ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದಿದ್ದು 10 ಮಂದಿ; ಸ್ಪರ್ಧಿಗಳ ಬಲಾಬಲದ ಬಗ್ಗೆ ಇಲ್ಲಿದೆ ವಿವರ..

| Updated By: ರಾಜೇಶ್ ದುಗ್ಗುಮನೆ

Updated on: Dec 26, 2023 | 2:33 PM

ಬಿಗ್ ಬಾಸ್ ಮನೆಯಲ್ಲಿ 10 ಸ್ಪರ್ಧಿಗಳಿದ್ದಾರೆ. ಇವರಲ್ಲಿ ಐವರು ಮಾತ್ರ ಟಾಪ್ 5ರಲ್ಲಿ ಇರಲಿದ್ದಾರೆ. ಯಾರ ಪ್ಲಸ್ ಏನು, ಮೈನಸ್ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದಿದ್ದು 10 ಮಂದಿ; ಸ್ಪರ್ಧಿಗಳ ಬಲಾಬಲದ ಬಗ್ಗೆ ಇಲ್ಲಿದೆ ವಿವರ..
ಬಿಗ್ ಬಾಸ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ 80ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಡಿಸೆಂಬರ್ 26) 80ನೇ ಎಪಿಸೋಡ್ ಪ್ರಸಾರ ಆಗಲಿದೆ. ಇನ್ನು 20 ದಿನದಲ್ಲಿ ಬಿಗ್ ಬಾಸ್ (Bigg Boss) ಫಿನಾಲೆ ನಡೆಯಲಿದೆ. ಈ ಸೀಸನ್​ನಲ್ಲಿ ಉತ್ತಮ ಟಿಆರ್​ಪಿ ಇರುವುದರಿಂದ ಮತ್ತೊಂದಷ್ಟು ದಿನ ಮುಂದಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎನ್ನುವ ಮಾತೂ ಇದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 10 ಸ್ಪರ್ಧಿಗಳಿದ್ದಾರೆ. ಇವರಲ್ಲಿ ಐವರು ಮಾತ್ರ ಟಾಪ್ 5ರಲ್ಲಿ ಇರಲಿದ್ದಾರೆ. ಯಾರ ಪ್ಲಸ್ ಏನು, ಮೈನಸ್ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ವಿನಯ್ ಗೌಡ

ವಿನಯ್ ಗೌಡ ಅವರು ಬಿಗ್ ಬಾಸ್​ಗೆ ಬಂದಾಗ ಸಾಕಷ್ಟು ಅಗ್ರೆಸ್ಸಿವ್ ಆಗಿ ಆಡಿದ್ದರು. ಫಿನಾಲೆಯಲ್ಲಿ ಸುದೀಪ್ ಪಕ್ಕ ನಿಲ್ಲುವ ಸ್ಪರ್ಧಿಯಲ್ಲಿ ವಿನಯ್ ಕೂಡ ಒಬ್ಬರು ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ, ದಿನ ಕಳೆದಂತೆ ಉಳಿದ ಸ್ಪರ್ಧಿಗಳು ತಮ್ಮ ಆಟವನ್ನು ತೋರಿಸಿದರು. ಇದರ ಜೊತೆ ವಿನಯ್ ಕೆಲವು ವಿವಾದಾತ್ಮಕ ಮಾತುಗಳಿಂದ ಟೀಕೆಗೆ ಒಳಗಾದರು. ಇದು ಅವರಿಗೆ ಹಿನ್ನಡೆ ಆಯಿತು. ಈಗ ತಾವು ಅಗ್ರೆಸ್ ಆಗಿ ಆಡುವುದಿಲ್ಲ ಎಂದಿದ್ದಾರೆ. ಎಲ್ಲರ ಜೊತೆ ಒಳ್ಳೆಯ ರ್ಯಾಪೋ ಬೆಳೆಸಿಕೊಂಡರೆ ಫಿನಾಲೆ ತಲುಪಲು ಅವರಿಗೆ ಅವಕಾಶ ಇದೆ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಆರಂಭದಿಂದಲೂ ಒಂದೇ ರೀತಿಯ ಫಾರ್ಮ್ ಕಾಯ್ದುಕೊಂಡು ಬರುತ್ತಿದ್ದಾರೆ. ಅವರು ಆಗಾಗ ಡಲ್ ಆಗುತ್ತಾರೆ. ತಕ್ಷಣಕ್ಕೆ ಮತ್ತೆ ಚೇತರಿಕೆ ಕಾಣುತ್ತಾರೆ. ಸಂಗೀತಾ ಜೊತೆ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ ಎನ್ನುವ ಆರೋಪ ಅವರ ಮೇಲಿತ್ತು. ಆದರೆ, ಸಂಗೀತಾ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಉತ್ತಮ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ.

