
ಜೀ ಕನ್ನಡ ವಾಹಿನಿಯು ಹೊಸ ಹೊಸ ಧಾರಾವಾಹಿಗಳು ಹಾಗೂ ಶೋಗಳನ್ನು ಪ್ರೇಕ್ಷಕರ ಎದುರು ಇಡುತ್ತಲೇ ಬರುತ್ತಿದೆ. ಈಗ ಜೀ ಕನ್ನಡದಲ್ಲಿ ಸಾಕಷ್ಟು ಉತ್ತಮ ಧಾರಾವಾಹಿಗಳು ಪ್ರಸಾರ ಕಾಣುತ್ತಿದ್ದು, ಟಿಆರ್ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಳ್ಳುತ್ತಿವೆ. ಹೀಗಿರುವಾಗಲೇ ಎರಡು ಹೊಸ ಧಾರಾವಾಹಿಗಳು ಪ್ರಸಾರ ಕಾಣಲು ರೆಡಿ ಆಗಿವೆ. ಆ ಧಾರಾವಾಹಿಗಳು ಯಾವವು? ಮುಗಿಯುವ ಧಾರಾವಾಹಿಗಳು ಯಾವವು ಎಂಬುದನ್ನು ಇಲ್ಲಿ ನೋಡೋಣ.
ಜೀ ಕನ್ನಡ ವಾಹಿನಿಯು ಎರಡು ಹೊಸ ಧಾರಾವಾಹಿಗಳ ಪ್ರೋಮೋನ ಹಂಚಿಕೊಂಡಿದೆ. ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು. ಇದರಲ್ಲಿ ಯಾರು ನಟಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿ ರಿವೀಲ್ ಆಗಿಲ್ಲ. ಜಗದ್ಧಾತ್ರಿ ಹೆಸರಿನ ಧಾರಾವಾಹಿ ಕೂಡ ಬರುತ್ತಿದೆ. ಈ ಧಾರಾವಾಹಿ ಪ್ರೋಮೋಗೆ ‘ಇವಳು ಮನೆ ಬೆಳಗೋ ದೀಪವೂ ಹೌದು, ಅಧರ್ಮಕ್ಕೆ ಅಂತ್ಯ ಹಾಡೋ ಜ್ವಾಲೆಯೂ ಹೌದು’ ಎಂಬ ಕ್ಯಾಪ್ಶನ್ ನೀಡಲಾಗಿದೆ. ಈ ಧಾರಾವಾಹಿಯಲ್ಲಿ ಮಹಿಳೆ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದು ಹೊಸ ರೀತಿಯ ಪ್ರಯೋಗ ಇದ್ದರೂ ಇರಬಹುದು ಎನ್ನಲಾಗುತ್ತಿದೆ.
ಇನ್ನು, ಎರಡು ಧಾರಾವಾಹಿಗಳು ಪೂರ್ಣಗೊಳ್ಳುತ್ತಿವೆ ಎಂದಾಗ ಎರಡು ಹೊಸ ಧಾರಾವಾಹಿಗಳು ಪೂರ್ಣಗೊಳ್ಳಬಹುದು. ಅವು ಯಾವವವು ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ‘ಅಮೃತಧಾರೆ’ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತ ತಲುಪೋ ರೀತಿ ಕಾಣುತ್ತಿದೆ. ಗೌತಮ್ ಹಾಗೂ ಭೂಮಿಕಾ ಒಂದಾಗಿ ಆಗಿದೆ. ಇನ್ನು, ಜಯದೇವ್ ಹಾಗೂ ತಂಡಕ್ಕೆ ಪಾಠ ಕಲಿಸಿದರೆ ಮುಗಿಯಿತು. ಹೀಗಾಗಿ, ಧಾರಾವಾಹಿ ಪೂರ್ಣಗೊಳ್ಳುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ
‘ಪುಟ್ಟಕ್ಕನ್ನ ಮಕ್ಕಳು’ ಧಾರಾವಾಹಿ ಕೂಡ ಪ್ರಸಾರ ಆರಂಭಿಸಿ ಹಲವು ವರ್ಷಗಳು ಕಳೆದಿವೆ. ಸಾವಿರಾರು ಎಪಿಸೋಡ್ ಪ್ರಸಾರಕಂಡಿದೆ. ಈ ಕಾರಣದಿಂದ ಈ ಧಾರಾವಾಹಿ ಕೂಡ ಪೂರ್ಣಗೊಂಡರೂ ಅಚ್ಚರಿ ಏನಿಲ್ಲ ಬಿಡಿ. ಹೀಗಾಗಿ. ಇದೆರಡು ಧಾರಾವಾಹಿಗಳು ಕೊನೆಗೊಳ್ಳಬಹುದು ಎಂಬುದು ಅನೇಕರ ಊಹೆ. ಈ ಬಗ್ಗೆ ವಾಹಿನಿ ಕಡೆಯಿಂದ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:50 am, Tue, 27 January 26