
‘ಬಿಗ್ ಬಾಸ್’ (Bigg Boss) ಶೋಗಳಲ್ಲಿ ಫಿಲ್ಟರ್ ಬಳಕೆ ಆಗೋದು ತುಂಬಾನೇ ಕಡಿಮೆ. ಕ್ಯಾಮೆರಾ, ಮೈಕ್ ಇದೆ ಎಂಬ ಪ್ರಜ್ಞೆ ಯಾರಿಗೂ ಇರೋದಿಲ್ಲ. ಹೀಗಾಗಿ, ಮನಸ್ಸಿಗೆ ಅನಿಸಿದ್ದನ್ನು ಹೇಳುತ್ತಾರೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಹಾಗೂ ಅಭಿಷೇಕ್ ಮಧ್ಯೆ ನಡೆದ ಸಂಭಾಷಣೆ ಚರ್ಚೆಗೆ ಕಾರಣ ಆಗಿದೆ. ‘ನೀವು ಆಂಟಿ ಲವರ್ ಆ’ ಎಂದು ಜಾನ್ವಿ ಅವರು ಅಭಿಷೇಕ್ಗೆ ಕೇಳಿದ್ದಾರೆ.
ಅಭಿಷೇಕ್ ಹಾಗೂ ಅಶ್ವಿನಿ ಜಂಟಿ ಆಗಿದ್ದಾರೆ. ಅಶ್ವಿನಿ ಜೊತೆ ಅಭಿಷೇಕ್ ಆಗಾಗ ಫ್ಲರ್ಟ್ ಮಾಡೋದು ಎದ್ದು ಕಾಣುತ್ತದೆ. ಅಭಿಷೇಕ್ ಅವರು ‘ನಿನ್ನಿಂದಲೇ..’ ಹಾಡನ್ನು ಹಾಡುತ್ತಿದ್ದರು. ಆಗ ಅಶ್ವಿನಿ ಅವರು, ‘ಜಾನ್ವಿ ನಿಮಗಾಗಿ ಹಾಡು ಹಾಡುತ್ತಿದ್ದಾರೆ ನೋಡಿ’ ಎಂದರು. ‘ನೀವು ನನ್ನಂತೆ ಎಷ್ಟು ಜನರಿಗೆ ಇದೇ ರೀತಿ ಹಾಡು ಹಾಡಿದ್ದೀರಿ’ ಎಂದು ಜಾನ್ವಿ ಪ್ರಶ್ನೆ ಮಾಡಿದರು. ‘ನಿಮಗಾಗಿ ಮಾತ್ರ ಹೇಳೋದು’ ಎಂದು ಅಭಿಷೇಕ್ ಉತ್ತರಿಸಿದರು.
ಆಗ ವಯಸ್ಸಿನ ವಿಚಾರ ಚರ್ಚೆಗೆ ಬಂತು. ಅಭಿಷೇಕ್ ತಮಗೆ 29 ವರ್ಷ ಎಂದರು. ‘ನಿಮಗಿಂತ ನಾನು 10 ವರ್ಷ ದೊಡ್ಡವಳು. ನಿಮಗೆ ದೊಡ್ಡವರೆಂದರೆ ಇಷ್ಟವೇ?’ ಎಂದು ಕೇಳಿದರು ಜಾನ್ವಿ. ‘ಹೌದು ನನಗೆ ದೊಡ್ಡವರು ಎಂದರೆ ಇಷ್ಟ’ ಎಂದರು ಅಭಿ. ಇದಕ್ಕೆ ಜಾನ್ವಿ, ‘ನೀವು ಆಂಟಿ ಲವರ್ ಆ’ ಎಂದು ಕೇಳಿದರು.
ಇದನ್ನೂ ಓದಿ: ‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಆ್ಯಂಕರ್ ಜಾನ್ವಿ
ಆ ಬಳಿಕ ಅಭಿಷೇಕ್ ಅವರು ನೀವು ಆಂಟಿ ಎಂದು ಒಪ್ಪಿಕೊಳ್ತೀರಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಜಾನ್ವಿ, ‘ನಾನು ಆಂಟಿ ಅಲ್ಲ, ಆದರೆ, ಈ ವಯಸ್ಸಿನವರಿಗೆ ಹೊರಗಿನ ಸಮಾಜ ಹಾಗೆಯೇ ಕರೆಯುತ್ತದೆ. ನಾನು ಆಂಟಿ ತರ ಕಾಣದೇ ಇರುವಂತೆ ನನ್ನ ಬಾಡಿಯನ್ನು ನೋಡಿಕೊಂಡಿದ್ದೇನೆ’ ಎಂದರು. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.