‘ನೀನು ಒಂಟಿ ಮನುಷ್ಯನಾಗಿಯೇ ಉಳಿಯೋದು’; ಕಾರ್ತಿಕ್ ಬಗ್ಗೆ ವಿನಯ್ ಅಂದು ನುಡಿದಿದ್ದ ಭವಿಷ್ಯ ನಿಜವಾಯ್ತು
ತನಿಷಾ ಹಾಗೂ ಕಾರ್ತಿಕ್ ಅವರಿಂದ ಸಂಗೀತಾ ದೂರ ಆದರು. ಈಗ ತನಿಷಾ ಎಲಿಮಿನೇಟ್ ಆಗಿದ್ದು ಕಾರ್ತಿಕ್ ಏಕಾಂಗಿ ಆಗಿದ್ದಾರೆ. ವಿನಯ್ ಅಂದು ಹೇಳಿದ ಮಾತು ನಿಜವಾಯ್ತಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ತಿಕ್ ಮಹೇಶ್ (Karthik Mahesh) ಅವರು ಬಿಗ್ ಬಾಸ್ಗೆ ಬಂದ ಸಂದರ್ಭದಲ್ಲಿ ಸಂಗೀತಾ ಹಾಗೂ ತನಿಷಾ ಕುಪ್ಪಂಡ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಮೂವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯಿತು. ಇವರ ಗೆಳೆತನದ ಮೇಲೆ ಯಾರ ಕಣ್ಣು ಬಿತ್ತೋ ಏನೋ. ತನಿಷಾ (Tanisha Kuppanda) ಹಾಗೂ ಕಾರ್ತಿಕ್ ಅವರಿಂದ ಸಂಗೀತಾ ದೂರ ಆದರು. ಈಗ ತನಿಷಾ ಎಲಿಮಿನೇಟ್ ಆಗಿದ್ದು ಕಾರ್ತಿಕ್ ಏಕಾಂಗಿ ಆಗಿದ್ದಾರೆ. ವಿನಯ್ ಅಂದು ಹೇಳಿದ ಮಾತು ನಿಜವಾಯ್ತಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಸಂಗೀತಾ ಇಂದ ದೂರ..
ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಕಿರಿಕ್ ಆದ ಬಳಿಕ ಸಂಗೀತಾ ಅವರು ಕಾರ್ತಿಕ್ ಅವರಿಂದ ಸಂಪೂರ್ಣವಾಗಿ ದೂರ ಆದರು. ಕಾರ್ತಿಕ್ ಜೊತೆ ಎಲ್ಲವನ್ನೂ ಸರಿ ಮಾಡಿಕೊಳ್ಳೋಣ ಎಂದು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ, ಸಂಗೀತಾ ಅವರು ಕಾರ್ತಿಕ್ ಗೆಳೆತನವನ್ನು ಬಿಟ್ಟಿದ್ದಾರೆ. ಅನೇಕ ಸಂದರ್ಭದಲ್ಲಿ ಕಾರ್ತಿಕ್ನ ಅವರು ನಾಮಿನೇಟ್ ಮಾಡಿದ್ದಾರೆ.
ತನಿಷಾ ಔಟ್
ಇತ್ತೀಚೆಗೆ ಕಾರ್ತಿಕ್ ಹಾಗೂ ತನಿಷಾ ಮಧ್ಯೆ ಯಾವುದೂ ಸರಿ ಇರಲಿಲ್ಲ. ತನಿಷಾ ಅವರ ಹೆಸರನ್ನು ಸೂಚಿಸಿದ್ದು ಕಾರ್ತಿಕ್. ಇದಕ್ಕೆ ಅವರಿಗೆ ಬೇಸರ ಇತ್ತು. ಈ ಕಾರಣಕ್ಕೆ ತನಿಷಾ ಮುನಿಸಿಕೊಂಡಿದ್ದರು. ಇಬ್ಬರ ಮಧ್ಯೆ ಎಲ್ಲವೂ ಸರಿ ಆಯಿತು ಎಂದುಕೊಳ್ಳುವಾಗಲೇ ತನಿಷಾ ಔಟ್ ಆದರು. ಜನವರಿ 18ರ ಎಪಿಸೋಡ್ನಲ್ಲಿ ಅವರು ಔಟ್ ಆಗಿದ್ದಾರೆ.
