‘ಹೊರ ಹೋದ್ಮೇಲೂ ಮಾತನಾಡಲ್ಲ’; ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡು ಮೂರು ಕಾರಣ ನೀಡಿದ ನಮ್ರತಾ

ನಮ್ರತಾ ಜೊತೆ ಸ್ನೇಹಿತ್ ಮೊದಲಿನಂತೆ ಮಾತನಾಡಿಲ್ಲ. ಇದು ನಮ್ರತಾಗೆ ಬೇಸರ ತಂದಿದೆ. ಮೂರು ಕಾರಣ ನೀಡಿ ಅವರು ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡಿದ್ದಾರೆ. ‘ಹೊರ ಹೋದಮೇಲೆ ಬಹುಶಃ ನಿಮ್ಮ ಜೊತೆ ಮತ್ತೆ ಮಾತನಾಡಲ್ಲ’ ಎಂದು ನಮ್ರತಾ ನೇರವಾಗಿ ಹೇಳಿದ್ದಾರೆ.

‘ಹೊರ ಹೋದ್ಮೇಲೂ ಮಾತನಾಡಲ್ಲ’; ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡು ಮೂರು ಕಾರಣ ನೀಡಿದ ನಮ್ರತಾ
ನಮ್ರತಾ-ಸ್ನೇಹಿತ್
Follow us
ರಾಜೇಶ್ ದುಗ್ಗುಮನೆ
|

Updated on:Jan 19, 2024 | 10:16 AM

ನಮ್ರತಾ ಗೌಡ (Namratha Gowda) ಹಾಗೂ ಸ್ನೇಹಿತ್ ಗೌಡ ಬಿಗ್ ಬಾಸ್ ಜರ್ನಿಯಲ್ಲಿ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ನಮ್ರತಾ ಎದುರು ಮದುವೆ ಪ್ರಪೋಸಲ್ ಕೂಡ ಇಟ್ಟಿದ್ದರು ಸ್ನೇಹಿತ್. ಆದರೆ, ಇದಕ್ಕೆಲ್ಲ ನಮ್ರತಾ ಸೊಪ್ಪು ಹಾಕಿಲ್ಲ. ಆ ಬಳಿಕ ಸ್ನೇಹಿತ್ ಎಲಿಮಿನೇಟ್ ಆದರು. ಇದು ದುಃಖದ ಬೀಳ್ಕೊಡುಗೆ ಆಗಿತ್ತು. ಸ್ನೇಹಿತ್ ಹಾಗೂ ನಮ್ರತಾ ಇಬ್ಬರೂ ಕಣ್ಣೀರು ಹಾಕಿದ್ದರು. ಇದೆಲ್ಲ ಘಟಿಸಿ ಹಲವು ವಾರಗಳು ಕಳೆದಿವೆ. ಇತ್ತೀಚೆಗೆ ಸ್ನೇಹಿತ್ ಅವರು ದೊಡ್ಮನೆಗೆ ಅಥಿತಿಯಾಗಿ ಮರಳಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳ ರೀಯೂನಿಯನ್ ಆಗಿದೆ. ಈ ವೇಳೆ ಸ್ನೇಹಿತ್ ಜೊತೆ ಫ್ರೆಂಡ್​ಶಿಪ್ ಮುರಿದುಕೊಳ್ಳೋ ನಿರ್ಧಾರ ತೆಗೆದುಕೊಂಡಿದ್ದಾರೆ ನಮ್ರತಾ.

ಸ್ನೇಹಿತ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ. ನಮ್ರತಾ ಜೊತೆ ಅವರು ಕ್ಲೋಸ್ ಆಗಿದ್ದನ್ನೂ ಕೆಲವರು ಟೀಕೆ ಮಾಡಲಾಗಿದೆ. ಇದರಿಂದ ಸ್ನೇಹಿತ್ ಅವರು ಅಂಜಿದ್ದಾರೆ. ಹೀಗಾಗಿ ನಮ್ರತಾ ಜೊತೆ ಮೊದಲಿನಂತೆ ಮಾತನಾಡಿಲ್ಲ. ಇದು ನಮ್ರತಾಗೆ ಬೇಸರ ಮೂಡಿಸಿದೆ. ಮೂರು ಕಾರಣ ನೀಡಿ ಅವರು ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡಿದ್ದಾರೆ. ‘ಹೊರ ಹೋದಮೇಲೆ ಬಹುಶಃ ನಿಮ್ಮ ಜೊತೆ ಮತ್ತೆ ಮಾತನಾಡಲ್ಲ’ ಎಂದಿದ್ದಾರೆ ನಮ್ರತಾ.

ಇದನ್ನೂ ಓದಿ: ತಮ್ಮ ಬಗ್ಗೆ ಹೊರಗಿರೋ ಅಭಿಪ್ರಾಯ ಕೇಳಿ ಕಣ್ಣೀರು ಹಾಕಿದ ನಮ್ರತಾ

‘ನೀವು ಎಲ್ಲಾ ಫ್ಯಾಮಿಲಿಯವರನ್ನು ಕಾಂಟ್ಯಾಕ್ಟ್ ಮಾಡಿದ್ದೀರಿ. ಆದರೆ, ನನ್ನ ಕುಟುಂಬದವರನ್ನು ನೀವು ಸಂಪರ್ಕಿಸಿಲ್ಲ. ಇದು ನನ್ನ ಮೊದಲ ಕಾರಣ. ವಿನಯ್​ ಗೆಲ್ಲಬೇಕು ಎಂದು ಪೂಜೆ ಮಾಡಿಸಿ, ಲಾಕೆಟ್ ತಂದಿದ್ದೀರಿ. ಹೊರಗೆ ನಿಂತು ಸಪೋರ್ಟ್ ಮಾಡ್ತೀನಿ ಅಂದ್ರಿ. ನಂಗೆ ಹೇಗೆ ಅನಿಸಿರುತ್ತದೆ ನೀವೆ ಯೋಚಿಸಿ. ಇದು ಎರಡನೇ ಕಾರಣ. ನಾನು ಕಾರ್ತಿಕ್ ಕ್ಲೋಸ್ ಆಗಿರೋದನ್ನು ನೀವು ಜಡ್ಜ್ ಮಾಡಿದ್ರಿ. ಈ ಮೂರು ಕಾರಣಕ್ಕೆ ನನಗೆ ನಿಮ್ಮ ಜೊತೆ ಮಾತನಾಡಬೇಕು ಅನಿಸುತ್ತಿಲ್ಲ. ಹೊರ ಹೋದಮೇಲೂ ಬಹುಶಃ ನಿಮ್ಮ ಜೊತೆ ಮಾತನಾಡಲ್ಲ’ ಎಂದರು ನಮ್ರತಾ. ಈ ಬಗ್ಗೆ ಸ್ನೇಹಿತ್ ಸ್ಪಷ್ಟನೆ ನೀಡೋಕೆ ಹೋದರು. ‘ಶಟಪ್​’ ಎಂದು ಬೈದರು ನಮ್ರತಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Fri, 19 January 24

ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
Video: ಕಾರು ಗುದ್ದಿದ್ದಕ್ಕೆ ನಾಯಿಯ ರಿವೇಂಜ್ ನೋಡಿ
Video: ಕಾರು ಗುದ್ದಿದ್ದಕ್ಕೆ ನಾಯಿಯ ರಿವೇಂಜ್ ನೋಡಿ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