾಮಿನೇಟ್ ಆಗಲಿ ಎಂದು ನಾನು ತನಿಷಾ ಹೆಸರನ್ನು ನಾಮಿನೇಟ್ ಮಾಡಿದ್ದು’ ಎಂದರು ಕಾರ್ತಿಕ್.

ಇದನ್ನೂ ಓದಿ: ‘ಹೊರ ಹೋದ್ಮೇಲೂ ಮಾತನಾಡಲ್ಲ’; ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡು ಮೂರು ಕಾರಣ ನೀಡಿದ ನಮ್ರತಾ

ಆ ಬಳಿಕ ನಮ್ರತಾ ಅವರ ಕೋಪ ಮತ್ತಷ್ಟು ಹೆಚ್ಚಿತು. ‘ನೀವು ನನ್ನ ಗೆಳೆತನವನ್ನು ಬಳಸಿಕೊಂಡ್ರಿ’ ಎಂದು ಸಿಟ್ಟಲ್ಲೇ ಹೇಳಿದರು. ಫ್ಲರ್ಟ್ ವಿಚಾರದಲ್ಲಿ ಕೇವಲ ಕಾರ್ತಿಕ್ ಅವರ ತಪ್ಪು ಮಾತ್ರ ಇದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ರತಾ ಅವರು ಪ್ರತಿಕ್ರಿಯೆ ನೀಡಿದ್ದಕ್ಕೆ ಕಾರ್ತಿಕ್ ಅವರು ಮುಂದುವರಿದಿದ್ದು. ಹೀಗಾಗಿ, ವೀಕೆಂಡ್ ಎಪಿಸೋಡ್​ನಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆ ಆಗುವ ಸಾಧ್ಯತೆ ಇದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡೋ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