ಗಿಲ್ಲಿ ಇಷ್ಟ ಆಗೋದೆ ಇದಕ್ಕೆ; ಪತ್ರ ಸಿಗದೆ ಅಳುತ್ತಿದ್ದ ಸೂರಜ್ ಮುಖದಲ್ಲಿ ನಗು ತರಿಸಿದ ನಟ
ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ನವೆಂಬರ್ 5ರ ಎಪಿಸೋಡ್ನಲ್ಲಿ ಒಂದು ಪ್ರಮುಖ ಘಟನೆ ನಡೆದಿದೆ. ಆ ವಿಷಯ ಸಾಕಷ್ಟು ಗಮನ ಸೆಳೆಯುವ ರೀತಿ ಇತ್ತು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಇಡೀ ಮನೆಯಲ್ಲಿ ಲವಲವಿಕೆಯಿಂದ ಓಡಾಡುತ್ತಾ, ಎಲ್ಲರನ್ನೂ ನಗಿಸುತ್ತಾ, ಕೌಂಟರ್ ಕೊಡೋ ಜಾಗದಲ್ಲಿ ಕೌಂಟರ್ ಕೊಡುತ್ತಾ ಸಾಗುತ್ತಿದ್ದಾರೆ ಅವರು. ಗಿಲ್ಲಿ ನಟ ಅವರು ಇಷ್ಟ ಆಗಲು ಹಲವು ಕಾರಣಗಳಿವೆ. ನವೆಂಬರ್ 5ರ ಎಪಿಸೋಡ್ನಲ್ಲಿ ನಡೆದ ಒಂದು ಘಟನೆ ಗಮನ ಸೆಳೆಯಿತು. ಕಣ್ಣೀರು ಹಾಕುತ್ತಿದ್ದ ಸೂರಜ್ ಮುಖದಲ್ಲಿ ಅವರು ನಗು ತರಿಸಿದರು.
ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ನವೆಂಬರ್ 5ರ ಎಪಿಸೋಡ್ನಲ್ಲಿ ಒಂದು ಪ್ರಮುಖ ಘಟನೆ ನಡೆದಿದೆ. ಆ ವಿಷಯ ಸಾಕಷ್ಟು ಗಮನ ಸೆಳೆಯುವ ರೀತಿ ಇತ್ತು.
View this post on Instagram
ಸೂರಜ್ಗೆ ಮನೆಯಿಂದ ಬಂದ ಪತ್ರವನ್ನು ರಿಷಾ ಅವರು ಹರಿದು ಹಾಕಿದರು. ಈ ಮೂಲಕ ತಮ್ಮ ಪತ್ರವನ್ನು ಅವರು ಪಡೆದುಕೊಂಡರು. ಮನೆಯಿಂದ ಬಂದ ಪತ್ರ ಸಿಗದೆ ಅವರು ಸಾಕಷ್ಟು ಒದ್ದಾಡಲು ಆರಂಭಿಸಿದರು. ಅವರಿಗೆ ಒಂದು ಹಂತದಲ್ಲಿ ಕಣ್ಣೀರೇ ಬಂದಿತು ಎಂದರೂ ತಪ್ಪಾಗಲಾರದು. ಆಗ ಚಾರ್ಜ್ ತಗೊಂಡಿದ್ದು ಗಿಲ್ಲಿ ನಟ.
ಇದನ್ನೂ ಓದಿ: ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಖಾಲಿ ಪತ್ರವನ್ನು ಹಿಡಿದು ಓದಿದ ಗಿಲ್ಲಿ, ‘ಯಾವುದೋ ಹುಡುಗಿನ ಹೋಗಿ ತಬ್ಬಿಕೊಂಡೆ. ಅದನ್ನು ನಾನು ನೋಡಿದೆ. ಸಾಕಷ್ಟು ಟ್ರೋಲ್ ಆಗ್ತಿದೆ. ಅದು ಬೇಡ. ಆ ಹುಡುಗಿ ಸುಮ್ಮ ಸುಮ್ಮನೆ ಜಗಳಕ್ಕೆ ಬಿದ್ದು ಬಿಡುತ್ತಾಳೆ. ಹಾಗಾಗಿ ಅವಳು ನಮಗೆ ಸೆಟ್ಟಾಗೋಲ್ಲ. ಅದನ್ನು ಇಲ್ಲಿಗೆ ಕಟ್ ಮಾಡಿಬಿಡು. ಇಷ್ಟು ಹೇಳೋಕೆ ಇಷ್ಟಪಡುತ್ತೇನೆ. ನಿನ್ನೆಯಿಂದ ಓಪನ್ ಅಪ್ ಆಗಿದೀಯಾ. ಈ ಲೆಟರ್ ಮಿಷನ್ಗೆ ಹೋಗಿ ಹರಿದರೂ ತೊಂದರೆ ಇಲ್ಲ. ನೀನು ಕೊಟ್ಟ ಕೌಂಟರ್ ಚೆನ್ನಾಗಿತ್ತು. ಅವಳಿಗೆ ಟೈಮ್ ಬಂದಿದೆ. ನಿನ್ನ ಟೈಮ್ ಬಂದಾಗ ಅವಳಿಗೆ ಕೌಂಟರ್ ಕೊಡು’ ಎಂದು ಗಿಲ್ಲಿ ಲೆಟರ್ ಓದಿದರು. ಇದನ್ನು ಕೇಳಿ ಸೂರಜ್ಗೆ ತುಂಬಾನೇ ಖುಷಿ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Thu, 6 November 25



