13 ಸ್ಪರ್ಧಿಗಳು, ಒಂದೇ ಸಿಂಹಾಸನ: ಫಿನಾಲೆ ತಲುಪುವ ಆ ಮೊದಲ ಸ್ಪರ್ಧಿ ಯಾರು?

‘ಸರಿಗಮಪ’ ರಿಯಾಲಿಟಿ ಶೋ ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ವೀಕ್ಷಕರ ಕುತೂಹಲ ಮತ್ತು ಕಾತರ ಹೆಚ್ಚಾಗಿದೆ. ಅದರ ಜೊತೆಗೆ ಸ್ಪರ್ಧಿಗಳ ನಡುವಿನ ಪೈಪೋಟಿ ಕೂಡ ಕಠಿಣ ಆಗುತ್ತಿದೆ. ಹಾಗಾದರೆ ಯಾರಿಗೆ ಸಿಗಲಿದೆ 'ಟಿಕೆಟ್ ಟು ಫಿನಾಲೆ'? ಈ ಕುತೂಹಲಕ್ಕೆ ಉತ್ತರ ಸಿಗಬೇಕಿದ್ದರೆ ವೀಕೆಂಡ್ ಸಂಚಿಕೆಗಳನ್ನು ನೋಡಬೇಕು.

13 ಸ್ಪರ್ಧಿಗಳು, ಒಂದೇ ಸಿಂಹಾಸನ: ಫಿನಾಲೆ ತಲುಪುವ ಆ ಮೊದಲ ಸ್ಪರ್ಧಿ ಯಾರು?
Saregamapa

Updated on: May 15, 2025 | 6:03 PM

ಕನ್ನಡದ ಕಿರುತೆರೆಯಲ್ಲಿ ‘ಸರಿಗಮಪ’ (SaReGaMaPa) ಸಿಂಗಿಂಗ್ ರಿಯಾಲಿಟಿ ಶೋ ವಿಶೇಷವಾಗಿ ಗಮನ ಸೆಳೆದಿದೆ. 6 ವರ್ಷದಿಂದ 60 ವರುಷದ ತನಕ ಎಲ್ಲ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿರುವ ಈ ಸೀಸನ್ ವಿಭಿನ್ನ ಕಾನ್ಸೆಪ್ಟ್​ನಿಂದ ಮತ್ತಷ್ಟು ಇಂಟೆರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಅಷ್ಟೇ ಅಲ್ಲದೇ, ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಮಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ (Arjun Janya), ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್ ಮತ್ತು ಜನಪ್ರಿಯ ನಿರೂಪಕಿ ಅನುಶ್ರೀ ಅವರು ಈ ಆವೃತ್ತಿಯ ಹೈಲೈಟ್ ಆಗಿದ್ದಾರೆ.

ಇನ್ನೇನು ‘ಸರಿಗಮಪ’ ಶೋ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಜನರ ಕುತೂಹಲ, ಕಾತರ ಹೆಚ್ಚಾಗಿದೆ. ಅದರ ಜೊತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣ ಆಗುತ್ತಿದೆ. ಈ ವಾರ ನಡೆಯಲಿರುವ ‘ಟಿಕೆಟ್ ಟು ಫಿನಾಲೆ’ಯಲ್ಲಿ 13 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಬಾಳು ಬೆಳಗುಂದಿ, ದ್ಯಾಮೇಶ, ಭೂಮಿಕಾ, ಲಹರಿ, ಕಾರ್ತಿಕ್, ಮನೋಜ್, ರಶ್ಮಿ ಡಿ, ಅಮೋಘ ವರ್ಷ, ಸುಧೀಕ್ಷಾ, ಆಗಮ ಶಾಸ್ತ್ರೀ, ದೀಪಕ್, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ನಡೆಯಲಿದೆ.

ಇವರೆಲ್ಲರ ಪೈಕಿ ಡೈರೆಕ್ಟ್ ಆಗಿ ಫಿನಾಲೆಗೆ ಟಿಕೆಟ್ ಪಡೆಯಲಿರುವ ಆ ಒಬ್ಬ ಲಕ್ಕಿ ಸ್ಪರ್ಧಿ ಯಾರು ಎಂದು ಕಾದು ನೋಡಬೇಕಾಗಿದೆ. ಅಷ್ಟೇ ಅಲ್ಲದೇ, ಈ ವಾರ ನಡೆಯಲಿರುವ ಟಿಕೆಟ್ ಟು ಫಿನಾಲೆ ಸಂಚಿಕೆಗೆ ಮತ್ತಷ್ಟು ರಂಗು ನೀಡಲು ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಅವರು ಬರುತ್ತಿದ್ದಾರೆ. ಅವರಿಂದಾಗಿ ಸಂಚಿಕೆಯ ಮೆರುಗು ಹೆಚ್ಚಲಿದೆ.

ಇದನ್ನೂ ಓದಿ
ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್​ರಾಜ್​​ನಲ್ಲಿ ‘ಸೀತಾ ರಾಮ’ ತಂಡ
ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ನಟ

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ

ಶರಣ್ ಅವರ ಕಾಮಿಡಿ, ಅದಿತಿ ಪ್ರಭುದೇವ ಅವರ ಚಾರ್ಮ್ ‘ಟಿಕೆಟ್ ಟು ಫಿನಾಲೆ’ ಎಪಿಸೋಡ್​ನ ಕಲರ್​ಫುಲ್ ಮಾಡೋದು ಅಲ್ಲದೇ ಸ್ಪರ್ಧಿಗಳ ಹುಮ್ಮಸ್ಸನ್ನು ಹೆಚ್ಚಿಸಲಿದೆ. ಕಠಿಣ ಸ್ಪರ್ಧೆಯ ನಡುವೆಯೂ ಯಾರಿಗೆ ಸಿಗಲಿದೆ ‘ಟಿಕೆಟ್ ಟು ಫಿನಾಲೆ’? ಇದನ್ನು ತಿಳಿದುಕೊಳ್ಳಲು ಶನಿವಾರ ಮತ್ತು ಭಾನುವಾರ ಸಂಜೆ 7.30 ಕ್ಕೆ ‘ಸರಿಗಮಪ ಟಿಕೆಟ್ ಟು ಫಿನಾಲೆ’ ಸಂಚಿಕೆ ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.