ನಮ್ರತಾ ಕೂಡ ದೂರ
ಸಂಗೀತಾ ಜೊತೆ ಬಾಂಧವ್ಯ ಕಳಚಿದ ಬಳಿಕ ಕಾರ್ತಿಕ್ ಅವರು ನಮ್ರತಾ ಜೊತೆ ಕ್ಲೋಸ್ ಆದರು. ಇವರು ಆಗಾಗ ಫ್ಲರ್ಟ್ ಮಾಡುತ್ತಿದ್ದರು. ಇದು ಹೊರಗಿನಿಂದ ಬೇರೆ ರೀತಿ ಕಾಣುತ್ತಿದೆ ಎಂದು ಅತಿಥಿಯಾಗಿ ಬಂದ ಸ್ನೇಹಿತ್ ಹೇಳಿದ್ದರು. ಇದನ್ನು ನಮ್ರತಾ ಮನಸ್ಸಿಗೆ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಕಾರ್ತಿಕ್ನಿಂದ ಅಂತರ ಕಾಯ್ದಿಕೊಂಡಿದ್ದಾರೆ.
ಸಂತು-ಪಂತು..
ಕಾರ್ತಿಕ್ಗೆ ಯಾರು ಇಲ್ಲ ಎನ್ನುವ ವಿಚಾರ ತಿಳಿದ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರು ಕಾರ್ತಿಕ್ನ ಬೆಂಬಲಿಸಲು ಬಂದಿದ್ದಾರೆ. ಇವರದ್ದು ಪಕ್ಕಾ ರಾಜಕೀಯ. ಕಾರ್ತಿಕ್ಗೆ ಇವರಿಂದ ಸಿಕ್ಕ ಬೆಂಬಲ ನಿಜ ಎಂದುಕೊಳ್ಳುವಂತಿಲ್ಲ. ಅದರ ಹಿಂದೆ ಒಂದು ಡರ್ಟಿ ಪಾಲಿಟಿಕ್ಸ್ ಇರುತ್ತದೆ.
ಇದನ್ನೂ ಓದಿ: ‘ಯೋಗ್ಯತೆ ಇರೋದಕ್ಕೆ ಬಂದಿದ್ದು’; ವಿನಯ್ ಗೌಡ ಬಾಯಿ ಮುಚ್ಚಿಸಿದ ಪ್ರತಾಪ್
ವಿನಯ್ ಹೇಳಿದ್ದ ಮಾತು..
ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆದರೆ, ಈ ಫ್ರೆಂಡ್ಶಿಪ್ ಹೆಚ್ಚು ದಿನ ಉಳಿಯಲಿಲ್ಲ. ಜಗಳದ ಸಂದರ್ಭದಲ್ಲಿ ವಿನಯ್ ಒಂದು ಮಾತು ಹೇಳಿದ್ದರು. ಅದು ನಿಜವಾಯಿತೇ ಎನ್ನುವ ಅನುಮಾನ ಮೂಡಿದೆ. ‘ಜೀವನದಲ್ಲಿ ನೀನು ಒಬ್ಬ ಒಂಟಿ ಮನುಷ್ಯನಾಗಿಯೇ ಉಳಿಯೋದು’ ಎಂದು ವಿನಯ್ ಅಂದು ಹೇಳಿದ್ದರು. ಆ ಮಾತು ಈಗ ನಿಜವಾಗಿದೆ.
ಫಿನಾಲೆ..
ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಸದ್ಯ ಏಳು ಮಂದಿ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ನಮ್ರತಾ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್ ಮಧ್ಯೆ ಸ್ಪರ್ಧೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