
ಯಶ್ ಅವರು ‘ಕೆಜಿಎಫ್’ ಚಿತ್ರವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದರು. ಈ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡುವ ಆಲೋಚನೆ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ಗೆ ಇತ್ತು ಎನ್ನಲಾಗಿತ್ತು. ಆದರೆ, ಇದನ್ನು ದೊಡ್ಡ ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಯಶ್. ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ಅವರ ಕೆಲಸವನ್ನು, ಅವರು ಹಾಕಿದ ಶ್ರಮವನ್ನು ಎಲ್ಲರೂ ಹೊಗಳಲೇ ಬೇಕು.
ತೆಲುಗು ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿವೆ ನಿಜ. ಈ ಕಾರಣದಿಂದ ತೆಲುಗು ಚಿತ್ರರಂಗದಿಂದ ಒಂದು ದೊಡ್ಡ ಸಿನಿಮಾ ಬರುತ್ತದೆ ಎಂದರೆ ಅದನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಅನೇಕರು ಕಾದಿರುತ್ತಾರೆ. ಆದರೆ, ‘ಕೆಜಿಎಫ್’ಗೂ ಮೊದಲು ಆ ರೀತಿ ಇರಲಿಲ್ಲ. ಅನೇಕರಿಗೆ ಕನ್ನಡದ ಸಿನಿಮಾಗಳ ಬಗ್ಗೆ ಗೊತ್ತೇ ಇರಲಿಲ್ಲ.
ಯಶ್ ಕೆಜಿಎಫ್ನ ಪ್ಯಾನ್ ಇಂಡಿಯಾ ಮಾಡ್ತೀನಿ ಎಂದು ಹೋದಾಗ, ಸೇಲ್ಸ್ಮೆನ್ ರೀತಿ ನೋಡುತ್ತಿದ್ದರಂತೆ. ಆದರೆ, ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ಖ್ಯಾತಿ ಅವರಿಗೆ ಇದೆ. ಆಗ ಎದುರಾದ ಸಮಸ್ಯೆಗಳ ಬಗ್ಗೆ ಹೇಳಿದ್ದರು. ‘ಕೆಜಿಎಫ್ನ ಪ್ಯಾನ್ ಇಂಡಿಯಾ ಎಂದು ತೆಗೆದುಕೊಂಡು ಹೋದಾಗ, ಸೇಲ್ಸ್ ಮೆನ್ ಬಂದಾಗ ಬೇಡ ನಮಗೆ ಅಂತಾರಲ್ಲ ಆ ರೀತಿ ಬೇಡ ಅಂತಿದ್ರು. ಕ್ರೆಡಿಟ್ ಕಾರ್ಡ್ಗೆ ಕರೆ ಮಾಡಿದ ತರ ಫೀಲ್. ಆದರೆ, ಈಗ ಮೆಂಬರ್ಶಿಪ್ ತರ ಈಗ ಕೇಳ್ತಾ ಇದಾರೆ’ ಎಂದು ಯಶ್ ಹೇಳಿದ್ದರು.
ಇದನ್ನೂ ಓದಿ: ‘ಕಾಂತಾರ’ ಕಲೆಕ್ಷನ್: ನಂಬರ್ 1 ಆಗಲು ಇಡಬೇಕಿರುವುದು ಕೆಲವೇ ಹೆಜ್ಜೆ
ಇದು ನಿಜವಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಗಮನ ಸೆಳೆದಿದೆ. ಇಷ್ಟೇ ಅಲ್ಲ, ‘ಸು ಫ್ರಮ್ ಸೋ’ ಹೆಸರಿನ ಸಾಧಾರಣ ಬಜೆಟ್ ಚಿತ್ರ ಕೂಡ 100 ಕೋಟಿ ರೂಪಾಯಿ ಗಳಿಸಿದೆ. ಇದಕ್ಕೆಲ್ಲ ಕಾರಣ ಆಗಿದ್ದು, ಪ್ಯಾನ್ ಇಂಡಿಯಾ ಎಂಬ ಕಾನ್ಸೆಪ್ಟ್. ಇದಕ್ಕೆ ಯಶ್ ಅವರು ಬುನಾದಿ ಹಾಕಿದ್ದಾರೆ ಎಂದರೂ ತಪ್ಪಾಗಲಾರದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.