ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ

ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟರಾಜ್‌ಗೆ ಸಿಕ್ಕ ಕಾರ್ ಮತ್ತು 50 ಲಕ್ಷ ಬಹುಮಾನದ ಹಣ ಇಷ್ಟು ಬೇಗ ಕೈ ಸೇರುವುದಿಲ್ಲ. ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್ ಅವರಿಗೆ ಕಾರು ಸಿಗಲು 7-8 ತಿಂಗಳು ಬೇಕಾಯಿತು. ಗಿಲ್ಲಿಗೆ ಕಾರು ಸಿಗಲು ಎಷ್ಟು ತಿಂಗಳು ಬೇಕು ಎಂಬ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಟನಿಗೆ ಬಿಗ್ ಬಾಸ್​ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ
ಬಿಗ್ ಬಾಸ್

Updated on: Jan 26, 2026 | 7:01 AM

‘ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss) ಗಿಲ್ಲಿ ನಟ ಅವರು ಗೆದ್ದು ಒಂದು ವಾರ ಕಳೆದಿದೆ. ಆದಾಗ್ಯೂ ಅವರ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಿಂತಿಲ್ಲ. ಅನೇಕರು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ವಿವಿಧ ಕಡೆಗಳಲ್ಲಿ ತೆರಳಿ ಗಿಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಅವರಿಗೆ ಈ ಬಾರಿ ಬಿಗ್ ಬಾಸ್ ವಿನ್ ಆಗಿದ್ದಕ್ಕೆ ಕಾರ್ ಕೊಡೋದಾಗಿ ಸುದೀಪ್ ಘೋಷಿಸಿದರು. ಆದರೆ, ಅದು ಗಿಲ್ಲಿಗೆ ಇಷ್ಟು ಬೇಗ ಕೈ ಸೇರೋದಿಲ್ಲ.

ಈ ಬಾರಿಯ ಬಿಗ್ ಬಾಸ್ ಅಲ್ಲಿ ಗಿಲ್ಲಿ ನಟ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಯಿತು. ಈ ಬಳಗವನ್ನು ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಕುತೂಹಲ ಮೂಡಿದೆ. ದೊಡ್ಡ ವೋಟ್ ಅಂತರದಲ್ಲಿ ಗಿಲ್ಲಿ ಗೆದ್ದಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಮಾರುತಿ ಸುಜುಕಿ ಕಡೆಯಿಂದ ಗಿಲ್ಲಿಗೆ ವಿಕ್ಟೋರಿಸ್ ಕಾರು ಸಿಕ್ಕಿದೆ. ಆದರೆ, ಅದು ಸದ್ಯಕ್ಕೆ ಅವರ ಕೈ ಸೇರೋದಿಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್​​ಗೂ ಮಾರುತಿ ಸುಜುಕಿ ಕಡೆಯಿಂದ ಬ್ರೇಜಾ ಕಾರು ಸಿಕ್ಕಿತ್ತು. ವೇದಿಕೆ ಮೇಲೆ ಅವರಿಗೆ ಕೀ ಮಾದರಿಯನ್ನು ಕೊಡಲಾಗಿತ್ತು. 2024ರ ಅಂತ್ಯಕ್ಕೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಗೊಂಡಿತು. ಅವರಿಗೆ ಕಾರು ಸಿಕ್ಕಿದ್ದು ಅದೇ ವರ್ಷ ಆಗಸ್ಟ್​ ತಿಂಗಳಲ್ಲಿ. ಆ ಸಂದರ್ಭದಲ್ಲಿ ಕಾರ್ತಿಕ್ ಅವರು ವಿಡಿಯೋ ಹಂಚಿಕೊಂಡಿದ್ದರು. ಅಂದರೆ ಕಾರು ಸಿಗಲು ಅವರಿಗೆ ಸುಮಾರು 7-8 ತಿಂಗಳು ಬೇಕಾಯಿತು.

ಕಾರ್ತಿಕ್ ಮಹೇಶ್ ಅವರು ವಿವರಿಸಿದಂತೆ ‘ಬಿಗ್ ಬಾಸ್​’ ಕಾರು ಉಡುಗೊರೆ ಪ್ರಕ್ರಿಯೆ ತುಂಬಾನೇ ಸುದೀರ್ಘವಾದುದ್ದು. ಹೀಗಾಗಿ, ಕಾರು ಸಿಗೋದು ತಡವಾಗುತ್ತದೆ. ಗಿಲ್ಲಿಗೂ ಜುಲೈ ಅಥವಾ ಆಗಸ್ಟ್​ ತಿಂಗಳಲ್ಲಿ ಕಾರು ಸಿಗಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದ ಏಳು ತಿಂಗಳ ಬಳಿಕ ಕಾರ್ತಿಕ್ ಮಹೇಶ್​ಗೆ ಸಿಕ್ತು ಕಾರು; ಇದರ ವಿಶೇಷತೆಗಳೇನು?

ಗಿಲ್ಲಿಗೆ ಸಿಗೋ 50 ಲಕ್ಷ ರೂಪಾಯಿ ಕೂಡ ತಕ್ಷಣಕ್ಕೆ ಸಿಗೋದಲ್ಲ. ಅದು ಕೂಡ ಖಾತೆಗೆ ಬೀಳಲು ಸ್ವಲ್ಪ ಸಮಯ ಬೇಕು. 50 ಲಕ್ಷದಲ್ಲಿ ತೆರಿಗೆ ಕಟ್ ಆಗಿ ಅವರಿಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಮಾತ್ರ. ಸುದೀಪ್ ಕಡೆಯಿಂದ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.