ವೀಕೆಂಡ್​ನಲ್ಲಿ ಎಲಿಮಿನೇಷನ್ ಏಕೆ ನಡೆದಿಲ್ಲ? ಸುದೀಪ್ ಕೊಟ್ಟರು ಉತ್ತರ

|

Updated on: Jan 15, 2024 | 8:19 AM

ಕೊನೆಯಲ್ಲಿ ಉಳಿದುಕೊಂಡಿದ್ದು ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್. ಇವರಲ್ಲಿ ಒಬ್ಬರು ಹೋಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ.

ವೀಕೆಂಡ್​ನಲ್ಲಿ ಎಲಿಮಿನೇಷನ್ ಏಕೆ ನಡೆದಿಲ್ಲ? ಸುದೀಪ್ ಕೊಟ್ಟರು ಉತ್ತರ
ಸುದೀಪ್
Follow us on

ಈ ಸೀಸನ್​ನ ಬಿಗ್ ಬಾಸ್​ನಲ್ಲಿ (Bigg Boss) ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಈ ಕಾರಣಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಇನ್ನು ಮನೆಯಲ್ಲಿ ನಡೆಯುತ್ತಿರುವ ಡ್ರಾಮಾಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ಕಳೆದ ವೀಕೆಂಡ್ ಎಪಿಸೋಡ್​ಗೆ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದರು. ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದು ಹೇಳಿದ್ದರು. ಕೊನೆಯ ಕ್ಷಣದಲ್ಲಿ ಈ ರೀತಿಯ ಟ್ವಿಸ್ಟ್ ನೀಡಿದ್ದು ಏಕೆ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿತ್ತು. ಈ ಕುತೂಹಲವನ್ನು ಹೆಚ್ಚು ಮಾಡುವ ರೀತಿಯಲ್ಲಿ ಸುದೀಪ್ ಅವರು ಉತ್ತರಿಸಿ ಹೋಗಿದ್ದಾರೆ.

ಈ ವಾರ ಎಂಟು ಜನರ ಪೈಕಿ ಆರು ಜನರು ನಾಮಿನೇಟ್ ಆಗಿದ್ದರು. ನಮ್ರತಾ ಮೊದಲು ಸೇವ್ ಆದರೆ ಆ ಬಳಿಕ ವಿನಯ್ ಉಳಿದುಕೊಂಡರು. ಆ ಬಳಿಕ ತನಿಷಾ, ಆ ನಂತರ ಕಾರ್ತಿಕ್ ಸೇವ್ ಆದರು. ಈ ಮೂಲಕ ಕೊನೆಯಲ್ಲಿ ಉಳಿದುಕೊಂಡಿದ್ದು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್. ಇವರಲ್ಲಿ ಒಬ್ಬರು ಹೋಗಬಹುದು ಎಂದು ಎಲ್ಲರೂ ಭಾವಿಸಿದ್ದರು.

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಒಬ್ಬರನ್ನೊಬ್ಬರು ಇವರು ಬಿಟ್ಟಿರುವುದಿಲ್ಲ. ಇಬ್ಬರಲ್ಲಿ ಒಬ್ಬರು ಹೋಗಬೇಕು ಎಂದರೆ ನಿಜಕ್ಕೂ ಅದು ದುಃಖದ ವಿಚಾರವೇ. ಆದರೆ, ಬಿಗ್ ಬಾಸ್ ಇದಕ್ಕೆ ಅವಕಾಶ ನೀಡಿಲ್ಲ. ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದರು. ಇಬ್ಬರೂ ಹಗ್ ಮಾಡಿಕೊಂಡು ಜೋರಾಗಿ ಅತ್ತರು. ‘ಸುದೀಪ್ ಅವರೇ ನಿಮಗೆ ಕೋಟಿ ಕೋಟಿ ನಮನ’ ಎಂದರು ತುಕಾಲಿ ಸಂತೋಷ್.

ಇದನ್ನೂ ಓದಿ: ಫಿನಾಲೆ ಟಿಕೆಟ್ ವಿಚಾರದಲ್ಲಿ ಪ್ರತಾಪ್​ಗೆ ದ್ರೋಹ? ಬಿಗ್ ಬಾಸ್ ಘೋಷಣೆಯಲ್ಲೇ ಇತ್ತು ಸ್ಪಷ್ಟತೆ  

‘ಈ ವಾರ ಯಾರೂ ಮನೆಗೆ ಹೋಗ್ತಾ ಇಲ್ಲ. ಏಕೆ, ಏನು, ಏನು ವಿಷ್ಯ ಅನ್ನೋದು ಬರೋ ದಿನಗಳಲ್ಲಿ ಗೊತ್ತಾಗುತ್ತದೆ. ಮಾಡೋಕೆ ಸಾಕಷ್ಟು ಕೆಲಸ ಇದೆ ಅದನ್ನು ಮಾಡಿ’ ಎಂದರು ಸುದೀಪ್. ಪ್ರತಿ ಬಾರಿ ಬಿಗ್ ಬಾಸ್​ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮಾಡಲಾಗುತ್ತದೆ. ಮುಂದಿನ ವಾರಕ್ಕೆ ಈ ರೀತಿಯ ಟ್ವಿಸ್ಟ್ ನೀಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್ ಬಾಸ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:54 am, Mon, 15 January 24