
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಈ ವಾರ ಎಲ್ಲರನ್ನೂ ನಾಮಿನೇಟ್ ಮಾಡೋದಾಗಿ ಸುದೀಪ್ ಅವರು ಕಳೆದ ವಾರ ಘೋಷಣೆ ಮಾಡಿದ್ದನ್ನು ನೀವು ನೋಡಿರಬಹುದು. ಎಲ್ಲರೂ ನಾಮಿನೇಟ್ ಆದರೆ ಅದರ ಪ್ರಕ್ರಿಯೆ ನಡೆಸೋದು ಕಷ್ಟ ಆಗಬಹುದು. ವೋಟ್ ಹಂಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಬಿಗ್ ಬಾಸ್ ಒಂದು ಅವಕಾಶ ನೀಡಿದರು. ಈ ವೇಳೆ ಕೆಲವರು ಸೇವ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಪತ್ರದ ಚಟುವಟಿಕೆ ನಡೆಸಲಾಗಿದೆ. ಅಂದರೆ, ಮನೆಯವರಿಂದ ಪತ್ರ ಬರುತ್ತದೆ. ಈ ಪತ್ರವನ್ನು ವಿವಿಧ ಚಟುವಟಿಕೆ ಮೂಲಕ ಒಬ್ಬರಿಗೆ ಸಿಗುವಂತೆ ಮಾಡಲಾಗುತ್ತದೆ. ಈ ವೇಳೆ ಪತ್ರ ಸಿಕ್ಕವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ. ಪತ್ರ ಸಿಗದೆ ಇದ್ದವರು ನಾಮಿನೇಟ್ ಆಗುತ್ತಾರೆ.
ಬಿಗ್ ಬಾಸ್ನಲ್ಲಿ ಮೊದಲು ಅಭಿಷೇಕ್ ಹಾಗು ಧನುಷ್ ಮನೆಯ ಪತ್ರವನ್ನು ತರಿಸಲಾಯಿತು. ಧನುಷ್ ಕ್ಯಾಪ್ಟನ್ ಆದರೂ ನಾಮಿನೇಟ್ ಆಗಿದ್ದರು. ಅವರು ನಾಮಿನೇಷನ್ನಿಂದ ಬಚಾವ್ ಆಗಲು ಪ್ರಯತ್ನಿಸಿಲ್ಲ. ಬದಲಿಗೆ ಗೆಳೆಯ ಅಭಿಷೇಕ್ಗೆ ಪತ್ರವನ್ನು ನೀಡಿದರು. ಇದರಿಂದ ಅಭಿ ಅವರು ನಾಮಿನೇಷನ್ನಿಂದ ಬಚಾವ್ ಆದರು. ಇತ್ತ ಧನುಷ್ ಅವರು ನಾಮಿನೇಟ್ ಆದರು. ಈಗ ಎಲ್ಲಾ ಪ್ರಕ್ರಿಯೆ ಮುಗಿದಿದೆ.
ಇದರ ಅನುಸಾರ ಅಭಿ, ರಿಷಾ, ಮಾಳು, ರಘು, ಕಾವ್ಯಾ ಹಾಗೂ ಜಾನ್ವಿ ಅವರು ಪತ್ರ ಪಡೆದು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಅತ್ತ, ಧನು, ಸೂರಜ್, ಸ್ಪಂದನಾ, ಧ್ರುವ್, ಚಂದ್ರಪ್ರಭ, ಕಾಕ್ರೋಚ್ ಸುಧಿ, ರಕ್ಷಿತಾ, ಗಿಲ್ಲಿ ಹಾಗೂ ಅಶ್ವಿನಿ ಗೌಡ ಪತ್ರ ಸಿಗದೆ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಚಂದ್ರಪ್ರಭ ಹಾಗೂ ಸ್ಪಂದನಾ ಅವರು ಇನ್ನಷ್ಟು ಎಫರ್ಟ್ ಹಾಕಬೇಕಿದೆ. ಇಲ್ಲವಾದಲ್ಲಿ ಅವರು ಮನೆಯಿಂದ ಹೊರಗೋಗಬೇಕಾದ ಪರಿಸ್ಥಿತಿ ಬರಬಹುದು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿರೋ ಕಾವ್ಯಾ ಶೈವ ಅವರ ಫೇವರಿಟ್ ಹೀರೋ ಯಾರು ಗೊತ್ತಾ?
ಈ ವಾರದ ವೀಕೆಂಡ್ನಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುವ ಸಾಧ್ಯತೆ ಇದೆ. ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾನ ಮನೆಯಿಂದ ಕಳಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.