ಡ್ರೋನ್ ಪ್ರತಾಪ್

ಬಿಗ್ ಬಾಸ್​ಗೆ ಹೋಗುವುದಕ್ಕೂ ಮುನ್ನ ಡ್ರೋನ್ ಪ್ರತಾಪ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಯಿತು. ಆದರೆ, ಬಿಗ್ ಬಾಸ್​ಗೆ ಹೋದ ಬಳಿಕ ಅವರ ಗ್ರಾಫ್ ಬದಲಾಯಿತು. ಅವರು ಎಲ್ಲರಿಂದ ಮೆಚ್ಚುಗೆ ಪಡೆದರು. ಜನರಿಂದ ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಕಿಚ್ಚ ಕೂಡ ಪ್ರತಾಪ್​ನ ಹುರಿದುಂಬಿಸಿದರು. ಹೀಗಾಗಿ, ಅವರು ಆಟದ ಶೈಲಿ ಬದಲಿಸಿಕೊಂಡರು. ಅವರು ಆಗಾಗ ಡಲ್ ಆಗುತ್ತಾರೆ. ಎಲ್ಲರ ಜೊತೆಯೂ ಬೆರೆಯುವುದಿಲ್ಲ. ಈ ಗುಣ ಬದಲಾಗಬೇಕಿದೆ.

ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಅವರು ಆರಂಭದಲ್ಲಿ ಉತ್ತಮವಾಗಿ ಆಟ ಪ್ರದರ್ಶಿಸಿದ್ದರು. ಆ ಬಳಿಕ ಡಲ್ ಆದರು. ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದರು. ಆದರೆ, ನಂತರ ನಿರ್ಧಾರ ಬದಲಿಸಿದರು. ಕಣ್ಣಿಗೆ ಹಾನಿ ಆದಾಗಲೂ ಅವರು ಹೋರಾಡಿದರು. ಇಡೀ ಮನೆ ತಮ್ಮ ವಿರುದ್ಧ ಇದೆ ಎಂದು ಅವರು ಆಗಾಗ ಹೇಳುತ್ತಲೇ ಇರುತ್ತಾರೆ. ಈಗ ಸಂಗೀತಾ ಶೃಂಗೇರಿ ಫಿನಾಲೇ ರೇಸ್​ಗೆ ತಲುಪುವ ಎಲ್ಲಾ ಲಕ್ಷಣ ಇದೆ.

ನಮ್ರತಾ ಗೌಡ

ನಮ್ರತಾ ಗೌಡ ಅವರು ಆರಂಭದಲ್ಲಿ ವಿನಯ್ ಅವರ ಚಮಚ ಎಂದು ಕುಖ್ಯಾತಿ ಪಡೆದಿದ್ದರು. ಯಾವಾಗ ವಿನಯ್ ನೆರಳಿನಿಂದ ಹೊರ ಬಂದಿದ್ದಾರೋ ಆಗೆಲ್ಲ ಅವರಿಗೆ ಒಳಿತೇ ಆಗಿದೆ. ಅವರಿಗೆ ಉತ್ತಮ, ಕಿಚ್ಚನ ಚಪ್ಪಾಳೆ ಸಿಕ್ಕಿದ್ದರಿಂದ ಚೈತನ್ಯ ಹೆಚ್ಚಿತು. ಈ ವಾರ ಕ್ಯಾಪ್ಟನ್ ಆಗಿ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಅವರೂ ಫಿನಾಲೆ ತಲುಪಿದರೂ ಅಚ್ಚರಿ ಏನಿಲ್ಲ.

ವರ್ತೂರು ಸಂತೋಷ್

ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರು ಅರೆಸ್ಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದ ಅವರು ಮರಳಿ ದೊಡ್ಮನೆಗೆ ಬಂದರು. ಆ ಬಳಿಕ ಮತ್ತೆ ಹೊರ ಹೋಗುವ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು. ತಾಯಿಯನ್ನು ಕರೆಸಿ ಅವರ ಮನ ಒಲಿಸಲಾಯಿತು. ಈಗ ಅವರು ಫಿನಾಲೆ ರೇಸ್​ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಆಟದ ಶೈಲಿ ಬದಲಾಗಿದೆ.

