ಮನು ಭಾಕರ್ ಅವರು ಮೂಲತಃ ಹರಿಯಾಣದವರು. ಅವರಿಗೆ ಇನ್ನೂ 22 ವರ್ಷ ವಯಸ್ಸು. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಈ ವರ್ಷ ನಡೆದ ಒಲಂಪಿಕ್ನಲ್ಲಿ ಶೂಟಿಂಗ್ ವಿಭಾಗದಲ್ಲಿ ಅವರು ಭಾರತಕ್ಕೆ ಎರಡು ಪದಕ ತಂದುಕೊಟ್ಟಿದ್ದಾರೆ. ಅವರು ಈಗ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ. ‘ದಳಪತಿ ವಿಜಯ್ ಡಾರ್ಲಿಂಗ್’ ಎಂದು ಅವರು ಪ್ರೀತಿಯಿಂದ ಕರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ಮನು ಭಾಕರ್ ಅವರು ಚೆನ್ನೈಗೆ ತೆರಳಿದ್ದರು. ಅಲ್ಲಿ ಅವರನ್ನು ಗೌರವಿಸಲಾಗಿದೆ. ತಮಿಳುನಾಡಿನ ಅನೇಕ ಸೆಲೆಬ್ರಿಟಿಗಳ ಬಗ್ಗೆ ಅವರಿಗೆ ಕೇಳಲಾಗಿದೆ. ಆದರೆ, ಅವರನ್ನು ಪತ್ತೆ ಹಚ್ಚೋಕೆ ಅವರಿಗೆ ಸಾಧ್ಯವಾಗಿಲ್ಲ. ಆದರೆ ದಳಪತಿ ವಿಜಯ್ ಅವರ ಪರಿಚಯ ಮನು ಭಾಕರ್ಗೆ ಇತ್ತು. ವಿಜಯ್ ಅವರ ಹೆಸರು ಹೇಳುತ್ತಿದ್ದಂತೆ ಅವರು ನಕ್ಕಿದ್ದಾರೆ. ‘ಅವರು ಡಾರ್ಲಿಂಗ್’ ಎಂದು ಕರೆದಿದ್ದಾರೆ. ಇದು ದಳಪತಿ ವಿಜಯ್ ಅವರ ಜನಪ್ರಿಯತೆಗೆ ಹಿಡಿದ ಸಾಕ್ಷಿ.
ದಳಪತಿ ವಿಜಯ್ ಅವರು ಅನೇಕರ ಫೇರವರಿಟ್ ಎನಿಸಿಕೊಂಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಬಗ್ಗೆ ಅನೇಕರಿಗೆ ತಿಳಿದಿದೆ. ಅವರ ಜೊತೆ ನಟಿಸಬೇಕು ಎನ್ನುವ ಆಸೆಯನ್ನು ಅನೇಕರು ವ್ಯಕ್ತಪಡಿಸಿದ್ದೂ ಇದೆ. ಆದರೆ, ಎಲ್ಲರಿಗೂ ಈ ಅವಕಾಶ ಸಿಕ್ಕಿಲ್ಲ.
Wanna know how Anil doing exaggeration? 👇
Media: do you know our amous actor Vijay madam.
She: Yeah & laughingVijay fans: Do u know Superstar THALAPATHY VIJAY
Her reply by Vijay fans perspective :Yes He’s Darling“Find the difference” SUPER PRO work. pic.twitter.com/Nr9kztcNNc pic.twitter.com/GXOBqR38Ki
— Daemon (@k3_butcher) August 21, 2024
ಇದನ್ನೂ ಓದಿ: ‘ಎಷ್ಟೇ ವಯಸ್ಸಾದರೂ ಸಿಂಹ ಎಂದಿಗೂ ಸಿಂಹ’: ಅಬ್ಬರಿಸಲು ಸಜ್ಜಾದ ದಳಪತಿ ವಿಜಯ್
ದಳಪತಿ ವಿಜಯ್ ಅವರು ಸದ್ಯ ‘ಗೋಟ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಸೆಪ್ಟೆಂಬರ್ 5ರಂದು ರಿಲೀಸ್ ಆಗಲಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ದಳಪತಿ ವಿಜಯ್ ಅವರು ಎರಡು ಪಾರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:51 am, Wed, 21 August 24