ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ; ದಿನಕ್ಕೆ 50 ಲಕ್ಷ ಸಂಭಾವನೆ ಕೇಳಿದ ಸ್ಪರ್ಧಿ

| Updated By: ರಾಜೇಶ್ ದುಗ್ಗುಮನೆ

Updated on: Jul 31, 2021 | 4:56 PM

ನಿತ್ಯ ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ ಮಾಡಬೆಕು ಎಂದು ವಾಹಿನಿಯವರು ವಿವೇಕ್​ಗೆ ಕೇಳಿದ್ದರಂತೆ. ಇದಕ್ಕೆ ವಿವೇಕ್​ ಒಪ್ಪಿದ್ದಾರೆ. ಪ್ರತಿಯಾಗಿ 50 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ; ದಿನಕ್ಕೆ 50 ಲಕ್ಷ ಸಂಭಾವನೆ ಕೇಳಿದ ಸ್ಪರ್ಧಿ
ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ; ದಿನಕ್ಕೆ 50 ಲಕ್ಷ ಸಂಭಾವನೆ ಕೇಳಿದ ಸ್ಪರ್ಧಿ
Follow us on

ಹಿಂದಿಯವರು ಬಿಗ್​ ಬಾಸ್​ ಒಟಿಟಿಯನ್ನು ಪರಿಚಯಿಸುತ್ತಿದ್ದಾರೆ. ಯಾರ್ಯಾರು ಬಿಗ್​ ಬಾಸ್​ ಮನೆ ಪ್ರವೇಶಿಸಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ಆರು ವಾರಗಳ ಕಾಲ ಒಟಿಟಿಯಲ್ಲಿ ಮಾತ್ರ ಪ್ರಸಾರವಾಗಲಿದೆ. ಈ ಮಧ್ಯೆ ಯೋಗ ಗುರುಗಳೊಬ್ಬರಿಗೆ ಬಿಗ್​ ಬಾಸ್ ಮನೆ ಪ್ರವೇಶಿಸಲು ಆಫರ್​ ನೀಡಲಾಗಿತ್ತು. ಒಂದು ದಿನಕ್ಕೆ ಅವರು ಕೇಳಿರುವ ಸಂಭಾವನೆ ಬರೋಬ್ಬರಿ 50 ಲಕ್ಷ ರೂಪಾಯಿ!

ಮಾಜಿ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಬೆತ್ತಲೆ ಯೋಗ ಗುರು ವಿವೇಕ್​ ಮಿಶ್ರಾಗೆ ಈ ಬಾರಿ ಬಿಗ್​ ಬಾಸ್ ಪ್ರವೇಶ ಮಾಡಲು ಆಫರ್ ನೀಡಲಾಗಿತ್ತು. ನಿತ್ಯ ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ ಮಾಡಬೇಕು ಎಂದು ವಾಹಿನಿಯವರು ವಿವೇಕ್​ಗೆ ಕೇಳಿದ್ದರಂತೆ. ಇದಕ್ಕೆ ವಿವೇಕ್​ ಒಪ್ಪಿದ್ದಾರೆ. ಪ್ರತಿಯಾಗಿ 50 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ.

ಟಿವಿಯಲ್ಲಿ ಪ್ರಸಾರ ಮಾಡುವಾಗ ಕೆಲ ಕಟ್ಟುಪಾಡುಗಳು ಇರುತ್ತವೆ. ಆದರೆ, ಒಟಿಟಿಯಲ್ಲಿ ಈ ಕಟ್ಟುಪಾಡುಗಳು ಇರುವುದಿಲ್ಲ. ಈ ಕಾರಣಕ್ಕೆ ವಿವೇಕ್​ ಅವರನ್ನು ಅಪ್ರೋಚ್​ ಮಾಡಲಾಗಿತ್ತು ಎನ್ನಲಾಗಿದೆ.  ‘ಬಿಗ್​ ಬಾಸ್​ಗೆ ಅರ್ಥವೇ ಇಲ್ಲ. ನಾನೇಕೆ ರಿಯಾಲಿಟಿ ಶೋನಲ್ಲಿ ಯೋಗ ಮಾಡಬೇಕು? ಬೆತ್ತಲೆ ಯೋಗ ತುಂಬಾನೇ ದುಬಾರಿ. ಈ ಕಾರಣಕ್ಕೆ ನಾನು 50 ಲಕ್ಷ ರೂಪಾಯಿ ಕೇಳಿದೆ. ಇದರಲ್ಲಿ ತಪ್ಪೇನಿದೆ’ ಎಂದು ವಿವೇಕ್​ ಪ್ರಶ್ನೆ ಮಾಡಿದ್ದಾರೆ. ಇದು ತುಂಬಾ ದುಬಾರಿ ಆಯಿತು ಎನ್ನುವ ಕಾರಣಕ್ಕೆ ವಾಹಿನಿಯವರು ವಿವೇಕ್​ ಅವರನ್ನು ಸೇರ್ಪಡೆ ಮಾಡಿಕೊಂಡಿಲ್ಲ.

‘ಹಿಂದಿ ಬಿಗ್​ ಬಾಸ್​ ಸೀಸನ್​ 15’ ಆಗಸ್ಟ್​ 8ರಿಂದ ಆರಂಭಗೊಳ್ಳುತ್ತಿದೆ. ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ, ಬಿಗ್​ ಬಾಸ್​ ಒಟಿಟಿಯನ್ನು ವೂಟ್​ ಪರಿಚಯಿಸಿದೆ. ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್​ ಆಗಲಿದೆ. ಒಟಿಟಿ ಶೋಅನ್ನು ನಡೆಸಿಕೊಡೋಕೆ ಖ್ಯಾತ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್ ಆಗಮಿಸಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಶೋ ಅನ್ನು ಸಲ್ಮಾನ್ ಖಾನ್​ ನಡೆಸಿಕೊಡಲಿದ್ದಾರೆ. ಸ್ಪರ್ಧಿಗಳು ಯಾರ್ಯಾರು ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿರುವ ಎಂಟು ಸ್ಪರ್ಧಿಗಳ ಪೈಕಿ ಹೊರ ಹೋಗುವ ಆ ಮೂವರು ಯಾರು?

ದೊಡ್ಮನೆಯಲ್ಲಿ ಅರವಿಂದ್ ಮಧ್ಯ ಬೆರಳು ತೋರಿಸಿದ ವಿಡಿಯೋ ವೈರಲ್​; ಬಿಗ್​ ಬಾಸ್ ತಂಡದಿಂದ ಸ್ಪಷ್ಟನೆ

 

Published On - 4:45 pm, Sat, 31 July 21