ತನಿಷಾ ಕುಪ್ಪಂಡ

ಮೊದಲಿಗೆ ಹೋಲಿಕೆ ಮಾಡಿದರೆ ತನಿಷಾ ಅವರ ಅಗ್ರೆಷನ್ ಹಾಗೂ ಉತ್ಸಾಹ ಈಗ ಕಡಿಮೆ ಆದಂತೆ ಕಾಣುತ್ತಿದೆ. ತನಿಷಾ ಅವರ ಗ್ರಾಫ್ ಕೆಳಗೆ ಇಳಿದಂತೆ ಭಾಸವಾಗುತ್ತಿದೆ. ಮಾತನಾಡಿ ಕೆಟ್ಟವನಾಗಬಾರದು ಎಂದು ಅವರು ನಿರ್ಧರಿಸಿದಂತೆ ಇದೆ. ಆದರೆ, ಇದನ್ನು ಬಿಟ್ಟು ಅವರು ಮತ್ತೆ ಮೊದಲಿನ ಆಟ ತೋರಿಸಬೇಕಿದೆ.

ಮೈಕಲ್ ಅಜಯ್

ನೈಜೀರಿಯಾ ಮೂಲದ ಮೈಕಲ್ ಅವರಿಗೆ ಕರ್ನಾಟಕದ ಕನೆಕ್ಷನ್ ಇದೆ. ಅವರ ತಾಯಿ ಕರ್ನಾಟಕದವರು. ಹೀಗಾಗಿ, ಮೈಕಲ್ ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಾರೆ. ಬಿಗ್ ಬಾಸ್ ಮನೆಗೆ ಬಂದ ಬಳಿಕ ಅವರು ಕನ್ನಡ ಕಲಿಯಲು ಸಾಕಷ್ಟು ಶ್ರಮ ಹಾಕಿದ್ದಾರೆ. ಇದರ ಜೊತೆ ಟಾಸ್ಕ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ, ಇದರ ಜೊತೆ ಅವರಿಗೆ ಅಹಂ ಹೆಚ್ಚಿದೆ. ಇದನ್ನು ಕಡಿಮೆ ಮಾಡಿಕೊಂಡರೆ ಅವರು ಫಿನಾಲೆ ತಲುಪಬಹುದು.

ತುಕಾಲಿ ಸಂತೋಷ್

ಹಾಸ್ಯದ ಮೂಲಕ ತುಕಾಲಿ ಸಂತೋಷ್ ಅವರು ಹೆಸರು ಮಾಡಿದವರು. ಆದರೆ, ಬಿಗ್ ಬಾಸ್​ಗೆ ಬಂದ ಆರಂಭದಲ್ಲಿ ಅವರ ಹಾಸ್ಯ ಎಲ್ಲರಿಗೂ ನೋವು ಉಂಟು ಮಾಡಿತ್ತು. ಆ ಬಳಿಕ ಅವರು ತಮ್ಮ ಆಟ ಬದಲಿಸಿಕೊಂಡರು. ಈಗ ಹಾಸ್ಯದ ಮೂಲಕ ತುಕಾಲಿ ಸಂತೋಷ್ ಅವರು ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಫಿನಾಲೆಗೂ ಮೊದಲು ಫ್ಯಾಮಿಲಿ ವೀಕ್; ಬಿಗ್ ಬಾಸ್​ಗೆ ಬಂದ ಸ್ಪರ್ಧಿಗಳ ಕುಟುಂಬದವರು

ಸಿರಿ

ಸಿರಿ ಅವರು ಸೈಲೆಂಟ್ ಆಗಿರಲು ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಆಟ ಎಲ್ಲರಿಗೂ ಇಷ್ಟ ಆಗುತ್ತಿದೆ. ಅವರು ಬಿಗ್ ಬಾಸ್ ಮನೆಯಲ್ಲಿ 80 ದಿನ ಕಳೆದಿದ್ದಾರೆ. ಅವರು ಆಟಕ್ಕೆ ವೇಗ ನೀಡಿದರೆ ಸಹಕಾರಿ ಆಗಲಿದೆ. ಅವರು ಎಲಿಮಿನೇಟ್ ಆಗುತ್ತಾರೆ ಎಂದು ವೀಕ್ಷಕರು ಭಾವಿಸಿದಾಗಲೆಲ್ಲ ಬಚಾವ್ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:15 pm, Tue, 26 December 23